For Quick Alerts
  ALLOW NOTIFICATIONS  
  For Daily Alerts

  ಮೃತನ ಕುಟುಂಬಕ್ಕೆ ದರ್ಶನ್ ಪರ ದಿನಕರ್ ತೂಗುದೀಪ ಸಾಂತ್ವನ

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದಿನ (ಫೆಬ್ರವರಿ 16) ಅವರ ಅಪ್ಪಟ ಅಭಿಮಾನಿ ಮಧು ಕುಮಾರ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಿಮಗೆಲ್ಲಾ ಗೊತ್ತಿರಬಹುದು.

  ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಗೆ ಮುಂಜಾನೆಯೇ ತಮ್ಮ ಗೆಳೆಯ ಸುಧಾಂಶು ಜೊತೆ ತೆರಳಿದ್ದ ಅಭಿಮಾನಿ ಮಧು ಕುಮಾರ್ ಬಳಿಕ ತಮ್ಮ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಕೊನೆಯುಸಿರೆಳೆದರು.[ನಟ ದರ್ಶನ್ ಹುಟ್ಟುಹಬ್ಬದ ದಿನ ಎಂತಹ ದುರಂತ]

  ಬೆಂಗಳೂರಿನ ಥಣಿಸಂದ್ರ ನಿವಾಸಿ ಯುವಕ ಮಧು ಕುಮಾರ್, ರಾಜರಾಜೇಶ್ವರಿ ನಗರದಿಂದ ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪಿದರು.

  ಈ ವಿಷಯ ತಿಳಿದ ದರ್ಶನ್ ಸಹೋದರ ದಿನಕರ್ ತೂಗುದೀಪ ಇಂದು ಥಣಿಸಂದ್ರದಲ್ಲಿರುವ ಮಧು ಕುಮಾರ್ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

  'ಜಗ್ಗು ದಾದಾ' ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಕಾರಣ ದಿನಕರ್ ಜೊತೆ ದರ್ಶನ್ ಭೇಟಿ ನೀಡಲಾಗಲಿಲ್ಲ. ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ಮಧು ಕುಮಾರ್ ಮನೆಗೆ ದರ್ಶನ್ ಇಂದು ಅಥವಾ ನಾಳೆ ತೆರಳುವ ಸಾಧ್ಯತೆ ಇದೆ.

  English summary
  Producer, Director Dinakar Toogudeepa visited the house of Madhu Kumar, hardcore fan of Darshan, who had died in a accident on Kannada Actor Darshan's birthday (February 16th). Dinakar Toogudeepa offered condolences to Madhu Kumar family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X