ಶಿವಣ್ಣನ ಚಿತ್ರಕ್ಕೆ ದರ್ಶನ್ ಅಸಿಸ್ಟೆಂಟ್ ಆಗಿದ್ದೇಕೆ? ಜಿಮ್‌ಗೆ ಹೋಗಲೂ ಹಣವಿರಲಿಲ್ಲ: ಕಷ್ಟದ ದಿನ ನೆನೆದ ದಿನಕರ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ತೂಗುದೀಪ್ ಶ್ರೀನಿವಾಸ್ ಪುತ್ರ ಅನ್ನೋದು ಪದೇ ಪದೆ ಹೇಳಬೇಕಿಲ್ಲ. ಆದರೆ, ತಂದೆಯ ಹೆಸರು ದರ್ಶನ್ ಚಿತ್ರರಂಗಕ್ಕೆ ಪ್ರವೇಶ ಮಾಡುವ ಆರಂಭದ ದಿನಗಳಲ್ಲಿ ಸಹಾಯಕ್ಕೆ ಬರಲಿಲ್ಲ ಅನ್ನೋದನ್ನು ಅವರೇ ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ.
ಈಗ ದರ್ಶನ್ ಸಹೋದರ ದಿನಕರ್ ತೂಗುದೀಪ ತಮ್ಮ ಕಷ್ಟದ ದಿನಗಳನ್ನು ಮೆಲುಗು ಹಾಕಿದ್ದಾರೆ. ದರ್ಶನ್ ಆರಂಭದ ದಿನಗಳು ಹೇಗಿದ್ದವು? 1995ರಲ್ಲಿ ಶಿವಣ್ಣ ನಟಿಸುತ್ತಿದ್ದ 'ಜನುಮದ ಜೋಡಿ' ಸಿನಿಮಾಗೆ ಸಹಾಯಕ ಛಾಯಾಗ್ರಾಹಕನಾಗಿ ಸೇರಿಕೊಂಡಿದ್ದೇಕೆ? ಜಿಮ್‌ಗೆ ಕಟ್ಟುವುದಕ್ಕೆ ಹಣವಿಲ್ಲದಿದ್ದಾಗ ಏನು ಮಾಡಿದ್ದರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ದಿನಕರ್ ತೂಗುದೀಪ್ ನಟಿಸಿದ ಎರಡನೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೀಗಾಗಿ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಮಸ್ತ್ ಮಗಾ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಹಾಗೂ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.
8ನೇ ಸಿನಿಮಾಗೆ ದರ್ಶನ್ ಹೀರೊ ಆಗಿದ್ದು
ದರ್ಶನ್‌ಗೆ ಹೀರೊ ಆಗಬೇಕು ಅನ್ನೋ ಕನಸು ಬಾಲ್ಯದಿಂದಲೇ ಇತ್ತು. ಆದರೆ ದಿನಕರ್ ಸಿನಿಮಾರಂಗಕ್ಕೆ ಬರುವ ಬಗ್ಗೆ ಒಲವು ಇರಲಿಲ್ಲ. ದರ್ಶನ್ ಅಂದು ಚಿತ್ರರಂಗಕ್ಕೆ ಬಂದಾಗ ಕಷ್ಟಗಳಿದ್ದವು. 7 ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದರು ಅನ್ನೋದನ್ನು ನೆನಪಿಸಿಕೊಂಡಿದ್ದಾರೆ. "ದರ್ಶನ್ ಚಿಕ್ಕಂದಿನಿಂದಲೇ ಆಕ್ಟರ್ ಆಗಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸುತ್ತಿದ್ದ. ನಾನು ಸಿನಿಮಾಗೆ ಬರೋ ಮಾತು ಆಡಿರಲಿಲ್ಲ. ಯಾಕಂದ್ರೆ, ದರ್ಶನ್ ಅವತ್ತು ಇಂಡಸ್ಟ್ರಿಗೆ ಬರ್ತೀನಿ ಅಂದಾಗ ಕಷ್ಟಗಳಿತ್ತು. 7 ಸಿನಿಮಾ ಚಿಕ್ಕಪುಟ್ಟ ರೋಲ್‌ಗಳನ್ನು ಮಾಡಿಕೊಂಡೇ ಹೀರೊ ಆಗಿದ್ದು, ಮೆಜೆಸ್ಟಿಂಗ್ ಅವನ ಎಂಟನೇ ಸಿನಿಮಾ. ಅಲ್ಲಿಗೆ ಬರೋವರೆಗೂ ತುಂಬಾನೇ ಸ್ಟ್ರಗಲ್ ಮಾಡಿದ." ಎಂದು ದಿನಕರ್ ತೂಗುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.
ದರ್ಶನ್ ಶಿವಣ್ಣನ ಸಿನಿಮಾ ಸಹಾಯಕನಾಗಿದ್ದೇಕೆ?
