ಇವು 2021ರ ಕೊನೆ ದಿನ ಬಿಡುಗಡೆ ಆಗುತ್ತಿರುವ ಕೊನೆಯ 3 ಕನ್ನಡ ಸಿನಿಮಾ

ಡಿಸೆಂಬರ್ ಸ್ಯಾಂಡಲ್‌ವುಡ್‌ಗೆ ಅದೃಷ್ಟದ ತಿಂಗಳು. ಈ ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿವೆ. ಅದೆಷ್ಟೋ ಸಿನಿಮಾಗಳು ಹೊಸ ದಾಖಲೆಗಳನ್ನೇ ಬರೆದಿವೆ. ನಿರ್ಮಾಪಕರ ಜೇಬು ತುಂಬಿ ತುಳುಕಿದೆ. ಸ್ಟಾರ್ ಆಗಿದ್ದವರು ಸೂಪರ್‌ಸ್ಟಾರ್ ಆಗಿದ್ದಾರೆ. ಹೀಗಾಗಿ ಇದೇ ತಿಂಗಳು ಸಿನಿಮಾ ಬಿಡುಗಡೆ ಮಾಡುವುದಕ್ಕೆ ಕನ್ನಡದ ನಿರ್ಮಾಪಕರು ಕಾದು ಕೂತಿರುತ್ತಾರೆ.

ದಾಖಲೆ ಬರೆಯಲಿರುವ ಸಿನಿಮಾಗಳನ್ನು ಮುಂದಿಟ್ಟುಕೊಂಡು ಲೆಕ್ಕ ಹಾಕುತ್ತಿರುತ್ತೆ ಸ್ಯಾಂಡಲ್‌ವುಡ್. ಈ ಬಾರಿ ಕೂಡ ಡಿಸೆಂಬರ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲಿವೆ. ಶ್ರೀಮುರಳಿಯ 'ಮದಗಜ' ದಿಂದ ಕೊನೆ ತಿಂಗಳ ಆಟ ಶುರುವಾಗಿದೆ. ಆದರೆ, 2021ರಲ್ಲಿ ಕೊನೆಯದಾಗಿ ಬಿಡುಗಡೆಯಾಗುವ ಸಿನಿಮಾಗಳ ಮೇಲೂ ಕನ್ನಡ ಚಿತ್ರರಂಗ ಕಣ್ಣಿಟ್ಟಿದೆ. ಸದ್ಯಕ್ಕೀಗ ಮೂರು ಸಿನಿಮಾಗಳು ಬಿಡುಗಡೆ ದಿನವನ್ನು ಕನ್ಫರ್ಮ್ ಮಾಡಿವೆ. ಆ ಮೂರು ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.

ಡಿಸೆಂಬರ್ 31ಕ್ಕೆ ರಚಿತಾರಾಮ್ 'ಲವ್ ಯು ರಚ್ಚು'

ಡಿಸೆಂಬರ್ 31ಕ್ಕೆ ರಚಿತಾರಾಮ್ 'ಲವ್ ಯು ರಚ್ಚು'

'ಲವ್ ಯು ರಚ್ಚು' ಈ ವರ್ಷ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾಗಳಲ್ಲೊಂದು. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅಜೇಯ್ ರಾಮ್ ಜೋಡಿಯಾಗಿ ಇದೇ ಮೊದಲ ಬಾರಿಗೆ ನಟಿಸಿದ ಸಿನಿಮಾ. ಅಜೇಯ್ ರಾಮ್ ರೊಮ್ಯಾಂಟಿಕ್ ಮೂಡಿನಲ್ಲಿ ಹಾಡಿರುವ 'ಓಯ್ ಡಿಂಪಲ್ ಡಿಂಪಲ್ ಹುಡುಗಿ, ನಿನ್ನ ಡಾರ್ಲಿಂಗ್ ಅನ್ಬೋದಾ. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ' ಅಂತ ಹಾಡಲು ಶುರು ಮಾಡಿದ್ದಾರೆ. ಈ ಹಾಡು ಕೇಳುತ್ತಿದ್ದಂತೆ ಪಡ್ಡೆ ಹುಡುಗ ಕಿವಿ ನೆಟ್ಟಗಾಗಿದೆ. ಮುದ್ದಾದ ದಂಪತಿಯ ಕಥೆಯೊಂದನ್ನು ಹೇಳಲು ಹೊರಟಿದೆ ಚಿತ್ರತಂಡ. ಶಶಾಂಕ್ ಕಥೆ ಬರೆದಿದ್ದರೆ, ಇತ್ತ ಶಂಕರ್ ರಾಜ್ ಸಿನಿಮಾ ನಿರ್ದೇಶಿಸಿದ್ದಾರೆ. ಗುರುದೇಶಪಾಂಡೆ ನಿರ್ಮಾಣ, ಮಣಿಕಾಂತ್ ಕದ್ರಿ ಸಂಗೀತವಿದೆ.

