James Movie: 'ದಿ ಕಾಶ್ಮೀರ್ ಫೈಲ್ಸ್‌'ಗಾಗಿ 'ಜೇಮ್ಸ್' ತೆಗೆಯಬೇಡಿ: ಭಾವನೆಗಳಿಗೆ ಬೆಲೆಕೊಡಿ ಎಂದ ನಿರ್ದೇಶಕ

ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್'. ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಅತಿ ವೇಗವಾಗಿ 100 ಕೋಟಿ ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಆದರೆ, ಈ ಸಿನಿಮಾಗೆ ಪರಭಾಷೆಯ ಸಿನಿಮಾಗಳು ಸವಾಲೊಡ್ಡುತ್ತಿವೆ. ಈ ಕಾರಣಕ್ಕೆ 'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆದು ಹಾಕುವ ಭೀತಿ ಎದುರಾಗಿದೆ.

Recommended Video

ದಯವಿಟ್ಟು ಜೇಮ್ಸ್ ಸಿನಿಮಾಗೆ ಸಪೋರ್ಟ್ ಮಾಡಿ ಇದು ಕನ್ನಡಿಗರ ಭಾವನೆ ಎಂದ ನಿರ್ದೇಶಕ

ದೇಶಾದ್ಯಂತ 'ದಿ ಕಾಶ್ಮೀರ್ ಫೈಲ್ಸ್' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಈ ಸಿನಿಮಾ ಬಿಡುಗಡೆಯಾದಲ್ಲಿಂದ ಗಲ್ಲಾಪೆಟ್ಟಿಗೆಯನ್ನೇ ಉಡೀಸ್ ಮಾಡುತ್ತಿದೆ. ಜೊತೆಗೆ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್‌'ಗೆ ಶ್ರೀರಕ್ಷೆ ಸಿಗುತ್ತಿದೆ ಎನ್ನುವ ಆರೋಪವಿದೆ. ಈ ಕಾರಣಕ್ಕೆ ಕರ್ನಾಟಕದಲ್ಲಿ ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಅನ್ನು ಎರಡನೇ ವಾರಕ್ಕೆ ಎತ್ತಂಗಡಿ ಮಾಡಲಾಗುತ್ತಿದೆ. 'ಜೇಮ್ಸ್' ಸಿನಿಮಾ ತೆಗೆದು 'ದಿ ಕಾಶ್ಮೀರ್ ಫೈಲ್ಸ್'ಗೆ ಥಿಯೇಟರ್ ನೀಡಲಾಗುತ್ತಿದೆ ಎಂದು ನಿರ್ಮಾಪಕ ಕಿಶೋರ್ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಳಿ ಆರೋಪ ಮಾಡಿದ್ದಾರೆ. ಈ ಕಾರಣಕ್ಕೆ ಚಿತ್ರದ ನಿರ್ದೇಶಕ ಚೇತನ್ ಥಿಯೇಟರ್ ಮಾಲೀಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಪ್ಪು ಕೊನೆಯ ಸಿನಿಮಾ ಜೇಮ್ಸ್

ಅಪ್ಪು ಕೊನೆಯ ಸಿನಿಮಾ ಜೇಮ್ಸ್

'ಜೇಮ್ಸ್' ಥಿಯೇಟರ್‌ನಿಂದ ಎತ್ತಂಗಡಿಯಾಗುತ್ತೆ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ 'ಜೇಮ್ಸ್' ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಅಪ್ಪ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಇಲ್ಲೊಂದು ಭಾವನಾತ್ಮಕ ಸಂಬಂಧವಿದೆ ಎಂದು ಚೇತನ್ ಮಾನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆಯ ಬೇಡಿ ಎಂದು ಕೇಳಿಕೊಂಡಿದ್ದಾರೆ.