ದರ್ಶನ್ ಸಿನಿಮಾರಂಗಕ್ಕೆ ಬರಲೇ ಬೇಕು ಅಂತ ನಿರ್ಧರಿಸಿದ್ದಾಗ, ಛಾಯಾಗ್ರಾಹಕ ಬಿ ಸಿ ಗೌರಿಶಂಕರ್‌ಗೆ ಸಹಾಯಕರಾಗಿ ಸೇರಿಕೊಂಡಿದ್ದರು. 1995ರಲ್ಲಿ ಶಿವಣ್ಣ ನಟಿಸುತ್ತಿದ್ದ 'ಜನುಮದ ಜೋಡಿ' ಸಿನಿಮಾಗೆ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿ ದರ್ಶನ್ ಸೇರಿಕೊಂಡರು. ಅದಕ್ಕೆ ಅವರ ತಂದೆನೇ. ಇಬ್ಬರೂ ಮಕ್ಕಳಿಗೂ ಸಿನಿಮಾ ರಂಗದಲ್ಲಿ ಏನೇ ಮಾಡಿದರೂ ಮೊದಲ ಕ್ಯಾಮರಾ ಕಲಿಯಿರಿ ಎಂದು ಸಲಹೆ ನೀಡಿದ್ದರು. ಅದನ್ನೇ ದಿನಕರ ನೆನಪಿಸಿಕೊಂಡಿದ್ದಾರೆ. "ದರ್ಶನ್ ಡಿಪ್ಲೋಮೊ ಸೇರಿಕೊಂಡಿದ್ದ. ಅವನಿಗೆ ಓದುವುದಕ್ಕೆ ಇಷ್ಟವಿರಲಿಲ್ಲ. ಸಿನಿಮಾಗೆ ಬರೋ ಆಸೆಯಿತ್ತು. 1995ನಲ್ಲಿ ಶಿವಣ್ಣ ಅವರ ಜನುಮದ ಜೋಡಿ ಅನ್ನೋ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಪಾರ್ವತಮ್ಮ ಅವರು ಪ್ರಡ್ಯೂಸ್ ಮಾಡುತ್ತಿದ್ದರು. ಆ ಸಿನಿಮಾದಲ್ಲಿ ಬಿ ಸಿ ಗೌರಿ ಶಂಕರ್ ಅವರೊಂದಿಗೆ ಸಹಾಯಕ ಕ್ಯಾಮರಾ ಮ್ಯಾನ್ ಆಗಿ ಶುರು ಮಾಡಿದ. ಅವರ ಜೊತೆಗೆ ಮೂರು ಸಿನಿಮಾದಲ್ಲಿ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗಿ ಸೇರಿಕೊಂಡ.

"ಜಿಮ್‌ಗೆ ಹೋಗುವುದಕ್ಕೂ ಹಣವಿರಲಿಲ್ಲ"
ದರ್ಶನ್ ಚಿಕ್ಕ ಪುಟ್ಟ ಪಾತ್ರ ಮಾಡುವಾಗ ಜಿಮ್‌ಗೆ ಹೋಗುತ್ತಿದ್ದರು. ಆದರೆ, ಒಮ್ಮೊಮ್ಮೆ ಜಿಮ್ ಕೊಡುವುದಕ್ಕೂ ಹಣವಿರುತ್ತಿರಲಿಲ್ಲ. ಆಗ ದರ್ಶನ್ ಅಲ್ಲೇ ಏನೋ ಕೆಲಸ ಮಾಡಿ ಹಣ ಹೊಂದಿಸಿದ್ದನ್ನು ದಿನಕರ್ ನೆನಪಿಸಿಕೊಂಡಿದ್ದಾರೆ. "1997ನಲ್ಲಿ ಚಿಕ್ಕ ಪುಟ್ಟ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ. ಮೈಸೂರಿನಲ್ಲಿ ಮಾಡಲಿಂಗ್ ಮಾಡುತ್ತಿದ್ದ. ಜಿಮ್‌ಗೆ ಹೋಗುತ್ತಿದ್ದ. ಅಲ್ಲಿ ಫೀಸ್ ಕಟ್ಟುವುದಕ್ಕೆ ಆಗುತ್ತಿರಲಿಲ್ಲ. ತುಂಬಾ ಕಷ್ಟ ಪಟ್ಟಿದ್ದಾನೆ." ಎಂದು ಹೇಳಿದ್ದಾರೆ.
"ದರ್ಶನ್‌ಗೆ ಭಯವಿಲ್ಲ"
"ದರ್ಶನ್ ತುಂಬಾನೇ ಕಾನ್ಫಿಡೆಂಟ್. ನನ್ನ ಲೈಫ್ ಅನ್ನು ಜೀರೊಯಿಂದ ಶುರು ಮಾಡಿದೆ. ಮತ್ತೆ ಜೀರೊಯಿಂದ ಶುರು ಮಾಡುವುದಕ್ಕೆ ಭಯವಿಲ್ಲ ಅಂತ. ಕೆಲವರು 10ರಿಂದ ಶುರುಮಾಡಿದ್ದರು, ಅವರು ಜೀರೊಗೆ ಬಂದರೆ ಏನು ಮಾಡೋದು ಅನ್ನೋ ಟೆನ್ಷನ್ ಇರುತ್ತೆ. ಅದು ದರ್ಶನ್‌ಗೆ ಇರಲಿಲ್ಲ. ನಾಟಕ ಏನು ಮಾಡಬೇಕು. ರಿಯಲ್ ಲೈಫ್‌ನಲ್ಲಿ ಹೇಗೆ ಇರುತ್ತಾನೋ.. ಹಾಗೇ ನಟಿಸುತ್ತಾನೆ." ಎಂದು ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











