ಮತ್ತೊಂದು ಅವಕಾಶ ಮಾಡಿಕೊಡು: ಅಗಲಿದ ಅಮ್ಮನ ನೆನಪಲ್ಲಿ 'ಜೋಗಿ' ಪ್ರೇಮ್ ಭಾವುಕ ಮಾತು

ನಟ, ನಿರ್ದೇಶಕ ಪ್ರೇಮ್ ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಲ್ಯುಕೇಮಿಯಾದಿಂದ (ರಕ್ತ ಕ್ಯಾನ್ಸರ್‌) ಬಳಲುತ್ತಿದ್ದ ಪ್ರೇಮ್ ಅವರ ತಾಯಿ ಭಾಗ್ಯಮ್ಮ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದರು.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ಕೆಲವು ತಿಂಗಳಿನಿಂದ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಅವರು ಚೇತರಿಸಿಕೊಂಡು ಬರುತ್ತಾರೆ ಎಂಬುದು ಪ್ರೇಮ್ ನಿರೀಕ್ಷೆಯಾಗಿತ್ತು. ಆದರೆ ವಿಧಿಯಾಟ ಬೇರೆಯದೇ ಇತ್ತು. ಕ್ಯಾನ್ಸರ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಭಾಗ್ಯಮ್ಮ ಅವರು ಸೋತು ಹೋದರು. ಅವರ ಮೃತದೇಹಕ್ಕೆ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ನೆಗೆಟಿವ್ ಬಂದಿತ್ತು.

ಹೀಗಾಗಿ ಭಾಗ್ಯಮ್ಮ ಅವರ ಮೃತದೇಹವನ್ನು ಕೊಂಡೊಯ್ದು ಅವರ ಶಾಸ್ತ್ರಕ್ಕೆ ಅನುಗುಣವಾಗಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಲಾಗಿತ್ತು. ಅಮ್ಮನ ಬಗ್ಗೆ ಪ್ರೇಮ್ ಬಹಳ ಭಾವುಕರಾಗಿ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಎಷ್ಟೇ ಹೋರಾಡಿದರೂ...

ಎಷ್ಟೇ ಹೋರಾಡಿದರೂ...

ತಾಯಿಯ ಜೀವವನ್ನು ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟರೂ ಅದರಲ್ಲಿ ಗೆಲ್ಲಲು ತಮ್ಮಿಂದ ಸಾಧ್ಯವಾಗಲಿಲ್ಲ ಎಂಬ ನೋವನ್ನು ಪ್ರೇಮ್ ಹಂಚಿಕೊಂಡಿದ್ದಾರೆ. 'ನಾನು ಎಷ್ಟೇ ಹೋರಾಟ ಮಾಡಿದರೂ ಕೊನೆಗೂ ನಿನ್ನನ್ನ ಉಳಿಸಿಕೊಳ್ಳಲು ಆಗಲಿಲ್ಲ' ಎಂದು ಪ್ರೇಮ್ ದುಃಖಿತರಾಗಿದ್ದಾರೆ.

ಮತ್ತೊಂದು ಅವಕಾಶ ನೀಡು

ಮತ್ತೊಂದು ಅವಕಾಶ ನೀಡು

ಪ್ರೇಮ್ ಅವರ ಮತ್ತೊಂದು ಸಾಲು ಎಂತಹವರ ಮನಸ್ಸನ್ನೂ ಕಲಕುವಂತಿದೆ. ಮತ್ತೊಮ್ಮೆ ನಿನ್ನ ಹೊಟ್ಟೆಯಲ್ಲಿ ಹುಟ್ಟಲು ಅವಕಾಶ ನೀಡು. ಆಗ ನಿನ್ನ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದು ಪ್ರೇಮ್ ಅಗಲಿದ ಅಮ್ಮನಿಗೆ ಮನವಿ ಮಾಡಿದ್ದಾರೆ. 'ನಿನ್ನ ಋಣ ತೀರ್ಸೋಕ್ ಮತ್ತೆ ನಿನ್ ಹೊಟ್ಟೇಲಿ ಹುಟ್ಟಕ್ಕ್ ನಂಗ್ ಒಂದ್ ಅವಕಾಶ ಮಾಡ್ಕೊಡು, ಯಾವತ್ತು ಕಾಯ್ತಿರ್ತೀನಿ.. ಮಿಸ್ ಯು ಅಮ್ಮ..' ಎಂದು ಪ್ರೇಮ್ ಹೇಳಿದ್ದಾರೆ.

