ದರ್ಶನ್‌ಗೆ ವಿಲನ್ ಪಾತ್ರದಲ್ಲಿ ಪ್ರಶಸ್ತಿ ಗೆದ್ದು ಅಪ್ಪನಿಗೆ ಅರ್ಪಿಸುವ ಆಸೆಯಿತ್ತು; 'ನವಗ್ರಹ'ದಿಂದ ಅದು ಈಡೇರಿತೇ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅವರ ಆಪ್ತರು ಇದೇ ಖುಷಿಯಲ್ಲಿ ಇರುವಾಗಲೇ 'ನವಗ್ರಹ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ದರ್ಶನ್ ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದು, ನವೆಂಬರ್ 8ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
'ನವಗ್ರಹ' ಕನ್ನಡ ಚಿತ್ರರಂಗದ ಮಟ್ಟಿಗೆ ವಿಶಿಷ್ಟ ಸಿನಿಮಾ. ಕನ್ನಡ ಸಿನಿಮಾಗಳಲ್ಲಿ ಖಳನಾಯಕರಾಗಿ ನಟಿಸಿದ ಅದ್ಭುತ ಕಲಾವಿದರ ಮಕ್ಕಳನ್ನು ಇಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ದಿನಕರ್ ತೂಗುದೀಪ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿತ್ತು. ಈ ಸಿನಿಮಾ ಬಿಡುಗಡೆಯಾಗಿ 16 ವರ್ಷ ಕಳೆದಿದ್ದರೂ ಇನ್ನೂ ಚರ್ಚೆಯಲ್ಲಿದೆ.

ಈಗ 'ನವಗ್ರಹ' ಮರು ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ ಕಲಾವಿದರ ತಂಡ ಮತ್ತೆ ಒಂದೆಡೆ ಸೇರಿಕೊಂಡಿದೆ. ಡಿ ಕಂಪನಿ ಯೂಟ್ಯೂಬ್ ಚಾನೆಲ್‌ನಲ್ಲಿ ದಿನಕರ್ ತೂಗುದೀಪ, ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ನಾಗೇಂದ್ರ ಅರಸ್, ತರುಣ್ ಸುಧೀರ್, ವರ್ಷಾ ಸಂದರ್ಶನ ನೀಡಿದ್ದಾರೆ. ಆ ವೇಳೆ ದರ್ಶನ್‌ಗೆ ವಿಲನ್ ಪಾತ್ರದಲ್ಲಿ ನಟಿಸಿ ಪ್ರಶಸ್ತಿ ಪಡೆಯಬೇಕು ಎಂಬ ಆಸೆಯಿತ್ತು ಎಂದು ದಿನಕರ್ ಹೇಳಿದ್ದಾರೆ. ಅದರ ಸಾರಾಂಶವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ನವಗ್ರಹ' ಸಿನಿಮಾ ಮಾಡುವಾಗ ದರ್ಶನ್ ಅದಾಗಲೇ ಸ್ಟಾರ್ ಪಟ್ಟಕ್ಕೆ ಏರಿದ್ದರು. ಆದರೂ ತಮ್ಮ ಇಮೇಜ್ ಅನ್ನು ಪಕ್ಕಕ್ಕೆ ಇಟ್ಟು ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಇವರ ಜೊತೆ ಕನ್ನಡದಲ್ಲಿ ಖಳನಾಯಕರಾಗಿ ನಟಿಸಿದ್ದ ದಿಗ್ಗಜರ ಮಕ್ಕಳನ್ನು ಪ್ರಮುಖ ಪಾತ್ರದಲ್ಲಿ ಹಾಕಿಕೊಂಡು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆ ಬಗ್ಗೆ ಸೃಜನ್ ಲೋಕೇಶ್ ಮನಬಿಚ್ಚಿ ಮಾತಾಡಿದ್ದಾರೆ

