For Quick Alerts
  ALLOW NOTIFICATIONS  
  For Daily Alerts

  ಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳು

  |

  ಲಾಕ್ ಡೌನ್ ನಡುವೆಯೂ ನಿರ್ದೇಶಕ ಎ.ಪಿ. ಅರ್ಜುನ್ ಸರಳವಾಗಿ ತಮ್ಮ ಮನೆಯಲ್ಲಿಯೇ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಭಾನುವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ ಅವರು ಅನ್ನಪೂರ್ಣ (ಅನು) ಅವರೊಂದಿಗೆ ಹೊಸ ಜೀವನಕ್ಕೆ ಪ್ರವೇಶಿಸಿದರು.

  ಲಾಕ್ ಡೌನ್ ನಡುವೆ ಅದ್ಧೂರಿ ಸಮಾರಂಭಗಳಿಗೆ ಅವಕಾಶವಿಲ್ಲ. ಈ ಮಧ್ಯೆ ಅನೇಕ ಕಲಾವಿದರು, ತಂತ್ರಜ್ಞರು ಸರಳ ವಿವಾಹದ ಸೂತ್ರವನ್ನು ಅನುಸರಿಸಿದ್ದಾರೆ. ಅವರ ಸಾಲಿಗೆ 'ಅದ್ಧೂರಿ' ನಿರ್ದೇಶಕ ಅರ್ಜುನ್ ಕೂಡ ಸೇರಿಕೊಂಡಿದ್ದಾರೆ. ದರ್ಶನ್, ಧ್ರುವ ಸರ್ಜಾ, ಲೂಸ್ ಮಾದ ಯೋಗಿ, ಧನಂಜಯ್ ಮುಂತಾದ ನಟರೊಂದಿಗೆ ಸಿನಿಮಾಗಳನ್ನು ಮಾಡಿರುವ ಎ.ಪಿ. ಅರ್ಜುನ್ ಅವರಿಗೆ ಚಿತ್ರರಂಗದಲ್ಲಿ ಅನೇಕ ಆಪ್ತರಿದ್ದರೂ, ಲಾಕ್ ಡೌನ್ ಕಾರಣದಿಂದ ಅವರೆಲ್ಲರೂ ಮದುವೆಹೆ ಹಾಜರಾಗಲು ಸಾಧ್ಯವಾಗಲಿಲ್ಲ. ಪವನ್ ಒಡೆಯರ್, ತರುಣ್ ಸುಧೀರ್, ಪ್ರೇಮ್ ಮುಂತಾದವರು ನವ ವಧೂವರರಿಗೆ ಶುಭ ಹಾರೈಸಿದರು. ಮುಂದೆ ಓದಿ...

  ನಿರ್ದೇಶಕ ಸಂತು ಭಾಗಿ

  ನಿರ್ದೇಶಕ ಸಂತು ಭಾಗಿ

  ಕುಟುಂಬದ ಸದಸ್ಯರು ಹಾಗೂ ಕೆಲವೇ ಮಂದಿ ಆಪ್ತರು ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಭಾನುವಾರ ನಡೆದ ಸಮಾರಂಭದಲ್ಲಿ 'ಅಲೆಮಾರಿ' ನಿರ್ದೇಶಕ ಸಂತು ಚಿತ್ರರಂಗದ ಪರವಾಗಿ ಅರ್ಜುನ್ ಅವರ ಮದುವೆಗೆ ಹಾಜರಾಗಿದ್ದರು.

  ಹಾಸನದ ಅನ್ನಪೂರ್ಣ

  ಹಾಸನದ ಅನ್ನಪೂರ್ಣ

  ಅರ್ಜುನ್ ಅವರ ಕೈಹಿಡಿದಿರುವ ಅನು (ಅನ್ನಪೂರ್ಣ) ಅವರು ಮೂಲತಃ ಹಾಸನದವರು ಎನ್ನಲಾಗಿದೆ. ಅರ್ಜುನ್ ಈ ಹಿಂದೆ 'ಅದ್ಧೂರಿ' ಚಿತ್ರದ ಮೂಲಕ ಧ್ರುವ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆದರೆ ಅವರ ಮದುವೆ ಅದ್ಧೂರಿಯಾಗಿರದೆ ಬಹಳ ಸರಳವಾಗಿದ್ದು ವಿಶೇಷ.

