ಟ್ವಿಟರ್‌ನಲ್ಲಿ 'ಮಫ್ತಿ' ನಿರ್ದೇಶಕನ ನಕಲಿ ಖಾತೆ: ಯಶ್ 19ನೇ ಚಿತ್ರದ ಬಗ್ಗೆ ನರ್ತನ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಬರ್ತ್‌ಡೇ ದಿನ ಅಭಿಮಾನಿಗಳಿಗೆ 'ಕೆಜಿಎಫ್ 2' ಚಿತ್ರತಂಡದಿಂದ ಒಂದೇ ಒಂದು ಫೋಸ್ಟ್ ಬಿಟ್ಟರೆ, ಬೇರೆ ಏನೂ ಸರ್ಪ್ರೈಸ್ ಸಿಕ್ಕಿರಲಿಲ್ಲ. ಇದೇ ನಿರಾಸೆಯಲ್ಲಿ ಇದ್ದವರಿಗೆ ನಿರ್ದೇಶಕ ನರ್ತನ್ ಸಿಹಿ ಸುದ್ದಿ ನೀಡಿದ್ದರು. ಯಶ್ 19 ಸಿನಿಮಾ ಶೀಘ್ರವೇ ಸೆಟ್ಟೇರುತ್ತೆ ಅನ್ನುವ ಸುಳಿವು ನೀಡಿದ್ದರು. ಇಷ್ಟೇ ಅಲ್ಲ ಟೀಸರ್ ಯಾವಾಗ ರಿಲೀಸ್ ಆಗುತ್ತೆ ಅನ್ನುವ ಮಾಹಿತಿಯನ್ನು ನೀಡಲಾಗಿತ್ತು. ಈ ಟ್ವೀಟ್ ನೋಡಿ ಯಶ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರು.

ಯಶ್ ಅಭಿಮಾನಿಗಳು ಇಷ್ಟೊಂದು ಖುಷಿಯಾಗಿ ಇರುವುದಕ್ಕೆ ಕಾರಣವಿದೆ. ಕಳೆದ ಮೂರು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ ನಟಿಸಿದ ಒಂದೇ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಹೀಗಾಗಿ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ಬೆಳ್ಳಿಪರದೆ ಮೇಲೆ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ವೇಳೆ ಯಶ್ ಹುಟ್ಟುಹಬ್ಬಕ್ಕೆ ನರ್ತನ್ ಟ್ವೀಟ್ ಕಂಡು ಫುಲ್ ಖುಷಿಯಾಗಿದ್ದರು. ಆದ್ರೀಗ ಇದು ನಕಲಿ ಟ್ವೀಟ್ ಎಂದು ನಿರ್ದೇಶಕ ನರ್ತನ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

'ಮಫ್ತಿ' ನಿರ್ದೇಶಕನ ಹೆಸರಲ್ಲಿ ನಕಲಿ ಟ್ವೀಟ್

'ಮಫ್ತಿ' ನಿರ್ದೇಶಕನ ಹೆಸರಲ್ಲಿ ನಕಲಿ ಟ್ವೀಟ್

ಬಹಳ ದಿನಗಳಿಂದಲೂ ಯಶ್‌ಗೆ 'ಮಫ್ತಿ' ಸಿನಿಮಾದ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎಂಬುವ ಸುದ್ದಿ ಹರಿದಾಡುತ್ತಿದೆ. 'ಕೆಜಿಎಫ್ 2' ಸಿನಿಮಾ ಬಳಿಕ ಯಶ್ 'ಮಫ್ತಿ' ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲೇ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು. ಇದೇ ವೇಳೆ ನರ್ತನ್ ಹೆಸರಿನಲ್ಲಿ ಯಶ್ 19ನೇ ಸಿನಿಮಾ ಬಗ್ಗೆ ಟ್ವೀಟ್ ಮಾಡಲಾಗಿತ್ತು. ಇದು ಸ್ವತ: ನರ್ತನ್ ಅವರೇ ಟ್ವೀಟ್ ಮಾಡಿದ್ದಾರೆ ಎಂದು ಎಲ್ಲರೂ ನಂಬಿದ್ದರು. ಹೀಗೆ ನಂಬುವುದಕ್ಕೆ ಪ್ರಮುಖ ಕಾರಣ ಶ್ರೀ ಮುರಳಿ.

