'ಎಡಗೈ ಅಪಘಾತಕ್ಕೆ ಕಾರಣ': ದೂದ್ ಪೇಡಾ ದಿಗಂತ್ ಹೊಸ ಸಿನಿಮಾ ಆರಂಭ!
ದೂದ್ ಪೇಡಾ ದಿಗಂತ್ 'ಗಾಳಿಪಟ 2' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬಹಳ ದಿನಗಳ ಬಳಿಕ ದಿಗಂತ್‌ಗೆ ಮತ್ತೆ ಸಕ್ಸಸ್ ಸಿಕ್ಕಿದೆ. ಇದೇ ಬೆನ್ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಅದುವೇ 'ಎಡಗೈ ಅಪಘಾತಕ್ಕೆ ಕಾರಣ'.
ಗಾಳಿಪಟ-2 ಭರ್ಜರಿ ಯಶಸ್ಸಿನ ಬಳಿಕ ದೂದ್ ಪೇಡ್ ದಿಗಂತ್ 'ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ' ಸಿನಿಮಾಗೆ ಚಾಲನೆ ನೀಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ವಿಶ್ವ ಎಡಚರ ದಿನದಂದೇ ಅನೌನ್ಸ್ ಆಗಿತ್ತು. ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ಹಾಗೂ ಟೈಟಲ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಅದೇ ತಂಡವೀಗ ಸಿನಿಮಾ ಮುಹೂರ್ತವನ್ನು ಮಾಡಿದೆ.

ಅಂದ್ಹಾಗೆ 'ಎಡಗೈ ಅಪಘಾತಕ್ಕೆ ಕಾರಣ' ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಜೊತೆಗೆ ಡ್ರಾರ್ಕ್ ಕಾಮಿಡಿ ಕೂಡ ಇರುತ್ತೆ. ಟೈಟಲ್ ವಿಭಿನ್ನವಾಗಿರುವಂತೆ ಕಥೆ ಕೂಡ ಸ್ಯಾಂಡಲ್‌ವುಡ್‌ಗೆ ಹೊಸದು. ಹೀಗಾಗಿ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ.
'ಎಡಗೈ ಅಪಘಾತಕ್ಕೆ ಕಾರಣ' ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ನಿರ್ದೇಶಿಸಿದ್ದ ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ದಿಗಂತ್‌ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸುತ್ತಿದ್ದಾರೆ. 'ಎಡಗೈ ಅಪಘಾತಕ್ಕೆ ಕಾರಣ' ಇಂದು ( ಸೆಪ್ಟೆಂಬರ್ 9) ಮುಹೂರ್ತ ಮಾಡಿ ಶೂಟಿಂಗ್‌ಗೆ ಚಾಲನೆಯನ್ನೂ ನೀಡಿದೆ. ಇಂದಿನಿಂದ ಬೆಂಗಳೂರಿನಲ್ಲಿ ಹಲವೆಡೆ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.
'ಎಡಗೈ ಅಪಘಾತಕ್ಕೆ ಕಾರಣ' ಹೆಸರೇ ಹೇಳುವಂತೆ ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿರಂದೇ ಮಾಡಲಾಗಿದೆ. ಆದರೆ ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇರೋದ್ರಿಂದ ಅನುಕೂಲ ಕಡಿಮೆ. ಇದರಿಂದ ಎಡ್‌ಗೈ ಬಳಸುವವರಿಗೆ ಒಂದಷ್ಟು ತೊಂದರೆಗಳು ಆಗುತ್ತಿವೆ. ಅಂತಹದ್ದೇ ಕಥೆ ಇದಾಗಿದ್ದು ಕಥೆ ಇಂಟ್ರೆಸ್ಟಿಂಗ್ ಆಗಿದೆ.


Click it and Unblock the Notifications











