ಟ್ರೈಲರ್ ರಿಲೀಸ್ ಮಾಡಿ ದಿಗಂತ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದ ಉಪೇಂದ್ರ

ದೂದ್ ಪೇಡಾ ದಿಗಂತ್ ಅಭಿನಯದ 'ಹುಟ್ಟುಹಬ್ಬದ ಶುಭಾಶಗಳು' ಸಿನಿಮಾ ಸದ್ದಿಲ್ಲದೆ ಬಿಡುಗಡೆ ಸಜ್ಜಾಗುತ್ತಿದೆ. ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಕೂಡ ಒಂದು. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್‌ ಬ್ಯಾನರ್‌ನ ಟಿ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ದಿಗಂತ್ ನಾಯಕರಾಗಿ ನಟಿಸಿರುವ "ಹುಟ್ಟುಹಬ್ಬದ ಶುಭಾಶಯಗಳು" ಸಿನಿಮಾದ ಟ್ರೈಲರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಒಂದು ವಾರವಿದೆ ಅನ್ನುವಾಗಲೇ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದು, ಕುತೂಹಲವನ್ನು ಕೆರಳಿಸುತ್ತಿದೆ. ಅದರಲ್ಲೂ ರಿಯಲ್‌ಸ್ಟಾರ್ ಉಪೇಂದ್ರ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದು, ದಿಗಂತ್ ಫ್ಯಾನ್ಸ್‌ಗಳಲ್ಲಿ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ.

ನಿಜವಾದ ಬುದ್ಧಿವಂತರು ಈ ಸಿನಿಮಾದ ನಿರ್ಮಾಪಕರು

ದಿಗಂತ್ ನಟನೆಯ 'ಹುಟ್ಟುಹಬ್ಬದ ಶುಭಾಶಯಗಳು' ಸಿನಿಮಾ ನಿರ್ಮಾಣ ಮಾಡಿದ ಟಿ.ಆರ್ ಚಂದ್ರಶೇಖರ್ ಅವರೇ ಉಪ್ಪಿ ನಟನೆ 'ಬುದ್ಧಿವಂತ 2' ಸಿನಿಮಾವನ್ನು ನಿರ್ಮಿಸಿದ್ದಾರೆ. ಹೀಗಾಗಿ ದಿಗಂತ್ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ಆಗಮಿಸಿದ್ದರು. " ನಾನು ಈ ಸಂಸ್ಥೆಯ "ಬುದ್ದಿವಂತ 2" ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಈ ಚಿತ್ರದ ನಿರ್ಮಾಪಕರು. ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ಅದಕ್ಕೂ ಮುನ್ನ ಇಪ್ಪತ್ತೆಂಟರಂದು ನಾಯಕ ದಿಗಂತ್ ಹುಟ್ಟುಹಬ್ಬ.‌ ಅವರಿಗೂ ಹಾಗೂ ಚಿತ್ರಕ್ಕೂ ಒಳ್ಳೆಯದಾಗಲಿ" ಎಂದು ಉಪೇಂದ್ರ ಶುಭ ಹಾರೈಸಿದರು."

Diganth Starrer Huttuhabbada shubashayagalu trailer launched by Upendra

'ಹುಟ್ಟುಹಬ್ಬದ ಶುಭಾಶಗಳು' ಸಿನಿಮಾವನ್ನು ಡಿಸೆಂ‍ಬರ್‌ನಲ್ಲಿಯೇ ಬಿಡುಗಡೆ ಮಾಡಲು ಕಾರಣವಿದೆ. ಇದೇ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಮೊದಲ ಸಿನಿಮಾ 'ಚಮಕ್' ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಿತ್ತು. ಗಣೇಶ್ ಅಭಿನಯದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಹೀಗಾಗಿ ಡಿಸೆಂಬರ್ ತಿಂಗಳು ಲಕ್ಕಿ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ನಮ್ಮ ಸಿನಿಮಾಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ

'ಹುಟ್ಟುಹಬ್ಬದ ಶುಭಾಶಗಳು' ಸಿನಿಮಾವನ್ನು ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ನಾಗರಾಜ್ ಬೆತ್ತುರ್ ನಿರ್ದೇಶಿಸಿದ್ದಾರೆ. ಈ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಟ್ರೈಲರ್ ಸಿನಿಪ್ರಿಯರಿಗೆ ಇಷ್ಟ ಆಗುತ್ತೆ ಎನ್ನುವ ನಂಬಿಕೆಯಲ್ಲಿದ್ದಾರೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್. ಇದೇ ವೇಳೆ ಕರ್ನಾಟಕದಲ್ಲಿ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ಮೊದಲು ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ದೊರಕುವಂತೆ ಮಾಡಿ ಅಂತ ನಿರ್ಮಾಪಕ ನಂದಕಿಶೋರ್ ಮನವಿ ಮಾಡಿಕೊಂಡಿದ್ದಾರೆ.

Diganth Starrer Huttuhabbada shubashayagalu trailer launched by Upendra

ಇದು ನಿರ್ದೇಶಕ ನಾಗರಾಜ್ ಬೆತ್ತುರ್ ಅವರ ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ಸಿನಿಮಾದ ಕಥೆ ಬಗ್ಗೆ ಹೆಚ್ಚು ರಿವೀಲ್ ಮಾಡಿಲ್ಲ. ಇನ್ನು ಉಪೇಂದ್ರ ಅವರದ್ದೇ ನಿರ್ದೇಶನದ ಸಿನಿಮಾವೊಂದರ ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಹೀಗಾಗಿ ಬ್ಯುಸಿಯಿದ್ದರೂ, ದಿಗಂತ್ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಿದ್ದರು. ಉಪ್ಪಿ ಬಂದು ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಕ್ಕೆ ದೂದ್ ಪೇಡಾ ದಿಗಂತ್ ಧನ್ಯವಾದಗಳನ್ನು ತಿಳಿಸಿದರು. ದಿಗಂತ್‌ಗೆ ನಾಯಕಿಯಾಗಿ ಕವಿತಾ ಗೌಡ, ಶರಣ್ಯ ಶೆಟ್ಟಿ, ಮನು ನಟಿಸಿದ್ದಾರೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ.

{document1}

More from Filmibeat

English summary
Diganth Starrer Huttuhabbada shubashayagalu trailer launched by Upendra. Huttuhabbada Shubashayagalu will release on december 31st
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X