'ಲವ್ ಮಾಕ್‌ಟೇಲ್ 2' ಶುರು: ಮೊದಲ ಸೀನ್ ಬರವಣಿಗೆ ಆರಂಭಿಸಿದ ಕೃಷ್ಣ

'ಲವ್ ಮಾಕ್‌ಟೇಲ್' ಅನ್ನು ಚಿತ್ರಮಂದಿರ, ಅಮೆಜಾನ್ ಪ್ರೈಮ್ ಹಾಗೂ ಪೈರಸಿ ಕಾಪಿಗಳ ಮೂಲಕ ವೀಕ್ಷಿಸಿ ಹಾಡಿ ಹೊಗಳುತ್ತಿರುವ ಅಭಿಮಾನಿಗಳ ನಿರೀಕ್ಷೆ ನಿಜವಾಗಿದೆ. 'ಲವ್ ಮಾಕ್‌ಟೇಲ್' ಕಥೆ ಇಷ್ಟಕ್ಕೇ ನಿಲ್ಲುವುದಿಲ್ಲ, ಮುಂದುವರಿಯಲಿದೆ. ನಿರ್ಮಾಪಕ, ನಿರ್ದೇಶಕ ಕಂ ನಟ ಡಾರ್ಲಿಂಗ್ ಕೃಷ್ಣ, 'ಲವ್ ಮಾಕ್‌ಟೇಲ್ 2' ಮಾಡಲಿದ್ದಾರೆ ಎಂಬ ಮಾಹಿತಿಯನ್ನು 'ಫಿಲ್ಮಿಬೀಟ್' ಎರಡು ದಿನಗಳ ಹಿಂದೆ ನೀಡಿತ್ತು. ಅದನ್ನು ಡಾರ್ಲಿಂಗ್ ಕೃಷ್ಣ ಶನಿವಾರ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

'ಲವ್ ಮಾಕ್‌ಟೇಲ್' ಚಿತ್ರದ ಅಂತ್ಯವು ಪ್ರೇಕ್ಷಕರನ್ನು ಕಾಡುವಂತಿದೆ. ಆದರೆ, ನಿಧಿಯ ನೆನಪಿನಲ್ಲಿಯೇ ಆದಿ ಉಳಿಯುವಂತಾಗಿದ್ದು, ಅನೇಕರಲ್ಲಿ ಬೇಸರ ಮೂಡಿಸಿತ್ತು. ತನ್ನೊಂದಿಗೆ ಜತೆಗೂಡುವ 'ಅದಿತಿ'ಯೊಂದಿಗೆ ಪಯಣ ಆರಂಭಿಸುವ ಆದಿ, ಆಕೆಯೊಂದಿಗೇ ಪಯಣವನ್ನು ಮುಗಿಸುತ್ತಾನೆ. ಆ ಪಯಣದಲ್ಲಿ ಅದಿತಿಯೊಂದಿಗೆ ತನ್ನ ಬದುಕಿನ ಪ್ರೇಮ ಕಥೆಗಳನ್ನು ತೆರೆದಿಡುತ್ತಾನೆ. ಮುಂದೆ ಓದಿ...

ಆದಿಯ ಪಯಣ ಶುರು

ಆದಿಯ ಪಯಣ ಶುರು

'ಲವ್ ಮಾಕ್‌ಟೇಲ್' ಚಿತ್ರದ ಅಂತ್ಯದಲ್ಲಿ ಅದಿತಿ ಪಾತ್ರಧಾರಿ ಆದಿಯೊಂದಿಗೆ ಪ್ರೀತಿಯಲ್ಲಿ ಬಿದ್ದಂತೆ ಕಾಣಿಸುತ್ತದೆ. ಆದರೆ ತನ್ನ ಬದುಕಲ್ಲಿ ಮತ್ತೊಂದು ಪ್ರೀತಿಗೆ ಜಾಗವಿಲ್ಲ ಎಂದು ಆದಿ ಹೇಳುವುದು ಅದಿತಿಯ ಮನಸ್ಸಲ್ಲಿ ಬೇಸರವನ್ನು ಉಳಿಸುತ್ತದೆ. ಅಲ್ಲಿಂದ ಆದಿಯ ಪಯಣ ಮತ್ತೆ ಶುರುವಾಗುತ್ತದೆ.

ಆಸಕ್ತಿಕರ ಕಥೆ ಸಿಕ್ಕಿದೆ...

ಆಸಕ್ತಿಕರ ಕಥೆ ಸಿಕ್ಕಿದೆ...

'ಲವ್ ಮಾಕ್‌ಟೇಲ್' ಚಿತ್ರದ ಪಯಣವನ್ನು ಡಾರ್ಲಿಂಗ್ ಕೃಷ್ಣ ಮುಂದುವರಿಸಿದ್ದಾರೆ. ಅವರಿಗೆ ಈ ಕಥೆಯನ್ನು ಮುಂದುವರಿಸಲು ಆಸಕ್ತಿಕರ ಹೊಳಹು ಅವರಿಗೆ ಸಿಕ್ಕಿದೆ. ಅದರ ಆಧಾರದ ಮೇಲೆ ಕಥೆ ಬರೆಯಲು ಆರಂಭಿಸಿದ್ದಾರೆ.