"ದರ್ಶನ್ ಒಬ್ಬ ಚಾಲೆಂಜಿಂಗ್ ಸ್ಟಾರ್ ಆಗಿ ಅವನ ಜೊತೆಗೆ ಇಷ್ಟು ಜನರನ್ನು ಹಾಕೊಂಡು ಎಲ್ಲರಿಗೂ ಪ್ರಾಮುಖ್ಯತೆ ಕೊಡುವುದು ಇದೆಯಲ್ಲ ಅದು ಕೇವಲ ಸಿನಿಮಾ ಬಗ್ಗೆ ಪ್ಯಾಷನ್ ಇರುವುದರಿಂದ ಮಾತ್ರ ಬರುತ್ತೆ." ಎಂದು ಸೃಜನ್ ಲೋಕೇಶ ಹೇಳಿದ್ದಾರೆ.
'ನವಗ್ರಹ' ಸಂದರ್ಶನದ ಪ್ರೋಮೋದಲ್ಲಿ ದರ್ಶನ್‌ಗೆ ವಿಲನ್ ಪಾತ್ರದಲ್ಲಿ ನಟಿಸಿ ಪ್ರಶಸ್ತಿ ಗೆಲ್ಲಬೇಕು ಅಂತ ಇದ್ದ ಆಸೆಯನ್ನು ದಿನಕರ್ ತೂಗುದೀಪ ವ್ಯಕ್ತಪಡಿಸಿದ್ದಾರೆ. "ದರ್ಶನ್‌ಗೆ ವಿಲನ್ ಆಗಿ ಒಂದು ಅವಾರ್ಡ್ ತೆಗೆದುಕೊಳ್ಳಬೇಕು. ಅದನ್ನು ನಮ್ಮ ಅಪ್ಪನಿಗೆ ಅರ್ಪಿಸಬೇಕು ಅಂತ ತುಂಬಾನೇ ಆಸೆಯಿತ್ತು." ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.
ಇನ್ನು ಅಭಿಮಾನಿಗಳು ಕಾಮನ್ ಆಗಿ ಒಂದು ಪ್ರಶ್ನೆ ಹೇಳುತ್ತಲೇ ಇರುತ್ತಾರೆ. 'ನವಗ್ರಹ 2' ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನೋ ಪ್ರಶ್ನೆ ದಿನಕರ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎದುರಾಗುತ್ತೆ. ಆ ಪ್ರಶ್ನೆಗೂ 'ನವಗ್ರಹ' ತಂಡ ಸಂದರ್ಶನದಲ್ಲಿ ಉತ್ತರ ಕೊಟ್ಟಿದೆ. 'ನವಗ್ರಹ' ಪಾರ್ಟ್ 2 ಮಾಡುತ್ತಾರೋ ಇಲ್ಲವೋ? ದರ್ಶನ್ ಏನು ಹೇಳಿದ್ದಾರೆ? ಯಾವಾಗ ಸಿನಿಮಾ ಆಗುತ್ತೆ? ಅನ್ನುವ ಬಗ್ಗೆ ನವೆಂಬರ್ 1ನೇ ತಾರೀಕು ಡಿ ಕಂಪನಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ತಂಡ ರಿವೀಲ್ ಮಾಡಲಿದೆ.
ಇನ್ನು ವಿನೋದ್ ಪ್ರಭಾಕರ್ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದು ಮೊದಲು ಫುಲ್ ಪೇಮೆಂಟ್ ಕೊಟ್ಟಿದ್ದು ಇದೇ ಕಂಪನಿ ಎಂದು ಹೇಳಿದ್ದಾರೆ. ಹಾಗೇ 'ನವಗ್ರಹ' ಸಿನಿಮಾದಲ್ಲಿ ದರ್ಶನ್ ಎದೆ ಮೇಲೆ ಕಾಲಿಟ್ಟು ಒದೆಯುವಂತಹ ಒಂದು ದೃಶ್ಯವಿದೆ. ಆ ದೃಶ್ಯದ ಬಗ್ಗೆನೂ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ವೇಳೆ ದರ್ಶನ್ ಮನ:ಸ್ಥಿತಿ ಏನಿತ್ತು ಅನ್ನೋದನ್ನು ದಿನಕರ್ ತೂಗುದೀಪ ರಿವೀಲ್ ಮಾಡಿದ್ದಾರೆ.
"ಎದೆ ಮೇಲೆ ಕಾಲಿಡುವ ದೃಶ್ಯದ ಬಗ್ಗೆ ದರ್ಶನ್ ಕಂಫರ್ಟೆಬಲ್ ಆಗಿದ್ದರು. ಪರ್ವಾಗಿಲ್ಲ ನಾನು ಮಾಡುತ್ತೇನೆ ಎಂದು ಹೇಳಿದ್ದರು. ಅವನಿಗೆ ನನ್ನ ಇಮೇಜ್ ಏನಾಗುತ್ತೆ? ಅವೆಲ್ಲ ಏನೂ ಇರಲಿಲ್ಲ. ದೊಡ್ಡದಾಗಿ ಏನೂ ಯೋಚನೆ ಮಾಡಿರಲಿಲ್ಲ. ಮುಂದೇನೂ ಮಾಡುವುದಿಲ್ಲ" ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.
ಇನ್ನು ತರುಣ್ ಸುಧೀರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು ತಮ್ಮ ಅನುಭವ ಹೇಳಿಕೊಂಡಿದ್ದಾರೆ. "ಇವರು ತಪ್ಪು ಮಾಡಲಿ, ಕ್ಯಾಮರಾಮ್ಯಾನ್ ತಪ್ಪು ಮಾಡಲಿ, ಕ್ಯಾಮರಾಮ್ಯಾನ್ ತಪ್ಪು ಮಾಡಿರಲಿ, ಲೈಟ್ ಆಫೀಸರ್ ತಪ್ಪು ಮಾಡಿರಲಿ, ತರುಣ ನಿನಗೆ ಗೊತ್ತಾಗಲ್ವಾ ಅಂತ ನನಗೆ ಬೈಯ್ಯೋರು." ಎಂದಿದ್ದಾರೆ.
ದರ್ಶನ್ ಅಭಿಮಾನಿಗಳು 'ನವಗ್ರಹ 2' ಯಾವಾಗ ಅಂತ ಪ್ರಶ್ನೆ ಮಾಡುತ್ತಲೇ ಇದ್ದಾರೆ. ದಿನಕರ್ ತೂಗಿದೀಪ ಸಿಕ್ಕಾಗಲೆಲ್ಲಾ ಈ ಸಿನಿಮಾ ಯಾವಾಗ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತಲೇ ಇರುತ್ತೆ. ಅದಕ್ಕೂ 'ನವಗ್ರಹ' ರೀ ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ದಿನಕರ್ ರಿವೀಲ್ ಮಾಡಲಿದ್ದಾರೆ. ಅದಕ್ಕೆ ನಾಳೆ (ನವೆಂಬರ್ 1)ವರೆಗೂ ಕಾಯಲೇಬೇಕು.


Click it and Unblock the Notifications











