"ಯಾರೂ ನಿಮ್ಮ ಡಿ ಬಾಸ್ ಅನ್ನು ಏನೂ ಮಾಡೋಕೆ ಆಗಲ್ಲ"; ಮೌನ ಮುರಿದ ತಮ್ಮ ದಿನಕರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಸಿಗುತ್ತೋ ಇಲ್ಲವೋ ಅನ್ನೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಕಳೆದ ಮೂರೂವರೆ ತಿಂಗಳನಿಂದ ದರ್ಶನ್ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಜಾಮೀನಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ಪ್ರತಿಬಾರಿ ನಿರಾಸೆನೇ ಆಗಿದೆ.
ಈಗ ಹಿರಿಯ ವಕೀಲ ಸಿ ವಿ ನಾಗೇಶ್ ಅಖಾಡಕ್ಕೆ ಇಳಿದಿದ್ದಾರೆ. ದರ್ಶನ್ ಪರವಾದ ಮಂಡಿಸಿದ್ದಾರೆ. ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್ ಸರಿಯಿಲ್ಲ ಅಂತ ಪ್ರಬಲವಾಗಿ ವಾದ ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಜಾಮೀನು ಸಿಗಬಹುದೇನೋ ಅನ್ನೋ ಆಶಾಭಾವನೆ ಅವರ ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ಮೂಡಿದೆ.

ಇತ್ತ ದರ್ಶನ್ ಸಹೋದರ ದಿನಕರ್ ತೂಗುದೀಪ ತಮ್ಮ ಸಿನಿಮಾದ ಇಮೆಂಟ್‌ನಲ್ಲಿ ಭಾಗವಹಿಸಿದ್ದಾರೆ. ಇಷ್ಟು ದಿನ ಅತ್ತಿಗೆ ಜೊತೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ ಬರುತ್ತಿದ್ದ ದಿನಕರ್ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ತಮ್ಮ ಸಿನಿಮಾದ ವೇದಿಕೆ ಮೇಲೆ ಮೌನ್ ಮುರಿದಿದ್ದಾರೆ. ದರ್ಶನ್ ಅಭಿಮಾನಿಗಳ ಮುಂದೆ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದರ ಝಲಕ್ ಇಲ್ಲಿದೆ.
ಪರಿಸ್ಥಿತಿ ಸರಿಯಿರಲಿಲ್ಲ
ದರ್ಶನ್ ಜೈಲಿಗೆ ಹೋದ ದಿನದಿಂದಲೂ ದಿನಕರ್ ತೂಗುದೀಪ ಎಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ ದರ್ಶನ್ ಫ್ಯಾನ್ಸ್ ಎದುರು ದಿನಕರ್ ಗುಡುಗಿದ್ದಾರೆ. "ತುಂಬಾ ದಿನದಿಂದ ಮಾತಾಡಬೇಕು ಅಂತ ಅಂದುಕೊಳ್ಳುತ್ತಿದ್ದೆ. ಪರಿಸ್ಥಿತಿ ಸರಿಯಿರಲಿಲ್ಲ. ಏನೂ ಮಾತಾಡುವುದಕ್ಕೆ ಆಗುತ್ತಿರಲಿಲ್ಲ. ಈ ವೇದಿಕೆಯನ್ನು ಬಳಸಿಕೊಂಡು ಎಲ್ಲಾ ಸೆಲೆಬ್ರಿಟಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಯಾಕಂದ್ರೆ, ಇವತ್ತು ನಾವೇನು ಇದ್ದೀವಿ, ಏನು ಹೆಸರು ಮಾಡಿದ್ದೀವಿ ಅದೆಲ್ಲ ನಿಮ್ಮಿಂದ. ನಮ್ಮ ಎಫರ್ಟ್‌ಗೆ ಪ್ರೋತ್ಸಾಹವನ್ನು ಕೊಡುತ್ತಿದ್ದೀರ. ಅದೆಲ್ಲ ನಮ್ಮ ಡಿ ಬಾಸ್ ಫ್ಯಾನ್ಸ್, ಕನ್ನಡ ಚಿತ್ರಪ್ರೇಮಿಗಳಿಗೆ ಸಲ್ಲಬೇಕು." ಎಂದು ದಿನಕರ್ ಹೇಳಿದ್ದಾರೆ.

