ಅಪ್ಪು ಫೋಟೊಗೆ ಮಗುವಿನ ಮುತ್ತು: ಚೆಂದದ ವಿಡಿಯೋ ಹಂಚಿಕೊಂಡ ನಿರ್ದೇಶಕ

ಪುನೀತ್ ರಾಜ್ ಕುಮಾರ್ ಅವರನ್ನು ಇಷ್ಟಪಡದವರು ಯಾರು? ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಪುನೀತ್ ಅವರಿಗೆ ಅಭಿಮಾನಿಗಳಿದ್ದಾರೆ. ಬಾಲನಟನಾಗಿ ನಟಿಸುವಾಗಿನಿಂದಲೂ ಅವರನ್ನು ಇಷ್ಟಪಟ್ಟವರಿದ್ದಾರೆ. ಅದರಲ್ಲಿಯೂ ಪುಟಾಣಿಗಳಿಗೆ ಪುನೀತ್ ಎಂದರೆ ಅಚ್ಚುಮೆಚ್ಚು.

Recommended Video

Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

ಅದನ್ನು ಸಾಬೀತುಪಡಿಸುವ ವಿಡಿಯೋವೊಂದನ್ನು ನಿರ್ದೇಶಕ ಗಿರಿರಾಜ್ ಬಿ.ಎಂ. ಹಂಚಿಕೊಂಡಿದ್ದಾರೆ. ಗಿರಿರಾಜ್ ನಿರ್ದೇಶನದಲ್ಲಿ ಪುನೀತ್ 'ಮೈತ್ರಿ' ಚಿತ್ರದಲ್ಲಿ ನಟಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಪುನೀತ್ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಸ್ಮರಣೀಯ ಘಟನೆಯನ್ನು ಗಿರಿರಾಜ್ ತಿಳಿಸಿದ್ದಾರೆ. ಸದಾ ಕ್ರಿಯಾಶೀಲನಾಗಿರುವ ಮಗ ಕಬೀರನ ಅನೇಕ ವಿಡಿಯೋ ಹಾಗೂ ಫೋಟೊಗಳನ್ನು ಗಿರಿರಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಅವುಗಳಲ್ಲಿ ಈ ವಿಡಿಯೋ ಬಹಳ ಅಪರೂಪದ್ದೆನಿಸಿದೆ. ಮುಂದೆ ಓದಿ...

ಅಪ್ಪು ಫೋಟೊಕ್ಕೆ ಮುತ್ತು

ಅಪ್ಪು ಫೋಟೊಕ್ಕೆ ಮುತ್ತು

ರಾಜ್ ಕುಮಾರ್ ಅವರು ಪುನೀತ್ ಅವರನ್ನು ಎತ್ತಿಕೊಂಡು ಕುಳಿತಿದ್ದ ಫೋಟೊವನ್ನು ತೋರಿಸಿ ಇವರು ಯಾರು? ಎಂದು ಗಿರಿರಾಜ್ ಮಗ ಕಬೀರನನ್ನು ಕೇಳಿದಾಗ ಆತ ಫೋಟೊದೆಡೆಗೆ ಓಡಿ ಪುನೀತ್ ಅವರ ಫೋಟೊಕ್ಕೆ ಮುತ್ತು ನೀಡಿದ್ದಾನೆ.

ಪುಟಾಣಿ ಪುನೀತ್ ಚಿತ್ರ

ಪುಟಾಣಿ ಪುನೀತ್ ಚಿತ್ರ

ಅಲ್ಲಿದ್ದವರು ಮತ್ತೊಂದು ಎಂದಾಗ ಅಪ್ಪು ಚಿತ್ರಕ್ಕೆ ಇನ್ನೊಮ್ಮೆ ಮುತ್ತು ನೀಡಿದ್ದಾನೆ. ರಾಜ್ ಕುಮಾರ್ ಅವರ ತೋಳಲ್ಲಿ ಕುಳಿತಿದ್ದ ಪುಟಾಣಿ ಪುನೀತ್ ಫೋಟೊ, ನಿರ್ದೇಶಕ ಗಿರಿರಾಜ್ ಅವರ ಮುದ್ದು ಪುಟಾಣಿಯನ್ನು ಆಕರ್ಷಿಸಿದ್ದು ವಿಶೇಷ.

ದೇವರೂ ಒಂದು ಮಗುವಾದ ಘಳಿಗೆ

ದೇವರೂ ಒಂದು ಮಗುವಾದ ಘಳಿಗೆ

ನಾಲ್ಕು ವರ್ಷದ ಹಿಂದೆ ಅಪ್ಪು ಸರ್ ನ ಭೇಟಿಯಾಗಲು ಹೋಗಿದ್ವಿ. ಅಲ್ಲಿದ್ದ ಫೋಟೊ ತೋರಿಸಿ ಇವರು ಯಾರು ಹೇಳು ಅಂತ ಕೇಳಿದಾಗ ಇವನಿಗೇನನಿಸ್ತೊ ಸುಮ್ಮನೆ ಹೋಗಿ ಮುತ್ತು ಕೊಡಲು ಶುರು ಮಾಡಿದ. ಮಕ್ಕಳು ದೇವರು. ದೇವರೂ ಒಂದು ಮಗುವಾದ ಘಳಿಗೆ ಎಂದು ಗಿರಿರಾಜ್ ಬರೆದುಕೊಂಡಿದ್ದಾರೆ.

ಕಬೀರನ ಜನ್ಮದಿನ

ಕಬೀರನ ಜನ್ಮದಿನ

ಮಗ ಕಬೀರನ ಹುಟ್ಟು ಹಬ್ಬದ ದಿನವಾದ ಶುಕ್ರವಾರ ಗಿರಿರಾಜ್ ಈ ಹೃದಯಸ್ಪರ್ಶಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಗನ ಜನ್ಮದಿನಕ್ಕೆ ಗಿರಿರಾಜ್ ಮತ್ತು ಮನೆಯವರು ವಿಶೇಷ ಕೇಕ್ ತಯಾರಿಸಿದ್ದಾರೆ. ಕಾರ್ ಆಕೃತಿಯ ಕೇಕ್ ಕತ್ತರಿಸುವ ಮೂಲಕ ಕಬೀರನ ಹುಟ್ಟುಹಬ್ಬ ಆಚರಿಸಿದ್ದಾರೆ.

More from Filmibeat

English summary
Director Giriraj BM has shared a video of his son Kabira giving kiss to actor Puneeth Rajkumar's old photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X