ವಿವಾದಗಳಿಗೆ ಸಿಲುಕಿದ್ದ ಸಿನಿಮಾ 'ಲವ್ ಯು ರಚ್ಚು'

ವಿವಾದಗಳಿಗೆ ಸಿಲುಕಿದ್ದ ಸಿನಿಮಾ 'ಲವ್ ಯು ರಚ್ಚು'

ಲವ್ ಯು ರಚ್ಚು ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಫೈಟರ್​ ವಿವೇಕ್​ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಈ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು. ಸಿನಿಮಾ ತಂಡದ ತಂತ್ರಜ್ಞರು ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿತ್ತು. ಇನ್ನೊಂದು ಮುದ್ದು ನೀನು ಹಾಡು ಬಿಡುಗಡೆ ವೇಳೆ ಸ್ವತಃ ರಚಿತಾ ರಾಮ್ ವಿವಾದ ಸೃಷ್ಟಿಸಿದ್ದರು. 'ಫಸ್ಟ್‌ನೈಟ್‌ನಲ್ಲಿ ಎಲ್ಲರೂ ಏನ್ ಮಾಡ್ತಾರೆ' ಅಂತ ಪ್ರಶ್ನೆ ಮಾಡಿ ವಿವಾದಕ್ಕೆ ಒಳಗಾಗಿದ್ದರು. ಇದೇ ಸಿನಿಮಾ ಡಿಸೆಂಬರ್ 31ಕ್ಕೆ ಈ ವರ್ಷದ ಕೊನೆಯ ಸಿನಿಮಾಗಳಲ್ಲಿ ಒಂದಾಗಿ ಬಿಡುಗಡೆಯಾಗಲಿದೆ.

ದೂದ್ ಪೇಡಾ 'ಹುಟ್ಟುಹಬ್ಬದ ಶುಭಾಶಯಗಳು'

ದೂದ್ ಪೇಡಾ 'ಹುಟ್ಟುಹಬ್ಬದ ಶುಭಾಶಯಗಳು'

'ಹುಟ್ಟುಹಬ್ಬದ ಶುಭಾಶಯಗಳು' 2021ರಲ್ಲಿ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾಗಳಲ್ಲಿ ಮತ್ತೊಂದು. ದೂದ್ ಪೇಡಾ ದಿಗಂತ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿಯೇ ಈ ಸಿನಿಮಾ ಸೆಟ್ಟೇರಿತ್ತು. ಅಲ್ಲಿಂದ ಸಿನಿಮಾ ಟೀಸರ್ ಆಗುವವರೆಗೂ ಹುಟ್ಟುಹಬ್ಬದ ಶುಭಾಶಯಗಳು ಬಗ್ಗೆ ಮಾಹಿತಿನೇ ಇರಲಿಲ್ಲ. ಹಾಗೆಯೇ ಈಗ ಸೈಲೆಂಟಾಗಿ ಡಿಸೆಂಬರ್ 31ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕ ಚಂದ್ರಶೇಖರ್ ಅನೌನ್ಸ್ ಮಾಡಿದ್ದಾರೆ. ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ದಿಗಂತ್ ಜೊತೆ ಕವಿತಾ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಿರ್ದೇಶಕ ನಾಗರಾಜ ಬೇತೂರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಡಿ.31ಕ್ಕೆ ಯೋಗಿಯ '9ನೇ ದಿಕ್ಕು'

ಡಿ.31ಕ್ಕೆ ಯೋಗಿಯ '9ನೇ ದಿಕ್ಕು'

ಕನ್ನಡ ಚಿತ್ರರಂಗಕ್ಕೆ ಡಿಫ್ರೆಂಟ್ ಸಿನಿಮಾಗಳನ್ನು ನೀಡಿರುವ ದಯಾಳ್ ಪದ್ಮನಾಭನ್ ನಿರ್ಮಿಸಿ, ನಿರ್ದೇಶಿಸಿರುವ 'ಒಂಭತ್ತನೇ ದಿಕ್ಕು'. ಈ ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುನಿ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈಗಾಗಲೇ ದರ್ಶನ್ ಧ್ವನಿ ನೀಡಿರುವ ಟೀಸರ್ ಬೇಜಾನ್ ಸದ್ದು ಮಾಡುತ್ತಿದೆ.

More from Filmibeat

English summary
December 31st three kannada movies will be releasing as year end cinema. Rachita Ram Ajay Rao film Love You Rachchu, Diganth acted Huttuhabbada Shubhashayagalu, Loose mada Yogi 9ne dikku releasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X