  ಮನೆಯಲ್ಲಿಯೇ ಮದುವೆ ಮಂಟಪ

  ಮನೆಯಲ್ಲಿಯೇ ಮದುವೆ ಮಂಟಪ

  ಲಾಕ್ ಡೌನ್ ಕಾರಣದಿಂದಾಗಿ ಅರ್ಜುನ್ ಅವರ ಮನೆಯಲ್ಲಿಯೇ ಮದುವೆ ಮಂಟಪವನ್ನು ಸಿದ್ಧಪಡಿಸಲಾಗಿತ್ತು. ಮನೆಯ ಮುಂದೆ ಶಾಮಿಯಾನ, ಚಪ್ಪರ ಹಾಕಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಹೆಚ್ಚು ಜನರಿಗೆ ಆಹ್ವಾನ ನೀಡದೆಯೇ ಅರ್ಜುನ್, ಲಾಕ್ ಡೌನ್ ನಿಯಮಗಳನ್ನು ಪಾಲಿಸಿದರು.

  ನಿಖಿಲ್ ಕುಮಾರಸ್ವಾಮಿಗೆ ಸಿನಿಮಾ

  ನಿಖಿಲ್ ಕುಮಾರಸ್ವಾಮಿಗೆ ಸಿನಿಮಾ

  'ಅದ್ಧೂರಿ', 'ಅಂಬಾರಿ', 'ರಾಟೆ', 'ಐರಾವತ' ಚಿತ್ರಗಳನ್ನು ನಿರ್ದೇಶಿಸಿರುವ ಅರ್ಜುನ್ ಅವರ 'ಕಿಸ್' ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಮುಂದಿನ ಸಿನಿಮಾವನ್ನು ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ನಿರ್ದೇಶಿಸಲಿದ್ದಾರೆ.

  ಅಂಬಾರಿ ಮೂಲಕ ನಿರ್ದೇಶಕ

  ಮಂಡ್ಯ ಮೂಲದವರಾದ ಅರ್ಜುನ್, 'ತಂಗಿಗಾಗಿ' ಚಿತ್ರಕ್ಕೆ ಹಾಡು ಬರೆಯುವ ಮೂಲಕ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದರು. ಜತೆಗೆ ಸಹ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದರು. 'ಅಂಬಾರಿ' ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.

  ಎಂಟು ವರ್ಷದ ಪ್ರೀತಿ

  ಎಂಟು ವರ್ಷದ ಪ್ರೀತಿ

  ಅರ್ಜುನ್ ಮತ್ತು ಅನ್ನಪೂರ್ಣ ಅವರದ್ದು ಪ್ರೇಮಕ್ಕೆ ವಿವಾಹದ ಮುದ್ರೆ ಬಿದ್ದಿದೆ. ಇಬ್ಬರೂ ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮನೆಯವರ ಅನುಮತಿ ಪಡೆದು ಮನೆಯಲ್ಲಿಯೇ ಮದುವೆಯಾಗಿರುವುದು ವಿಶೇಷ.

  ಚಿತ್ರ ಸಾಹಿತಿಯಾಗಿ ಹೆಸರು

  ಚಿತ್ರ ಸಾಹಿತಿಯಾಗಿ ಹೆಸರು

  ಎಪಿ ಅರ್ಜುನ್ ನಿರ್ದೇಶನದ 'ಕಿಸ್' ಚಿತ್ರದಲ್ಲಿ ವಿರಾಟ್ ಮತ್ತು ಶ್ರೀಲೀಲಾ ನಟಿಸಿದ್ದರು. ವಿರಾಟ್ ನಟಿಸಲಿರುವ ಮತ್ತೊಂದು ಚಿತ್ರಕ್ಕೂ ಎ.ಪಿ. ಅರ್ಜುನ್ ಆಕ್ಷನ್ ಕಟ್ ಹೇಳಲಿದ್ದಾರೆ. ಗೀತರಚನಾಕಾರನಾಗಿ ಕೂಡ ಗುರುತಿಸಿಕೊಂಡಿರುವ ಅರ್ಜುನ್, ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ.

  English summary
  Director of Ambari, Addhuri, Mr Airavata etc movies AP Arjun got married to Annapurna in his house on Sunday amid lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X