"ಇದು ನನ್ನ ಜವಾಬ್ದಾರಿ"
ದರ್ಶನ್ ಜೈಲ್‌ಗೆ ಹೋದ ದಿನದಿಂದಲೂ ದಿನಕರ್ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ. ಈಗ ಅವರೇ ನಿರ್ದೇಶಿಸಿದ 'ರಾಯಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಕಾರಣಕ್ಕೆ ಜವಾಬ್ದಾರಿ ಇಟ್ಟುಕೊಂಡು ಬಂದಿದ್ದೇನೆ ಎಂದಿದ್ದಾರೆ. "ನಾನು ಎಲ್ಲೂ ಹೋಗಿರಲಿಲ್ಲ. ಆದರೆ, ಇದು ನನ್ನ ಜವಾಬ್ದಾರಿ. ಯಾಕಂದ್ರೆ ನನ್ನನ್ನು ನಂಬಿಕೊಂಡು ಜಯಣ್ಣ ಆಗಲಿ, ಭೋಗೇಂದ್ರ ಆಗಲಿ ಕೋಟಿಗಟ್ಟಲೆ ದುಡ್ಡು ಹಾಕಿ ಸಿನಿಮಾ ಮಾಡಿದ್ದಾರೆ. ಇದು ನನ್ನ ಜವಾಬ್ದಾರಿ ಈ ಸಿನಿಮಾವನ್ನು ಪ್ರಮೋಟ್ ಮಾಡುವುದಕ್ಕೆ ಬರಲೇಬೇಕಿತ್ತು. ನನ್ನ ಜೊತೆ ನನ್ನ ಟೀಮ್ ಸಪೋರ್ಟ್ ಮಾಡ್ತು." ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.
ಡಿ ಬಾಸ್‌ನ ಏನೂ ಮಾಡೋಕೆ ಆಗಲ್ಲ
ಇದೇ ವೇದಿಕೆ ಮೇಲೆ ದರ್ಶನ್ ಅಭಿಮಾನಿಗಳಿಗೆ ಡಿ ಬಾಸ್ ಅನ್ನು ಯಾರೂ ಏನೂ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ. "ನೀವು ತುಂಬಾ ಪ್ರೀತಿ ತೋರಿಸುತ್ತೀರ. ಈ ಪ್ರೀತಿ ನನ್ನ ಮೇಲೆ, ನನ್ನ ಫ್ಯಾಮಿಲಿ ಮೇಲೆ ಸಾದ ಹೀಗೆ ಇರಲಿ. ನಿಮ್ಮ ಹಾರೈಕೆ ಪ್ರೋತ್ಸಾಹ ಇರುವವರೆಗೂ ಯಾರೂ ನಿಮ್ಮ ಡಿ ಬಾಸ್ ಅನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ" ಎಂದು ಹೇಳಿದ್ದಾರೆ.
ಜಾಮೀನು ಮತ್ತೆ ಮುಂದೂಡಿಕೆ
ದರ್ಶನ್‌ಗೆ ದಸರಾ ಹಬ್ಬಕ್ಕೂ ಮುನ್ನವೇ ಜಾಮೀನು ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಕ್ಟೋಬರ್ 8ಕ್ಕೆ ಮುಂದೂಡಿಕೆಯಾಗಿದೆ. ಹಿರಿಯ ವಕೀಲರಾದ ಸಿವಿ ನಾಗೇಶ್ ಸುದೀರ್ಘವಾಗಿ ವಾದ ಮಂಡನೆ ಮಾಡಿದ್ದರು. ಅಕ್ಟೋಬರ್ 8ರಂದು ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಲಿದ್ದಾರೆ.


Click it and Unblock the Notifications










