ಆಕ್ಟರ್ ಆದ ಡಾಕ್ಟರ್: 'ಲವ್‌ 360' ಎಂದ ನಿರ್ದೇಶಕ ಶಶಾಂಕ್

'ಕೃಷ್ಣನ್ ಲವ್ ಸ್ಟೋರಿ'ಯಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿರುವ ಶಶಾಂಕ್ ಮತ್ತೊಂದು ಲವ್ ಸ್ಟೋರಿಯನ್ನು ಹೊತ್ತು ಬಂದಿದ್ದಾರೆ. ಲವ್ ಸ್ಟೋರಿಯನ್ನು ಹೆಣೆಯುವುದರಲ್ಲಿ ಫೇಮಸ್ ಆಗಿರುವ ನಿರ್ದೇಶಕ ಹೊಸಬರೊಂದಿಗೆ ಹೊಸ ಕಥೆಯೊಂದನ್ನು ಹೊತ್ತು ಬಂದಿದ್ದಾರೆ.

'ಮೊಗ್ಗಿನ ಮನಸ್ಸು' ಸಿನಿಮಾದಿಂದ 'ಕೃಷ್ಣನ್ ಲವ್ ಸ್ಟೋರಿ' ಯಂತಹ ಅದ್ಭುತ ಪ್ರೇಮ್ ಕಹಾನಿಯನ್ನು ಶಶಾಂಕ್ ನಿರ್ದೇಶಿಸಿದ್ದಾರೆ. ಈಗ ಅವರದ್ದೇ ಹೊಸ ಸಿನಿಮಾ 'ಲವ್ 360' ಟ್ರೈಲರ್ ಬಿಡುಗಡೆಯಾಗಿದ್ದು, ಯುವಕರಿಗೆ ಹಾಗೂ ಸಿನಿಪ್ರಿಯರಿಗೆ ಇಷ್ಟ ಆಗಿದೆ.

ಆಕ್ಟರ್ ಆದ ಡಾಕ್ಟರ್ ಪ್ರವೀಣ್

ಲವ್ 360 ಬಗ್ಗೆ ನಿರ್ದೇಶಕ ಶಶಾಂಕ್ ಮನಬಿಚ್ಚಿ ಮಾತಾಡಿದ್ದಾರೆ. "ಮೂರುವರ್ಷಗಳ ಬಳಿಕ 'ತಾಯಿಗೆ ತಕ್ಕ ಮಗ' ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್ ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಿದು. ನಾನು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು.‌ ಅದು ದೊಡ್ಡಮಟ್ಟದ ಚಿತ್ರ. ಚಿತ್ರೀಕರಣಕ್ಕೆ ಕೊರೊನಾ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ. ಹಾಗಾಗಿ ಆ ಚಿತ್ರ ಮುಂದೂಡಿ, ಈ ಚಿತ್ರ ಆರಂಭ ಮಾಡಿದೆ. ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು. ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ." ಎಂದು ಭರವಸೆಯ ಮಾತುಗಳನ್ನಾಗಿದ್ದಾರೆ.

Director Shashank New Movie Love 360 Will Be Releasing Soon

ಲವ್ 360 ಸಿನಿಮಾದ ಹೀರೊ ಪ್ರವೀಣ್ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಪ್ರವೀಣ್ ಅವರ ಆಸ್ಪತ್ರೆ ಇದೆ. ಪ್ರವೀಣ್ ತಂದೆ ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ‌ ಹೆಸರುವಾಸಿಯಾಗಿದ್ದರು. ಅಂದ್ಹಾಗೆ ಪ್ರವೀಣ್ ಎಂ.ಬಿ.ಬಿ.ಎಸ್ ಓದಿದ್ದು, ನಟನೆಯಲ್ಲೇ ಹೆಚ್ಚು ಆಸಕ್ತಿ. ಪ್ರವೀಣ ತಾಯಿ ಸಿನಿಮಾ ಆಸಕ್ತಿ ಬಗ್ಗೆ ಹೇಳಿದಾಗ, ಶಶಾಂಕ್ ಅವರೊಂದಿಗೆ ಕೈ ಜೋಡಿಸಿ ಸಿನಿಮಾ ಮಾಡಿದ್ದಾರೆ.

ನಟನೆಗೆ ಬೇಕಾದ ಎಲ್ಲಾ ತಯಾರಿಯನೂ ಆಗಿದೆ

ಪ್ರವೀಣ್‌ಗೆ ನಟನೆಗೆ ಬೇಕಾದ ಎಲ್ಲಾ ತಯಾರಿ ನೀಡಲಾಗಿತ್ತು. ಆ ಬಳಿಕವೇ ಸಿನಿಮಾ ಆರಂಭ ಮಾಡಲಾಗಿದೆ. ಈ ಸಿನಿಮಾಗೆ ರಚನಾ ಇಂದರ್ ಈ ಚಿತ್ರದ ನಾಯಕಿ. ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ಹೈಲೈಟ್ ಅಂದರೆ, ಅರ್ಜುನ್ ಜನ್ಯ ಸಂಗೀತ. ಸಿದ್ ಶ್ರೀರಾಮ್ ಹಾಗೂ ಸಂಚಿತ್ ಹೆಗಡೆ ರೊಮ್ಯಾಂಟಿಕ್ ಹಾಡುಗಳನ್ನು ಹಾಡಿದ್ದಾರೆ.

Director Shashank New Movie Love 360 Will Be Releasing Soon

"ನಾನು ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದಾಗಿನಿಂದಲೂ ನಟನೆಯಲ್ಲಿ ಆಸಕ್ತಿ. ತಿಂಗಳಲ್ಲಿ ಮೂರು ದಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ಗೆ ಬಂದು ಅಭಿನಯ ಕಲಿಯುತ್ತಿದೆ. ಅಪ್ಪನಿಗೆ ವಿಷಯ ತಿಳಿದು ಬಯ್ಯುತ್ತಿದ್ದರು. ಈಗ ಅಪ್ಪ ಇಲ್ಲ. ಅಮ್ಮನ ಮುಂದೆ ನನ್ನ ಆಸೆ ಹೇಳಿಕೊಂಡೆ. ಅಮ್ಮ ನನ್ನ‌ ಆಸೆಗೆ ಆಸರೆಯಾದರು. ಆನಂತರ ಶಶಾಂಕ್ ಸರ್ ಪರಿಚಯವಾಯಿತು. ಶಶಾಂಕ್ ಸರ್ ಸಾಕಷ್ಟು ವರ್ಕ್ ಶಾಪ್ ನಡೆಸಿ ನನಗೆ ಅಭಿನಯ ಕಲಿಸಿದರು. ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಈ ಚಿತ್ರದಲ್ಲಿ ಬೋಟ್ ಮ್ಯಕಾನಿಕ್ ಪಾತ್ರ ಮಾಡಿದ್ದೀನಿ. ಡಾಕ್ಟರ್ ಆಗಬೇಕಿತ್ತು. ಈಗ ಆಕ್ಟರ್ ಆಗಿದ್ದೀನಿ." ಎನ್ನುತ್ತಾರೆ ಪ್ರವೀಣ್.

More from Filmibeat

English summary
Director Shashank New Movie Love 360 Will Be Releasing Soon, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X