»   » ತುಂಬಾ ಫೀಲ್ ಇಟ್ಕೊಂಡು ಸಿನಿಮಾ ಮಾಡ್ದೆ, ಫ್ಲಾಪ್ ಆಯ್ತು

ತುಂಬಾ ಫೀಲ್ ಇಟ್ಕೊಂಡು ಸಿನಿಮಾ ಮಾಡ್ದೆ, ಫ್ಲಾಪ್ ಆಯ್ತು

Posted By:
Subscribe to Filmibeat Kannada
Director Chandrasekhar on his movie Kalaya Tasme Namaha performance
ಇನ್ನು ಕಾಯ್ದುಕೊಂಡು ಕೂರಲು ಆಗುವುದಿಲ್ಲ... ಎಷ್ಟಾದರೂ ಸಿನಿಮಾ ಕಲೆಕ್ಷನ್ ಟೇಕಾಫ್ ಆಗೋದು ಕಷ್ಟ ಇದೆ' ಹೀಗೆಂದು ತಮ್ಮ ಕುರುಚಲು ಗಡ್ಡಕ್ಕೆ ಕೈ ಹಾಕಿ, ತಮ್ಮ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಹೇಳುತ್ತಾ ಹೋದರು ಕಾಲಾಯ ತಸ್ಮೈ ನಮಃ ಚಿತ್ರದ ನಿರ್ದೇಶಕ ಚಂದ್ರಶೇಖರ್ ಶ್ರೀ ವಾಸ್ತವ್.

ತುಂಬಾ ಫೀಲ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೆ. ಮೊದಲ ದಿನ ನೋಡಿದ ಪ್ರೇಕ್ಷಕರು, ಹಿತೈಷಿಗಳು ಸಿನಿಮಾ ತುಂಬಾ ಲಾಂಗ್ ಆಯ್ತು, ಟ್ರಿಮ್ ಮಾಡು ಎಂದು ಸಲಹೆ ಕೊಟ್ಟರು.

ಅವರ ಸಲಹೆ ಮೇರೆಗೆ ಬರೋಬ್ಬರಿ 23 ನಿಮಿಷದ ಸಿನಿಮಾ (2 ಹಾಡು ಮತ್ತು ಕೆಲವು ದೃಶ್ಯಗಳು) ಕಿತ್ತು ಪಕ್ಕಕ್ಕಿಟ್ಟೆ.

ಟ್ರಿಮ್ ಆದ ಮೇಲಾದರೂ ಪ್ರೇಕ್ಷಕ ಒಪ್ಪಿಕೊಳ್ಳುತ್ತಾನೇನೋ ಎಂಬ ಭರವಸೆಯಿತ್ತು. ಆದರೆ ಅದೂ ಹುಸಿಯಾಯಿತು. ಈ ಥರದ ಸಿನಿಮಾ ಎಲ್ಲರಿಂದಲೂ ಕಟ್ಟಿಕೊಡೋಕೆ ಸಾಧ್ಯವಿಲ್ಲ.

ಪ್ರೇಕ್ಷಕರಿಗೆ ಮನರಂಜನೆ ಜೊತೆಜೊತೆಗೆ ಮೆಸೇಜ್ ಹೇಳೋಕೆ ಹೊರಟೆ. ಅದೇ ತಪ್ಪಾಯ್ತು. ಜನರಿಗೆ ತಾಳ್ಮೆ ಅನ್ನೋದೇ ಇಲ್ಲ. ಇಂಡಸ್ಟ್ರಿಗೂ ಈ ಥರದ ಸಿನಿಮಾ ಬೇಕಾಗಿಲ್ಲ. ನನಗೆ ತುಂಬಾ ನೋವಾಗಿದೆ.

ಪ್ರೇಕ್ಷಕರಿಗೆ ಯಾವ ರೀತಿಯ ಸಿನಿಮಾ ಬೇಕೋ ಗೊತ್ತಿಲ್ಲ. ಆದರೆ ಇಂಥ ಸಿನಿಮಾವಂತೂ ಬೇಡ ಅಂತ ಗೊತ್ತಾಯ್ತು ಎನ್ನುವಾಗ ನಿರ್ದೇಶಕ ಚಂದ್ರಶೇಖರ್ ಕಣ್ಣ ತುದಿಯಲ್ಲಿ ಹನಿ ಮನೆ ಮಾಡಿತ್ತು.

ಕಾಲಾಯ ತಸ್ಮೈ ನಮಃ ಚಿತ್ರದಲ್ಲಿ ಕಥೆಗಿಂತ ದೃಶ್ಯಗಳೇ ಜಾಸ್ತಿ ಇದೆ ಎಂಬ ಮಾತುಗಳು ಸಿನಿಮಾ ನೋಡಿದವರಿಂದ ವ್ಯಕ್ತವಾಗಿತ್ತು.

ಮಾಧ್ಯಮಗಳಿಂದಲೂ ಕೂಡ ಅದೇ ರಿಪೋರ್ಟ್ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ನಿರ್ಮಾಪಕ ಮಾರುತಿ ಜಡೆಯರ್ ಹಾಗೂ ವಿತರಕ ಮಹೇಶ್ ಕೊಠಾರಿ ಸುಮಾರು 22 ನಿಮಿಷಗಳಷ್ಟು ಸಿನಿಮಾವನ್ನು ಎಡಿಟ್ ಮಾಡಿದ್ದರು.

2ಗಂಟೆ 20 ನಿಮಿಷ ಇದ್ದ ಸಿನಮಾ ಈಗ 1 ಗಂಟೆ 55 ನಿಮಿಷಕ್ಕೆ ಬಂದು ನಿಂತಿತ್ತು. ಒಂದೇ ರೀತಿಯಿದ್ದ ಎರಡು ಹಾಡುಗಳನ್ನು ಅರ್ಧದಷ್ಟು ಟ್ರಿಮ್ ಮಾಡಿ, ಕೆಲವು ಅನಾವಶ್ಯಕ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರು.

ಕಾಲವನ್ನು ತಡೆಯೋರು ಯಾರೂ ಇಲ್ಲ ಎಂಬ ಗಾದೆ ಮಾತಿತ್ತು. ಆದರೆ ಸಿನಿಮಾ ವಿಷಯಕ್ಕೆ ಬಂದರೆ ಕಾಲ ಮಿತಿ ಮೀರಿದರೆ ಅದಕ್ಕೂ ಕುತ್ತು ಖಂಡಿತಾ ಎಂಬುದನ್ನು ತಿದ್ದಿಕೊಳ್ಳಬಹುದೇನೋ?

English summary
Director Chandrasekhar Srivastav said, his movie Kalaya Tamse Namaha not doing good in the box office. Based on the first day report we have edited 22 minutes, but still movie is not performing well.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada