"ನನಗೆ ರೇ* ಮಾಡುವಂತಹ ಶಕ್ತಿ ಇಲ್ಲ"; ಯಾಕಿಂಗಂದ್ರು ಓಂ ಪ್ರಕಾಶ್ ರಾವ್ ?

ಕನ್ನಡ ಚಿತ್ರರಂಗದ ಅಪರೂಪ ನಿರ್ದೇಶಕರಲ್ಲಿ ಓಂ ಪ್ರಕಾಶ್ ರಾವ್ ಕೂಡ ಒಬ್ಬರು. ಹಾಗಂತ ವಿಶಿಷ್ಠವಾದ ಸಿನಿಮಾ ಮಾಡಿದ್ದಾರೆ ಅಂತಲ್ಲ. ಆದರೆ, ಕನ್ನಡ ಚಿತ್ರರಂಗಕ್ಕೆ ಒಳ್ಳೊಳ್ಳೆ ಮಾಸ್ ಸಿನಿಮಾಗಳನ್ನು ಕೊಟ್ಟವರು ಓಂ ಪ್ರಕಾಶ್ ರಾವ್. ಕನ್ನಡ ಚಿತ್ರರಂಗಕ್ಕೆ ಸೂಪರ್‌ಸ್ಟಾರ್‌ಗಳನ್ನು ಕೊಟ್ಟ ನಿರ್ದೇಶಕ ಇವರು. ಆಕ್ಷನ್ ಸಿನಿಮಾಗಳನ್ನ ಹೆಚ್ಚು ನಿರ್ದೇಶನ ಮಾಡಿರುವ ಇವರು 50 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

'ಗೆರಿಲ್ಲ ವಾರ್' ಸಿನಿಮಾ ನಿರ್ದೇಶನದ ಮೂಲಕ 50ನೇ ಸಿನಿಮಾದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಸಿನಿಮಾಗಳಲ್ಲಿ ಶೇ.50ಕ್ಕೂ ಹೆಚ್ಚು ಸಕ್ಸಸ್ ರೇಟ್ ಇದೆ. ಮಾಸ್ ಸಿನಿಮಾಗಳು ಅಂದರೆ, ನೆನಪಾಗುತ್ತಿದ್ದದ್ದೇ ಓಂ ಪ್ರಕಾಶ್ ರಾವ್. ಆದರೆ, ಇತ್ತೀಚೆಗೆ ಸಿನಿಮಾಗಳಿಂದ ಕೊಂಚ ಮಟ್ಟಿಗೆ ದೂರವೇ ಇದ್ದರು. ಈಗ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

Director Om Prakash Rao said about his closeness with actress in Kannada film industry

ಓಂ ಪ್ರಕಾಶ್ ರಾವ್ ಸಿನಿಮಾ ನಿರ್ದೇಶನ ಒಂದು ಕಡೆಯಾದರೆ, ಇವರ ಮಾತುಗಳು ಕೂಡ ಅಷ್ಟೇ ಚರ್ಚೆಗೆ ಒಳಗಾಗುತ್ತೆ. ಇದ್ದಿದ್ದನ್ನು ಇದ್ದಂಗೆ ಹೇಳುವ, ಬಾಯ್ತುಂಬ ಬೈಯ್ಯುವ ನಿರ್ದೇಶಕ ಅಂತನೂ ಕರೆಯುತ್ತಾರೆ. ಇತ್ತೀಚೆಗೆ 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರಲ್ಲೂ ಓಂ ಪ್ರಕಾಶ್ ರಾವ್ ಯಾರನ್ನೂ ಬಿಡಲ್ವಂತೆ ಅನ್ನೋ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ. ಅದರದ್ದೊಂದು ಝಲಕ್ ಇದೆ.

"ಹೆಣ್ಣು ಮಕ್ಕಳಿಗೆ ಗೌರವ ಕೊಡ್ತೇನೆ"

ಓಂ ಪ್ರಕಾಶ್ ರಾವ್ ಬಗ್ಗೆ ಚಿತ್ರರಂಗದಲ್ಲಿ ಕೆಲವು ಅಭಿಪ್ರಾಯಗಳಿವೆ. ಅದರಲ್ಲಿ ಯಾರನ್ನೂ ಬಿಡಲ್ವಂತೆ ಅನ್ನೋದು ಒಂದು ಆರೋಪ. ಇದಕ್ಕೆ ನಿರ್ದೇಶಕರು ಕೊಟ್ಟ ಉತ್ತರವಿದೆ. "ನನ್ನ ಜೊತೆ ಕೆಲಸ ಮಾಡುವ ಹೀರೋಯಿನ್‌ಗಳು ಐದೈದು ಆರಾರು ಸಿನಿಮಾಗಳನ್ನು ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ನಾನೆಷ್ಟು ಗೌರವ ಕೊಡುತ್ತೇನೆ ಅಂತ ಲೆಕ್ಕ ಹಾಕಿ. ನಾನು ಸರಿಯಿಲ್ಲ ಅಂದರೆ ಮೊದಲ ಸಿನಿಮಾಗೆ ಓಡಿ ಹೋಗುತ್ತಾರೆ. ಎರಡು ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಬೈದಿದ್ದಾರೆ. ಯಾಕೆ ಬೇರೆ ಹೀರೋಯಿನ್‌ಗಳನ್ನು ಹಾಕೋತಿರಾ ಅಂತ ಬೈದಿದ್ದಾರೆ. ಫಸ್ಟ್ ಸಿನಿಮಾದಲ್ಲಿ ನಾನು ಚೆನ್ನಾಗಿ ನಟಿಸಿಲ್ವಾ? ಅಂತ ಬೈದಿದ್ದಾರೆ." ಎಂದು ಹೇಳಿದ್ದಾರೆ.