ಮಿಸ್ ಯೂ ಅಮ್ಮ

ಮಿಸ್ ಯೂ ಅಮ್ಮ

ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ್ ಅಮ್ಮನ ಅಗಲುವಿಕೆಯ ನೋವನ್ನು ಹಂಚಿಕೊಂಡಿದ್ದಾರೆ. ಮಿಸ್ ಯೂ ಅಮ್ಮಾ ಎಂದು ತಾಯಿಯ ಫೋಟೊದೊಂದಿಗೆ ಅಮ್ಮ ಇನ್ನಿಲ್ಲ ಎಂಬ ದುಃಖ ವ್ಯಕ್ತಪಡಿಸಿದ್ದಾರೆ. ಪ್ರೇಮ್ ನಿರ್ದೇಶನದ ಇದುವರೆಗಿನ ಪ್ರತಿ ಚಿತ್ರಗಳಲ್ಲಿಯೂ ತಾಯಿ ಸೆಂಟಿಮೆಂಟ್ ದೃಶ್ಯಗಳು ಇದ್ದೇ ಇರುತ್ತಿತ್ತು. ತಾಯಿ ಪ್ರೀತಿಯ ಭಾವನೆಗಳನ್ನು ಅವರು ಸಿನಿಮಾದಲ್ಲಿ ಜನರಿಗೆ ಬಹಳ ಹತ್ತಿರವಾಗುವಂತೆ ಕಟ್ಟಿಕೊಡುತ್ತಿದ್ದರು.

ಸಾಂತ್ವನ ಹೇಳಿರುವ ಜಗ್ಗೇಶ್

ಸಾಂತ್ವನ ಹೇಳಿರುವ ಜಗ್ಗೇಶ್

ತಾಯಿಗಿಂತ ದೇವರಿಲ್ಲ. ಆ ದೇವರು ಮರೆಯಾದಾಗ ಆಗುವ ನೋವು ಏನು ಎಂದು ಅನುಭವಿಸಿದವ ನಾನು. ವಿಶ್ವದಲ್ಲಿ ಯಾವ ದೇವರು ಅಮ್ಮನ ಸಮವಲ್ಲ. ಸಾಧಕನ ಯೋಗ ತಾಯಿಯ ಆಶೀರ್ವಾದ ಫಲವೇ ವಿನಾ ಬೇರೆ ಯಾವ ದೇವರ ಫಲವು ಅಲ್ಲ. ಆ ದೇವರ ಕಳೆದುಕೊಂಡ ದುಃಖ ತಡೆಯುವ ಶಕ್ತಿ ದೇವರು ನಿಮಗೆ ನೀಡಲಿ...ಓಂಶಾಂತಿ.. ಎಂದು ನಟ ಜಗ್ಗೇಶ್ ಸಾಂತ್ವನದ ಮಾತನ್ನಾಡಿದ್ದರು. ಅದಕ್ಕೆ ಪ್ರೇಮ್ ಧನ್ಯವಾದ ಸಲ್ಲಿಸಿದ್ದಾರೆ.

ಫಾರ್ಮ್‌ಹೌಸ್ ವಿಡಿಯೋ ಹಾಕಿದ್ದ ಪ್ರೇಮ್

ಫಾರ್ಮ್‌ಹೌಸ್ ವಿಡಿಯೋ ಹಾಕಿದ್ದ ಪ್ರೇಮ್

ಭಾಗ್ಯಮ್ಮ ಅವರ ಅಂತ್ಯಸಂಸ್ಕಾರವನ್ನು ಮಂಡ್ಯದ ಬೆಸಗರಹಳ್ಳಿಯಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ವಿಧಿವಿಧಾನಗಳಗೆ ಅನುಗುಣವಾಗಿ ನೆರವೇರಿತ್ತು. ವಿಪರ್ಯಾಸವೆಂದರೆ ಪ್ರೇಮ್ ಅವರು ಕೆಲವು ದಿನಗಳ ಹಿಂದಷ್ಟೇ ಈ ಫಾರ್ಮ್‌ನ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ನನ್ನ ಅಚ್ಚುಮೆಚ್ಚಿನ ಜಾಗ ಎಂದು ಅವರು ಪಂಪ್‌ನಿಂದ ನೀರು ಚಿಮ್ಮುತ್ತಿರುವ ವಿಡಿಯೋದೊಂದಿಗೆ ಹೇಳಿಕೊಂಡಿದ್ದರು.

More from Filmibeat

English summary
Jogi film fame director Prem has written an emotional note about his demised mother Bhagyamma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X