42ನೇ ವಯಸ್ಸಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ 'ದಿಗ್ಗಜರು' ಚಿತ್ರದ ನಟಿ

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸಾಂಘವಿ 39ನೇ ವಯಸ್ಸಿನಲ್ಲಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರನ್ನು ಮದುವೆಯಾಗಿದ್ದರು. ನಾಲ್ಕು ವರ್ಷದ ಬಳಿಕ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

Recommended Video

ಓಂ ಚಿತ್ರದ ರಿಲೀಸ್ ಗಾಗಿ ರೌಡಿಸಂ ನ್ನೇ ಬಿಟ್ಟಿದ್ರಂತೆ ರಿಯಲ್ ರೌಡಿಗಳು..ಯಾಕೆ ಗೊತ್ತಾ? | Jedrahalli Krishnappa

ಮೈಸೂರಿನವರಾದ ಸಾಂಘವಿ ಅವರ ಮೂಲ ಹೆಸರು ಕಾವ್ಯಾ ರಮೇಶ್. 1993ರಲ್ಲಿ ಅವರು ಅಜಿತ್ ನಾಯಕರಾಗಿದ್ದ ತಮಿಳು ಚಿತ್ರ ಅಮರಾವತಿ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಸುಮಾರು 15 ವರ್ಷದ ಸಿನಿ ಜೀವನದಲ್ಲಿ ಅವರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. 2008ರಲ್ಲಿ ದರ್ಶನ್ ನಾಯಕರಾಗಿರುವ 'ಇಂದ್ರ' ಚಿತ್ರದಲ್ಲಿ ನಟಿಸಿದ್ದ ಅವರು 11 ವರ್ಷದ ನಂತರ ತಮಿಳಿನ 'ಕೊಲಂಜಿ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಓದಿ...

ಹೆಣ್ಣುಮಗುವಿನ ಸಂಭ್ರಮ

ಹೆಣ್ಣುಮಗುವಿನ ಸಂಭ್ರಮ

2016ರ ಫೆ. 3ರಂದು ಐಟಿ ಉದ್ಯೋಗಿ ಎನ್. ವೆಂಕಟೇಶ್ ಅವರೊಂದಿಗೆ ಬೆಂಗಳೂರಿನ ವಿವಾಂತಾ ತಾಜ್ ಹೋಟೆಲ್‌ನಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದ ಸಾಂಘವಿ, ಮದುವೆಯಾಗಿ ಸುಮಾರು ಮೂರು ವರ್ಷದ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮಂದಿರ ದಿನದಂದು ಅವರು ಸಾಮಾಜಿಕ ಜಾಲತಾಣದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

ಆರತಿ ಸಂಬಂಧಿ

ಆರತಿ ಸಂಬಂಧಿ

ಸಾಂಘವಿ ಅವರು ಖ್ಯಾತ ನಟಿ ಆರತಿ ಅವರ ಹತ್ತಿರದ ಸಂಬಂಧಿ. ಸಾಂಘವಿ ತಂದೆ ಮೈಸೂರು ಮೆಡಿಕಲ್ ಕಾಲೇಜ್‌ನಲ್ಲಿ ಪ್ರೊಫೆಸರ್ ಆಗಿದ್ದರು. ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಸಾಂಘವಿ ವಿದ್ಯಾಭ್ಯಾಸ ಮಾಡಿದ್ದರು.

ತೆಲುಗಿನಲ್ಲಿ ಖ್ಯಾತಿ

ತೆಲುಗಿನಲ್ಲಿ ಖ್ಯಾತಿ

1997ರಲ್ಲಿ ತೆರೆಕಂಡ ಕೃಷ್ಣ ವಂಶಿ ಅವರ ಸಿಂಧೂರಂ ಚಿತ್ರ ಸಾಂಘವಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. 'ಹಾಯ್ ರೇ ಹಾಯ್ ಜಂಪಂದು ರೊಯ್' ಹಾಡು ಆಗ ಅವರಿಗೆ ಅನೇಕ ಅಭಿಮಾನಿಗಳನ್ನು ಹುಟ್ಟುಹಾಕಿತ್ತು. ನಾಗಾರ್ಜುನ ಜತೆ ನಟಿಸಿದ್ದ ಸೀತಾರಾಮರಾಜು ಚಿತ್ರದ ಸ್ರಿವಾರು ದೊರಗಾರು ಆ ಕಾಲದ ಮತ್ತೊಂದು ಭರ್ಜರಿ ಹಿಟ್ ಹಾಡು.

ದಿಗ್ಗಜರು ಚಿತ್ರದಲ್ಲಿ ನಟನೆ

ದಿಗ್ಗಜರು ಚಿತ್ರದಲ್ಲಿ ನಟನೆ

ಚಿತ್ರರಂಗದ ಪಾದಾರ್ಪಣೆ ಮಾಡಿದ ವರ್ಷದಲ್ಲಿಯೇ ಅವರು 'ರಾಯರ ಮಗ' ಚಿತ್ರದ ಮೂಲಕ ಕನ್ನಡದಲ್ಲಿಯೂ ನಟಿಸಿದರು. ಲವ್ 94 ಎಂಬ ಚಿತ್ರದಲ್ಲಿಯೂ ಆರಂಭದಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಂತರ ಕನ್ನಡದಲ್ಲಿ ನಟಿಸಿದ್ದು ಸುಮಾರು ಏಳು ವರ್ಷದ ನಂತರ. ವಿಷ್ಣುವರ್ಧನ್, ಅಂಬರೀಷ್ ಅಭಿನಯದ 'ದಿಗ್ಗಜರು' ಚಿತ್ರದಲ್ಲಿ ಪಾರ್ವತಿ/ಚಿಕ್ಕಮ್ಮಾವ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.

ಅನಾಥರು, ಇಂದ್ರ ಸಿನಿಮಾ

ಅನಾಥರು, ಇಂದ್ರ ಸಿನಿಮಾ

ಇದರ ನಂತರ ಪುನಃ ತಮಿಳು, ತೆಲುಗು ಚಿತ್ರಗಳಲ್ಲಿ ಬಿಜಿಯಾದ ಅವರು, 2007ರಲ್ಲಿ ಅನಾಥರು ಮತ್ತು 2008ರಲ್ಲಿ ಇಂದ್ರ ಚಿತ್ರದಲ್ಲಿ ನಟಿಸಿದ್ದರು. ಅದರ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅವರು 2016ರಲ್ಲಿ ಸಾಂಸಾರಿಕ ಬದುಕಿಗೆ ಕಾಲಿರಿಸಿದ್ದರು. ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಸಾಂಘವಿ 2019ರಲ್ಲಿ ತಮಿಳಿನ ಕೊಲಂಜಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ತಮ್ಮ ಖಾಸಗಿ ಬದುಕಿನ ಖುಷಿ ಹಂಚಿಕೊಂಡಿದ್ದಾರೆ.

More from Filmibeat

English summary
Diggajaru fame actress Sanghavi who tied know on her 39th age has delivered a baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X