"ಎಲ್ರೂ ತೂಗುದೀಪ ಶ್ರೀನಿವಾಸ್ ತರ ಕಾಣ್ತೀರ ಅಂತಾರೆ.. ಅದೇ ನನ್ನ ಸ್ಟ್ರೆಂಥ್​, ವೀಕ್ನೆಸ್"-ದಿನಕರ್ ತೂಗುದೀಪ

ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ತೂಗುದೀಪ್ ಶ್ರೀನಿವಾಸ್ ಕೂಡ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಖಳನಾಯಕನಿಂದ ಹಿಡಿದು ಪೋಷಕ ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದರು. ಈಗ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗದಲ್ಲಿ ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ.

ದರ್ಶನ್ ನಟನೆ ಕಡೆಗೆ ವಾಲಿದರೆ, ದಿನಕರ್ ತೂಗುದೀಪ್ ನಿರ್ದೇಶನದ ಕಡೆ ಒಲವು ತೋರಿದ್ದರು. ದಿನಕರ್ ನಟನೆ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ, ಅದನ್ನು ಮುಂದುವರೆಸುವುಕ್ಕೆ ಹೋಗಿರಲಿಲ್ಲ. ಡೈರೆಕ್ಷನ್ ಕಡೆಗೆ ಹೆಚ್ಚು ಆಸಕ್ತಿ ತೋರಿಸಿದ್ದರು.

Dinakar Thoogudeepa says his strength and weakness to act are his father in Kaiva

'ಬೆಲ್ ಬಾಟಂ' ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿರೋ 'ಕೈವಾ' ಸಿನಿಮಾದಲ್ಲೂ ದಿನಕರ್ ತೂಗುದೀಪ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿರೋ ಟ್ರೈಲರ್‌ನಲ್ಲಿ ಆ ಪಾತ್ರ ರಿವೀಲ್ ಆಗಿದೆ. ಥೇಟ್ ಅಪ್ಪನಂತೆಯೇ ಕಾಣುತ್ತಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಅಪ್ಪನೇ ನನ್ನ ಸ್ಟ್ರೆಂಥ್ ಮತ್ತು ವೀಕ್ನೆಸ್ ಎಂದು ದಿನಕರ್ ಹೇಳಿದ್ದಾರೆ. ಅಷ್ಟಕ್ಕೂ ದಿನಕರ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

"ಆಕ್ಟಿಂಗ್‌ಗೂ ನನಗೂ ದೂರ"

ದರ್ಶನ್ ನಟನೆಯಲ್ಲಿ ಗೆದ್ದಿದ್ದಾರೆ. ಅದೇ ದಿನಕರ್ ತೂಗುದೀಪ ಆಕ್ಟಿಂಗ್‌ ಕಡೆ ಹೆಚ್ಚು ಒಲವು ತೋರಿಲ್ಲ. ನಿರ್ದೇಶನದ ಕಡೆಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಆದರೂ, ಆಗಾಗ ಚಿಕ್ಕ ಪುಟ್ಟ ಪಾತ್ರಗಳಿಗೆ ದಿನಕರ್ ಬಣ್ಣ ಹಚ್ಚಿದ್ದಾರೆ. ಕೈವಾ ಸಿನಿಮಾದಲ್ಲೂ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಟ್ರೈಲರ್ ಲಾಂಚ್ ವೇಳೆ ಓಪನ್ ಆಗಿ ಮಾತಾಡಿದ್ದಾರೆ. ನಟನೆಗೂ ನನಗೂ ದೂರವೆಂದು ಹೇಳಿದ್ದಾರೆ.