ಮದಗಜ ಚಿತ್ರಕ್ಕೆ ಶ್ರೀಮುರಳಿ ಪ್ರತಿಕ್ರಿಯೆ

ಮದಗಜ ಚಿತ್ರಕ್ಕೆ ಶ್ರೀಮುರಳಿ ಪ್ರತಿಕ್ರಿಯೆ

ನರ್ತನ್ ಹೆಸರಿನಲ್ಲಿ ಮಾಡಿದ ಟ್ವೀಟ್ ನಕಲಿ ಎನ್ನುವ ಅನುಮಾನ ಬರಲು ಸಾಧ್ಯವಿರಲಿಲ್ಲ. ಯಾಕೆಂದರೆ, ನರ್ತನ್ ಟ್ವಿಟರ್ ಖಾತೆಯಲ್ಲಿ ಅಫಿಷಿಯಲ್ ಎಂದು ಬರೆಯಲಾಗಿತ್ತು. ಇನ್ನೊಂದು ಕಡೆ ಸ್ವತ: ರೋರಿಂಗ್ ಶ್ರೀ ಮುರಳಿ ಇದೇ ಟ್ವೀಟ್‌ಗೆ ರಿಪ್ಲೈ ಮಾಡಿದ್ದರು. ನರ್ತನ್ ಹಾಗೂ ಯಶ್‌ಗೆ ಶುಭಾಶಯಗಳನ್ನು ತಿಳಿಸಿದ್ದರು. ಹೀಗಾಗಿ ಅಭಿಮಾನಿಗಳು ಸೇರಿದಂತೆ ಎಲ್ಲರೂ ಇದು ನಿಜವಾದ ಟ್ವೀಟ್ ಎಂದು ನಂಬಿದ್ದರು. ಆದ್ರೀಗ, ಸ್ವತ: ನಿರ್ದೇಶಕ ನರ್ತನ್ ಇದು ನಕಲಿ ಟ್ವೀಟ್ ಎಂದು ಸ್ಪಷ್ಪಪಡಿಸಿದ್ದಾರೆ.

ನಕಲಿ ಖಾತೆ ಬಗ್ಗೆ ನರ್ತನ್ ಹೇಳಿದ್ದೇನು?

ನಕಲಿ ಖಾತೆ ಬಗ್ಗೆ ನರ್ತನ್ ಹೇಳಿದ್ದೇನು?

"ಯಾರೋ ನನ್ನ ನಕಲಿ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ಈ ಖಾತೆ ಮೂಲಕವೇ ಯಶ್ ಹುಟ್ಟುಹಬ್ಬದ ದಿನ ಅವರ 19ನೇ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ, ಇದು ನನ್ನ ಖಾತೆಯಲ್ಲ. ನಾನು ಟ್ಟಿಟರ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ಹೀಗಾಗಿ ಅಧಿಕೃತವಾಗಿ ನಾವೇ ಹೇಳುವವರೆಗೂ ಯಾವುದನ್ನೂ ನಂಬಬೇಡಿ." ಎಂದು ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ಶಿವು ಅಡ್ಡ ತಂಡಕ್ಕೆ ನಕಲಿ ಖಾತೆ

ಶಿವು ಅಡ್ಡ ತಂಡಕ್ಕೆ ನಕಲಿ ಖಾತೆ

ನರ್ತನ್ ಈಗಾಗಲೇ ನಕಲಿ ಖಾತೆಯನ್ನು ರಿಪೋರ್ಟ್ ಮಾಡಲು ಮುಂದಾಗಿದ್ದಾರೆ. ಶಿವು ಅಡ್ಡ ತಂಡಕ್ಕೆ ಈ ನಕಲಿ ಖಾತೆಗಳನ್ನು ನೀಡಿದ್ದು, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂಗೆ ರಿಪೋರ್ಟ್ ಮಾಡುವಂತೆ ತಿಳಿಸಿದ್ದಾರೆ. ಈ ನಕಲಿ ಖಾತೆಗಳ ಬಗ್ಗೆ ಶಿವು ಅಡ್ಡ ತಂಡ ವರದಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಯಶ್ ಮುಂದಿನ ಸಿನಿಮಾವನ್ನು ನರ್ತನ್ ಅವರೇ ನಿರ್ದೇಶನ ಮಾಡುತ್ತಾರಾ? ಇಲ್ಲವಾ? ಯಶ್ 19 ನೇ ಸಿನಿಮಾ ಬಗ್ಗೆ ಮಾಹಿತಿ ಯಾವಾಗ ಸಿಗುತ್ತೆ ಎನ್ನುವುದರ ಬಗ್ಗೆ ನರ್ತನ್ ಮಾಹಿತಿ ನೀಡಿಲ್ಲ. ಎಲ್ಲದಕ್ಕೂ ಇನ್ನು ಸ್ವಲ್ಪ ದಿನ ಕಾಯಬೇಕು ಎಂದು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

More from Filmibeat

English summary
Director Narthan reaction about his fake account and Yash 19th movie. His account has been faked and reported in social media Nathan said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X