'ಜೇಮ್ಸ್‌'ಗೆ ಚಿತ್ರಮಂದಿರ ಕೊಡಿ ಪ್ಲೀಸ್

'ಜೇಮ್ಸ್‌'ಗೆ ಚಿತ್ರಮಂದಿರ ಕೊಡಿ ಪ್ಲೀಸ್

"ಎಲ್ಲಾ ವಿತರಕರಿಗೆ, ಪ್ರದರ್ಶಕರಿಗೆ ನನ್ನ ಕಡೆಯಿಂದ ಒಂದು ಮನವಿ. ಎಲ್ಲರ ಸಹಕಾರದಿಂದ 'ಜೇಮ್ಸ್' ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದೆ. ದಯವಿಟ್ಟು ನಿಮ್ಮ ಸಹಕಾರ ಎರಡನೇ ವಾರವೂ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಯಾಕೆಂದರೆ, ಬೆಳಗ್ಗೆಯಿಂದ ಅಭಿಮಾನಿಗಳು ವಿವಿದ ಭಾಗಗಳಿಂದ ಕರೆ ಮಾಡುತ್ತಿದ್ದಾರೆ. ಎರಡನೇ ವಾರ 'ಜೇಮ್ಸ್' ಸಿನಿಮಾಗೆ ಅತ್ಯದ್ಬುತ ಶೇರ್ ಬಂದೆ. ಆದರೂ ಬಹಳಷ್ಟು ಚಿತ್ರಮಂದಿರದಲ್ಲಿ ತೆಗೆಯುತ್ತಾರೆ ಅನ್ನುವ ಒಂದು ಮಾಹಿತಿ ಇದೆ. ದಯವಿಟ್ಟು ಹಾಗೆ ಮಾಡಬೇಡಿ." ಎಂದು ನಿರ್ದೇಶಕ ಚೇತನ್ ಮನವಿ ಮಾಡಿಕೊಂಡಿದ್ದಾರೆ.

ಜೇಮ್ಸ್ ಅಭಿಮಾನಿಗಳ ಜೀವ

ಜೇಮ್ಸ್ ಅಭಿಮಾನಿಗಳ ಜೀವ

"ಲಕ್ಷಾಂತರ ಅಭಿಮಾನಿಗಳು ಇನ್ನೂ ಸಿನಿಮಾ ನೋಡುವುದಿದೆ. ಅಪ್ಪು ಸರ್ ಅಭಿನಯಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಇದು. ಕನ್ನಡ ಸಿನಿಮಾ ಇದು. ನಿಮ್ಮ ಸಹಕಾರ ಬಹಳ ಮುಖ್ಯ. ಲಕ್ಷಾಂತರ ಅಭಿಮಾನಿಗಳ ಆಸೆ ಅದು. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು ಅನ್ನುವಂತಹದ್ದು. ಅವರ ಆಸೆಯನ್ನು ನಿರಾಸೆ ಮಾಡಬೇಡಿ." ಎಂದು 'ಜೇಮ್ಸ್' ಸಿನಿಮಾದ ನಿರ್ದೇಶಕ ವಿಡಿಯೋ ಮಾಡಿ, ಅದರ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಭಾವನೆಯಾಗಿ ಬದಲಾಗಿದೆ 'ಜೇಮ್ಸ್'

"ಇದು ಸಿನಿಮಾ ಆಗಿ ಮಾತ್ರ ಉಳಿದುಕೊಂಡಿಲ್ಲ. ಕನ್ನಡಿಗರ ಭಾವನೆಯಾಗಿ 'ಜೇಮ್ಸ್' ಬದಲಾಗಿದೆ. ದಯವಿಟ್ಟು ನಿಮ್ಮ ಸಪೋರ್ಟ್ ಇರಲಿ. ನಿಮ್ಮ ಸಹಕಾರ ಇರಲಿ. ದಯವಿಟ್ಟು ಚಿತ್ರಮಂದಿರಗಳನ್ನು ನೀಡಿ ಅಂತ ನನ್ನ ಕಡೆಯಿಂದ ನಾನು ಕೇಳಿಕೊಳ್ಳುತ್ತೇನೆ." ಎಂದು ವಿಡಿಯೋದಲ್ಲಿ ನಿರ್ದೇಶಕ 'ಜೇಮ್ಸ್' ಮನವಿ ಮಾಡಿಕೊಂಡಿದ್ದಾರೆ. 'ಜೇಮ್ಸ್' ಚಿತ್ರಕ್ಕೆ 'ದಿ ಕಾಶ್ಮೀರ್ ಫೈಲ್ಸ್' ಅಷ್ಟೇ ಅಲ್ಲ ರಾಜಮೌಳಿ ನಿರ್ದೇಶನದ RRR ಕೂಡ ಬಿಡುಗಡೆಯಾಗುತ್ತಿರುವುದರಿಂದ 'ಜೇಮ್ಸ್‌'ಗೆ ಆತಂಕ ತಪ್ಪಿದ್ದಲ್ಲ.

More from Filmibeat

English summary
Director Chethan kumar requested theater owners not to replace James movie. Here is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X