"ರೇ* ಮಾಡುವ ಶಕ್ತಿಯಂತೂ ಇಲ್ಲ"

ಓಂ ಪ್ರಕಾಶ್ ರಾವ್ ಅವರ ಸಿನಿಮಾದಲ್ಲಿ ಕೆಲಸ ಮಾಡುವ ಯಾರನ್ನೂ ಬಿಡೋದಿಲ್ಲ ಎಂಬ ಟೀಕೆಗಳು ಬಂದಿವೆಯಂತೆ. ಆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಓಂ ಪ್ರಕಾಶ್ ರಾವ್ ಯಾರನ್ನೂ ಬಿಡಲ್ವಂತೆ. ಎಲ್ಲರನ್ನೂ ಹತ್ತಿರ ಕರೆದುಕೊಂಡು ಬಿಡ್ತಾನೆ. ಏನಾದರೂ ಮಾಡಿಬಿಡ್ತಾನೆ. ಆ ಟೈಮ್‌ನಲ್ಲಿ ಅವರೇನು ಮಾಡುತ್ತಿರುತ್ತಾರೆ? ಏನೇ ಮಾಡಿದರೂ ಸುಮ್ಮನೆ ಇರುತ್ತಾರಾ? ರೇ*ಪ್ ಮಾಡುವ ಶಕ್ತಿಯಂತೂ ಇಲ್ಲ. ಆತರ ಯಾವುದೇ ರೂಮರ್ ಯಾವುದೂ ಇಲ್ಲ. ಯಾಕೆ ಸುಮ್ಮನೆ ಹೀಗೆಲ್ಲ ಮಾತಾಡುತ್ತಾರೆ? ಇದು ನನ್ನ ಬಗ್ಗೆ ಇರುವ ದೊಡ್ಡ ರೂಮರ್." ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

Director Om Prakash Rao said about his closeness with actress in Kannada film industry

"ಕೆಲಸ ಮಾಡುವಾಗ ನಾಚಿಕೆ ಪಡಬಾರದು"

ಇಂದಿನ ಪೀಳಿಗೆ ನಟರು ಕೆಲಸ ಮಾಡುವುದಕ್ಕೆ ನಾಚಿಕೆ ಪಡುತ್ತಾರೆ ಅಂತ ಆರೋಪಿಸಿದ್ದಾರೆ. "ಕೆಲಸ ಮಾಡಬೇಕಾದರೆ ನಾಚಿಕೆ ಪಡಬಾರದು. ನನ್ನ ಕೆಲಸ ಏನು ಸಗಣಿ ಎತ್ತೋದೊ, ಕಸ ಗುಡಿಸೋದೋ ಮಾಡಬೇಕು, ಯಾರು ಮಾಡುತ್ತಾರೋ ಇಲ್ಲವೋ ನಾನು ಮಾಡುತ್ತೇನೆ. ಇವತ್ತು ನಾನು ಮಾಡುತ್ತೇನೆ. ನಾನು ನನ್ನ ಅಮ್ಮ ಏಳು ಹಸುಗಳನ್ನು ಸಾಕಿ, ದಿನಾ ಹಸುಗಳನ್ನು ತೊಳೆಯುತ್ತಿದ್ವಿ. ಸೆಟ್‌ನಲ್ಲಿ ಯಾರೋ ಬಂದಿಲ್ಲ ಅಂದರೆ ನಾನೇ ಮಾಡುತ್ತೇನೆ." ಎಂದಿದ್ದಾರೆ.

ನಾನೇ ಸರಿಯಿಲ್ಲ ನೋ ಪ್ರಾಬ್ಲಮ್

ತಮ್ಮ ಬಗ್ಗೆ ಹರಿದಾಡಿದ್ದ ಮತ್ತೊಂದು ಗಂಭೀರ ಆರೋಪದ ಬಗ್ಗೆನೂ ಮಾತಾಡಿದ್ದಾರೆ. "ಮದುವೆ ಆಗಿದ್ದಾನೆ. ಮಗು ಇತ್ತು. ಅವರನ್ನು ಬಿಟ್ಬಿಟ್ಟ ಓಂ ಪ್ರಕಾಶ್ ಸರಿಯಿಲ್ಲ ಅಂತ ರೂಮರ್ ಇದೆ. ನಾನು ಒಳ್ಳೆಯವನಾ? ಕೆಟ್ಟವನಾ? ನನ್ನನ್ನ ನಾನು ಯಾವ ರೀತಿ ಜಡ್ಜ್ ಮಾಡಬೇಕು ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ನನಗೆ ಅವರ ಜೊತೆ ಜೀವನ ಮಾಡುವ ಅವಕಾಶ ಸಿಗಲಿಲ್ಲವೇನೋ. ಅವರೇ ಒಳ್ಳೆಯವರಿರಬಹುದು. ನಾನೇ ಕೆಟ್ಟವನಿರಬಹುದು. ನಾನೇ ಸರಿಯಿಲ್ಲದಿರಬಹುದು. ನೋ ಪ್ರಾಬ್ಲಮ್." ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

More from Filmibeat

English summary
Director Om Prakash Rao said about his closeness with actress in Kannada film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X