ಅದಿತಿಯನ್ನು ಬಿಟ್ಟು ಪಯಣ ಶುರು

ಅದಿತಿಯನ್ನು ಬಿಟ್ಟು ಪಯಣ ಶುರು

ಎರಡನೆಯ ಭಾಗದ ಮೊದಲ ದೃಶ್ಯದ ಬರವಣಿಗೆ ಆರಂಭಿಸಿರುವ ಚಿತ್ರವನ್ನು ಕೃಷ್ಣ ಹಂಚಿಕೊಂಡಿದ್ದಾರೆ. 'ಆದಿ ಅದಿತಿಯನ್ನು ಬಿಟ್ಟು ಕಾರಿನಲ್ಲಿ...' ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದ ಹಾಳೆಯ ಫೋಟೊವನ್ನು ಕೃಷ್ಣ ಬಹಿರಂಗಪಡಿಸಿದ್ದಾರೆ. ಉಳಿದಂತೆ ಮುಂದಿನ ಸಾಲು ಏನಿರಲಿದೆ ಎಂಬುದನ್ನು ಅವರು ರಹಸ್ಯವಾಗಿ ಇರಿಸಿದ್ದಾರೆ.

ಹಳಬರು ಬರುತ್ತಾರೆಯೇ?

ಹಳಬರು ಬರುತ್ತಾರೆಯೇ?

ಅದಿತಿಯನ್ನು ಬಿಟ್ಟು ಹೊರಡುವ ಆದಿಯ ಹೊಸ ಪಯಣದ ಸುಳಿವನ್ನು ಕೃಷ್ಣ ನೀಡಿದ್ದಾರೆ. ಆದರೆ ಅದಿತಿ ಈ ಚಿತ್ರದಲ್ಲಿಯೂ ಬರಲಿದ್ದಾರೆಯೇ ಅಥವಾ ಮೊದಲ ಭಾಗದಲ್ಲಿ ಆದಿಯ ಬದುಕಲ್ಲಿ ಪುನಃ ವಾಪಸ್ ಬರಲು ಬಯಸಿದ್ದ ಜೋ ಕೂಡ ಬರುತ್ತಾಳೆಯೇ ಎಂಬುದು ಸದ್ಯದ ಕುತೂಹಲ.

ಮಿಲನಾ ನಾಗರಾಜ್ ಇರುತ್ತಾರಾ?

ಮಿಲನಾ ನಾಗರಾಜ್ ಇರುತ್ತಾರಾ?

ಲವ್ ಮಾಕ್‌ಟೇಲ್‌ನಲ್ಲಿ ಎಲ್ಲರನ್ನೂ ಕಾಡಿದ್ದು, ನಿಧಿಮಾ ಪಾತ್ರ. ನಿಧಿ ಪಾತ್ರಧಾರಿ ಮಿಲನಾ ನಾಗರಾಜ್, ಚಿತ್ರದ ನಿರ್ಮಾಣ, ಸಂಭಾಷಣೆ, ನಿರ್ದೇಶನ ಮುಂತಾದ ಕಾರ್ಯಗಳ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಈ ಚಿತ್ರದಲ್ಲಿ ಅವರ ಪಾತ್ರ ಏನಿರಲಿದೆ ಎಂಬುದು ಮತ್ತೊಂದು ಕುತೂಹಲ.

ಹೊಸ ಲುಕ್‌ನಲ್ಲಿ ಮಿಲನಾ ಫೋಟೊಶೂಟ್

ಹೊಸ ಲುಕ್‌ನಲ್ಲಿ ಮಿಲನಾ ಫೋಟೊಶೂಟ್

ಮಿಲನಾ ನಾಗರಾಜ್ ತಮ್ಮ ಹೊಸ ಲುಕ್‌ನ ಫೋಟೊಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ 'ಲವ್ ಮಾಕ್‌ಟೇಲ್' ಚಿತ್ರದಲ್ಲಿ ಅವರು ಬೇರೆಯದೇ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ. ಕ್ಯಾಮೆರಾ ಹಿಂದಿನ ಜವಾಬ್ದಾರಿಗಳಲ್ಲಿ ಅವರ ಪಾತ್ರ ಮುಂದುವರಿಯಲಿದೆ. ತೆರೆಯ ಮೇಲೆಯೂ ಹೊಸ 'ನಿಧಿಮಾ' ಕಾಣಿಸಿದರೂ ಅಚ್ಚರಿಯಿಲ್ಲ.

ಅಭಿಮಾನಿಗಳ ಒತ್ತಾಯ ಹೀಗಿದೆ

ಅಭಿಮಾನಿಗಳ ಒತ್ತಾಯ ಹೀಗಿದೆ

ಲವ್ ಮಾಕ್‌ಟೇಲ್ 2 ಆರಂಭದ ಮಾಹಿತಿ ತಿಳಿದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕಥೆಯನ್ನಾದರೂ ಹ್ಯಾಪಿ ಎಂಡಿಂಗ್ ಮಾಡಿ ಎಂದು ಕೇಳಿದ್ದಾರೆ. ಪಾರ್ಟ್ 2 ಯಾವ ಸಿನಿಮಾ ಕೂಡ ಯಶಸ್ಸು ಕಂಡ ಉದಾಹರಣೆ ಇಲ್ಲ. ಕಥೆಯನ್ನು ತುಂಬಾ ಯೋಚನೆ ಮಾಡಿ ಚೆನ್ನಾಗಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಮೊದಲ ಭಾಗ ಸಾಕಷ್ಟು ಕಾಡುತ್ತಿದೆ. ಎರಡನೆಯ ಭಾಗ ಮಾಡಿದರೆ ಅದು ಹಾಳಾಗುತ್ತದೆ ಎಂದು ಕೆಲವರು ಪ್ರೀತಿಯ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಈ ಭಾಗವನ್ನು ಯಾವ ಕಾರಣಕ್ಕೂ ಥಿಯೇಟರ್‌ನಲ್ಲಿಯೇ ನೋಡುತ್ತೇವೆ ಎಂದು ಮಾತು ನೀಡಿದ್ದಾರೆ.

More from Filmibeat

English summary
Love Mocktail movie director cum hero Darling Krishna has started the writing Love Mocktail-2 sequel story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X