Dinakar Thoogudeepa says his strength and weakness to act are his father in Kaiva

ಅಪ್ಪನಂತೆ ಕಾಣೋದೆ ನನ್ನ ಸ್ಟ್ರೆಂಥ್-ವೀಕ್ನೆಸ್

"ಆಕ್ಟಿಂಗ್‌ಗೂ ನನಗೂ ತುಂಬಾ ದೂರ. ನೀವೆಲ್ಲ ನೋಡಿದ್ರಿ, ತೂಗುದೀಪ ಶ್ರೀನಿವಾಸ್ ತರ ಕಾಣಿಸುತ್ತೀರ ಅಂದ್ರು. ನನ್ನ ಸ್ಟ್ರೆಂಥ್ ಕೂಡ ಅದೇನೆ.. ವೀಕ್ನೆಸ್ ಕೂಡ ಅದೇನೆ. ಅವರ ತರ ಕಾಣೋದು ನನ್ನ ಸ್ಟ್ರೆಂಥ್. ಅವರ ತರ ಕಾಣದೆ ಇರೋದು ನನ್ನ ವೀಕ್ನೆಸ್." ಎಂದು ದಿನಕರ್ ತೂಗುದೀಪ್ ತನ್ನ ನಟನೆಗೆ ಬಗ್ಗೆ ಹೇಳಿಕೊಂಡಿದ್ದಾರೆ.

"ನನ್ನ ಆಕ್ಟಿಂಗ್‌ನಲ್ಲಿ ನ್ಯೂನ್ಯತೆಗಳಿವೆ"

"ನನ್ನ ಆಕ್ಟಿಂಗ್‌ನಲ್ಲಿ ತುಂಬಾ ನ್ಯೂನತೆಗಳಿವೆ. ಅದರಿಂದ ಓವರ್ ಕಮ್ ಮಾಡುವಂತಹ ಡೈರೆಕ್ಟರ್ ಇದ್ದರೆ ಆಕ್ಟಿಂಗ್ ಮಾಡಬಹುದು. ಯಾಕಂದರೆ, ನಾನು ಆಕ್ಟ್ ಮಾಡುವಾಗ ನನ್ನೊಳಗಿರುವ ಡೈರೆಕ್ಟರ್ ಎದ್ದು ಬಿಡುತ್ತಾನೆ. ನಾನು ತಪ್ಪು ಮಾಡುತ್ತಿದ್ದೇನೆ ಅನ್ನೋ ಫೀಲ್ ಬರುತ್ತೆ. ನನ್ನ ಪರ್ಫಾಮೆನ್ಸ್ ಇನ್ನೂ ಕಮ್ಮಿ ಆಗುತ್ತೆ." ಎಂದು ತಮ್ಮ ನಟನೆ ನ್ಯೂನ್ಯತೆ ಬಗ್ಗೆ ದಿನಾಕರ್ ಹೇಳಿದ್ದಾರೆ.

ದಿನಕರ್ 'ಕೈವಾ' ಸಿನಿಮಾ ಸಿಕ್ಕಿದ್ದೇಗೆ?

"ನನ್ನದು ರಾಯಲ್ ಸಿನಿಮಾದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿತ್ತು. ನಾನು ಹಾಗೂ ರಘು ನಿಡುವಳ್ಳಿ ಕೂತು ಕೆಲಸ ಮಾಡುತ್ತಿದ್ದೆವು. ಅವರು ಒಮ್ಮೆ ಜಯತೀರ್ಥ ಸರ್ ನಿಮ್ಮೊಂದಿಗೆ ಮಾತಾಡಬೇಕಂತೆ ಅಂತ ಹೇಳಿದ್ರು. ಈ ಸಿನಿಮಾ ಒಂದು ಕ್ಯಾರೆಕ್ಟರ್ ಇದೆ ನೀವೇ ಮಾಡ್ಬೇಕು ಅಂತ ಜಯತೀರ್ಥ ಸರ್ ಹೇಳ್ತಿದ್ದಾರೆ ಅಂದ್ರು. ನನಗೆ ಆಕ್ಟಿಂಗ್‌ಗೂ ದೂರ ರಘು ಅಂದೆ. ಹಾಗೇ ಸಿಕ್ಕಿದ್ದು ಕ್ಯಾರೆಕ್ಟರ್" ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.

More from Filmibeat

English summary
Dinakar Thoogudeepa about his strength and weakness in Kaiva trailer release|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X