'ಕಬ್ಜ'ದಲ್ಲಿ ಶಿವರಾಜ್‌ಕುಮಾರ್ ಇರ್ತಾರಾ? ಇಲ್ವಾ? ಅಮಿತಾಬ್ ಬಚ್ಚನ್‌ ಭೇಟಿ ಮಾಡಿದ್ರಾ ಆರ್.ಚಂದ್ರು?

2023ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'. ಕಳೆದ ವರ್ಷ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡಿದ್ದಂತೆ ಈ ವರ್ಷನೂ ಮಾಡುತ್ತಾ? ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ಈ ಗ್ಯಾಪ್‌ನಲ್ಲೇ 'ಕಬ್ಜ' ಸಿನಿಮಾದ ಒಂದು ಇಮೇಜ್ ವೈರಲ್ ಆಗಿತ್ತು. ಸಿನಿಮಾದ ಒಂದೇ ಪ್ರೇಮ್‌ನಲ್ಲಿ ಉಪೇಂದ್ರ,ಕಿಚ್ಚ ಸುದೀಪ್ ಜೊತೆ ಮತ್ತೊಬ್ಬ ನಟ ಓಡಾಡಿದ ಫೋಟೊ ವೈರಲ್ ಆಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದವು. ಆ ಮೂರನೇ ಇಮೇಜ್ ಶಿವರಾಜ್‌ಕುಮಾರ್ ಅವರದ್ದು ಎಂದು ವೈರಲ್ ಆಗಿತ್ತು.

ಈಗ ಸ್ವತ: 'ಕಬ್ಜ' ಸಿನಿಮಾದ ನಿರ್ದೇಶಕ ಆರ್ ಚಂದ್ರು ಮೂರನೇ ಸ್ಟಾರ್‌ ನಟನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಇದ್ದಾರಾ? ಅಮಿತಾಬ್ ಬಚ್ಚನ್ ಭೇಟಿ ಮಾಡಿದ್ರಾ ಇಲ್ವಾ? ಇಂತಹ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಸಿನಿಮಾದಲ್ಲಿರೋ ಸರ್ಪ್ರೈಸ್‌ಗಳ ಬಗ್ಗೆನೂ ಮಾತಾಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಿರ್ದೇಶಕ 'ಕಬ್ಜ'ದ ಕೆಲವು ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ವೈರಲ್ ಆದ ಫೋಟೊದಲ್ಲಿ ಇರೋದ್ಯಾರು?

ವೈರಲ್ ಆದ ಫೋಟೊದಲ್ಲಿ ಇರೋದ್ಯಾರು?

"ಕಬ್ಜ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಸಿನಿಮಾದಲ್ಲಿ ಒಂದಷ್ಟು ಕುತೂಹಲಗಳಿವೆ. ಅದನ್ನು ನಾನು ಈಗ ಹೇಳಿಬಿಟ್ಟರೆ, ನಿಮಗೆ ಏನೂ ಗೊತ್ತಾಗುವುದಿಲ್ಲ. ಇನ್ನೂ ಯಾರೆಲ್ಲಾ ಇದ್ದಾರೆ ಅಂತ ಗೊತ್ತಾದ್ರೆ, ಇವರೆಲ್ಲಾ ಇದ್ದಾರಾ ಅಂತ ಅನಿಸುತ್ತೆ. ನಾನು ಈಗ ರಿವೀಲ್ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಸರಿಯಾದ ಸಮಯದಲ್ಲಿ ಯಾರೆಲ್ಲಾ ಇದ್ದಾರೆ ಅಂತ ಲಿಸ್ಟ್ ಬಿಡುತ್ತೇನೆ." ಎಂದು ಹೇಳಿದ್ದಾರೆ. ಈ ಮೂಲಕ ಶಿವಣ್ಣ 'ಕಬ್ಜ' ಇದ್ದಾರಾ? ಅನ್ನೋ ಪ್ರಶ್ನೆಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಅಮಿತಾಬ್ ಭೇಟಿ ಮಾಡಿದ್ರಾ ಆರ್ ಚಂದ್ರು?

ಅಮಿತಾಬ್ ಭೇಟಿ ಮಾಡಿದ್ರಾ ಆರ್ ಚಂದ್ರು?

"ಎಲ್ಲರಿಗೂ ಆ ತರದ್ದೊಂದು ಪುಣ್ಯ ಸಿಗುವುದಿಲ್ಲ. ಅಂತಹದ್ದೊಂದು ಅವಕಾಶ ಸಿಕ್ಕಿತೇನೋ ಅಂತ ಅಂದುಕೊಳ್ಳುತ್ತೇನೆ.ನಮ್ಮ ಸಿನಿಮಾವನ್ನು ವಿತರಣೆ ಮಾಡುತ್ತಿರುವವರು ಆನಂದ್ ಪಂಡಿತ್. ಅವರಿಗೆ ಎಲ್ಲಾ ಸ್ಟಾರ್ ನಟರು ಸುಲಭವಾಗಿ ಸಿಗುತ್ತಾರೆ. ನಮ್ಮ ಸಿನಿಮಾವನ್ನು ಅವರು ನೋಡಿ, ವಿತರಣೆ ಮಾಡುತ್ತಿದ್ದಾರೆ. ಆಗ ನಾನು ಅವರಿಗೆ ಕೇಳಿದಾಗ, ಮೂವರು ಸ್ಟಾರ್‌ಗಳು ಟ್ರೈಲರ್‌ ಲಾಂಚ್‌ಗೆ ಬರುತ್ತಾರೆ ಎಂದು ಹೇಳಿದ್ದರು. ಅಮಿತಾಬ್ ಬಚ್ಚನ್ ಅಂತಹ ಮೇರು ನಟರು ಬಂದು ಲಾಂಚ್‌ ಮಾಡಿದರೆ, ಆಶೀರ್ವಾದವಿರುತ್ತೆ ಎಂದು ಹೇಳಿದ್ದೆ. ನನಗೂ ಅವರೊಂದಿಗೆ ಒಂದು ಫೋಟೊ ತೆಗೆದುಕೊಳ್ಳಬೇಕು ಅಂತ ಆಸೆಯಿದೆ ಎಂದಿದ್ದೆ. ಆಗ ಅವರು ಮೊಬೈಲ್‌ನಲ್ಲಿ ಇದ್ದಂತ ಚಾಟ್ ತೋರಿಸಿ ಹೇಳಿದ್ರು. ನೀನು ಮಾಡಿರೋ ಸಿನಿಮಾ ಅವರೇ ಕಾಯುವ ಹಾಗೆ ಆಗಿದೆ ಎಂದ್ರು." ಎಂದು ಅಮಿತಾಬ್ ಬಚ್ಚನ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.

ಮುಂಬೈನಲ್ಲಿ ಟ್ರೈಲರ್.. ಚೆನ್ನೈ, ಕೊಚ್ಚಿಯಲ್ಲಿ ಸಾಂಗ್

ಮುಂಬೈನಲ್ಲಿ ಟ್ರೈಲರ್.. ಚೆನ್ನೈ, ಕೊಚ್ಚಿಯಲ್ಲಿ ಸಾಂಗ್

"ಒಂದು ಸಿನಿಮಾ ಮಾಡುವುದೇ ಕಷ್ಟ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಅಂದಾಗ, ಮೊದಲನೇ ಹಾಡಿನ ಲಿರಿಕಲ್ ವಿಡಿಯೋವನ್ನು ಹೈದರಾಬಾದ್‌ನಲ್ಲಿ ರಿಲೀಸ್ ಮಾಡಿದ್ದೇವೆ. ಟ್ರೈಲರ್‌ನ ಮುಂಬೈನಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಇನ್ನೊಂದು ಹಾಡನ್ನು ಚೆನ್ನೈನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಕೊಚ್ಚಿಯಲ್ಲಿ ಒಂದು ಸಾಂಗ್ ರಿಲೀಸ್ ಮಾಡುತ್ತಿದ್ದೇವೆ. ಇಡೀ ಇಂಡಿಯಾ ಪ್ರವಾಸ ಮಾಡಿ ಪ್ರಮೋಷನ್ ಮಾಡಿ, ಅಲ್ಲಿ ಗೆದ್ದಾಗಲೇ ಕನ್ನಡ ಇಂಡಸ್ಟ್ರಿಯ ಬಾವುಟ ಹಾರಿಸಿದ ಹಾಗೆ ಆಗುತ್ತೆ." ಎಂದು ಆರ್. ಚಂದ್ರು ರಿವೀಲ್ ಮಾಡಿದ್ದಾರೆ.

ಹೀರೊಯಿನ್ ಸೋಲೊ ಸಾಂಗ್ ಯಾವಾಗ?

ಹೀರೊಯಿನ್ ಸೋಲೊ ಸಾಂಗ್ ಯಾವಾಗ?

"ಆದಷ್ಟು ಬೇಗ ಇನ್ನೊಂದು ಹಾಡನ್ನು ರಿಲೀಸ್ ಮಾಡುತ್ತೇವೆ. ಅದೊಂದು ಹೀರೊಯಿನ್ ಸೋಲೊ ಸಾಂಗ್. ಶಿವರಾತ್ರಿ ಮತ್ತು ವ್ಯಾಲೆಂಟೈನ್ಸ್ ಡೇ ಇರೋದ್ರಿಂದ ಹೀರೊಯಿನ್ ಸೋಲೊ ಸಾಂಗ್ ಒಂದನ್ನು ಪ್ಲ್ಯಾನ್ ಮಾಡಿದ್ದೇವೆ. ಫೆಬ್ರವರಿ 15 ಅಥವಾ 16 ಅಂತ ಪ್ಲ್ಯಾನ್ ಮಾಡಿದ್ದೇವೆ. ಆದಷ್ಟು ಬೇಗನೇ ಲಾಂಚ್ ಮಾಡುತ್ತೇವೆ."

More from Filmibeat

English summary
Director R Chandru Reaction About Shivarajkumar In Upendra,Sudeep Starrer Kabzaa, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X