ಶಿಷ್ಯನಿಗಾಗಿ 'ಮೋಡ ಕವಿದ ವಾತಾವರಣ'; ವಿಭಿನ್ನ ಪ್ರೇಮ ಕಥೆಗೆ ಸಿಂಪಲ್ ಟಚ್

ಸಿಂಪಲ್ ಸುನಿ ಸಿನಿಮಾಗಳಷ್ಟೇ ಅವರ ಇಡುವ ಟೈಟಲ್‌ಗಳು ಕೂಡ ಅಷ್ಟೇ ಕಿಕ್ ಕೊಡುತ್ತವೆ. ಇದೂವರೆಗೂ ಅವರ ಸಿನಿಮಾ ಟೈಟಲ್‌ಗಳು ಸಿನಿಪ್ರಿಯರ ಗಮನ ಸೆಳೆದಿವೆ. ಈಗ ಅದೇ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಳ್ಳಲಿದೆ. ಅದುವೇ 'ಮೋಡ ಕವಿದ ವಾತಾವರಣ'. ಕಳೆದ ಕೆಲವು ದಿನಗಳಿಂದ ಈ ಶೀರ್ಷಿಕೆ ಸ್ಯಾಂಡಲ್‌ವುಡ್ ಆಗಿ, ಸಿನಿಮಾ ಮಂದಿಯ ಗಮನ ಸೆಳೆದಿದೆ.

'ಒಂದು ಸರಳ ಪ್ರೇಮಕಥೆ' ಬಳಿಕ ಸಿಂಪಲ್ ಸುನಿ 'ಮೋಡ ಕವಿದ ವಾತಾವರಣ' ಸಿನಿಮಾಗೆ ಕೈ ಹಾಕಿದ್ದರು. ಈ ಸಿನಿಮಾದ ಟೈಟಲ್ ರಿವೀಲ್ ಆದಲ್ಲಿಂದ ಕುತೂಹಲ ದುಪ್ಪಟ್ಟಾಗಿತ್ತು. ಅಂದ್ಹಾಗೆ, ಸಿಂಪಲ್ ಸುನಿಯ ಈ ಸಿನಿಮಾ ಕೂಡ ಒಂದು ಸೊಗಸಾದ ಪ್ರೇಮ ಕಥೆ. ಟೈಟಲ್‌ನಿಂದ ಗಮನ ಸೆಳೆಯುತ್ತಿರುವ ಈ ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ.

Director Simple Suni released Moda Kavida Vaatavarana hero intro teaser

ಸಿಂಪಲ್ ಸುನಿ ಗರಡಿಯಲ್ಲಿ ಪಳಗಿರುವ ಶೀಲಮ್ ಅವರೇ ಈ ಸಿನಿಮಾ ಹೀರೋ. ಹೀಗಾಗಿ ಸಿಂಪಲ್ ಸುನಿ ಅಷ್ಟೇ ಅಲ್ಲದೇ, ಶೀಲಮ್‌ಗೂ ಈ ಸಿನಿಮಾ ತುಂಬಾನೇ ಮುಖ್ಯ. ಇದೇ ತಿಂಗಳು ಅಂದರೆ, ಜೂನ್ 26ಕ್ಕೆ 'ಮೋಡ ಕವಿದ ವಾತಾವರಣ' ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹೀರೋ ಇಂಟ್ರುಡಕ್ಷನ್ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಸಖತ್ ವೈರಲ್ ಆಗುತ್ತಿದೆ.

'ಮೋಡ ಕವಿದ ವಾತಾವರಣ'ದ ಹೀರೋ ಟೀಸರ್ ಬಿಡುಗಡೆ ಬಳಿಕ ಸಿಂಪಲ್ ಸುನಿ ಸೇರಿದಂತೆ ಇಡೀ ತಂಡ ಸಿನಿಮಾದ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. "ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ. ನಾನು ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದ್ರೆ ಈ ಸಿನಿಮಾದಲ್ಲಿ ಒಂದು ಚಾಲೆಂಜ್ ಇತ್ತು. ಅದೇನಂದ್ರೆ ಈ ಸಿನಿಮಾ ಟ್ರೇಲರ್ ಅನ್ನು ಚೆನ್ನಾಗಿ ಕಟ್ ಮಾಡಲು ಆಗುವುದಿಲ್ಲ. ಸಿನಿಮಾದ ಅರ್ಧ ಪಾರ್ಟ್ ನಾನು ಥಿಯೇಟರ್‌ನಲ್ಲೇ ರಿವೀಲ್ ಮಾಡುವುದು. ಈ ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್‌ನಲ್ಲಿಯೇ ನೋಡಬೇಕು. ಹೀಗಾಗಿ ಅರ್ಧ ಟ್ರೇಲರ್ ಕಟ್ ಮಾಡಬೇಕು" ಎಂದು ಸಿಂಪಲ್ ಸುನಿ ಹೇಳಿದ್ದಾರೆ.

ಈ ಸಿನಿಮಾದ ನಾಯಕ ಶೀಲಮ್ "ಮೋಡ ಕವಿದ ವಾತಾವರಣ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದೇನೆ. ಹೀರೋ ಎಂದರೆ ಪವಾಡ. ಯಾಕೆಂದರೆ ಎಲ್ಲರೂ ಹೀರೋ ಆಗಲು ಆಗುವುದಿಲ್ಲ. ಎಷ್ಟೇ ದುಡ್ಡಿದ್ದರು, ಎಷ್ಟೇ ಆಕ್ಟಿಂಗ್ ಸ್ಕಿಲ್ ಇದ್ದರೂ ಆಗಲು ಆಗುವುದಿಲ್ಲ. ಡ್ಯಾನ್ಸ್, ಫೈಟ್ ಬಂದು ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದರೆ ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನನ್ನ ಸಿನಿ ಜರ್ನಿಯಲ್ಲಿ ಏನೇ ಸಾಧಿಸಿದ್ದರು ನಾನು ಆ ಕ್ರೆಡಿಟ್ ಅವರಿಗೆ ಕೊಡುತ್ತೇನೆ. ನಿರ್ಮಾಪಕ ರಮೇಶ್ ಸರ್ ಈ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಈ ಟೀಮ್ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಮಾಡುವ ತಂಡ. ಆದರೆ ನನ್ನನ್ನು ಹಾಕಿಕೊಂಡು ಚಿತ್ರ ಮಾಡಿದ್ದಾರೆ. ಅದು ನನ್ನ ಪುಣ್ಯ" ಎಂದು ಹೇಳಿದ್ದಾರೆ.

'ಮೋಡ ಕವಿದ ವಾತಾವರಣ'ದ ಸಿನಿಮಾ ಮೂಲಕ ಸುನಿ ತಮ್ಮ ಗರಡಿಯಲ್ಲಿ ಪಳಗಿದ ಶೀಲಮ್ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಇಂಟ್ರುಡ್ಯುಸ್ ಮಾಡುತ್ತಿದ್ದಾರೆ. ಶೀಲಮ್‌ ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ‌ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿಯ 'ಮೋಡ ಕವಿದ ವಾತಾವರಣ' ಸಿನಿಮಾದಲ್ಲಿ ಶೀಲಮ್‌ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.

'ಒಂದು ಸರಳ ಪ್ರೇಮಕಥೆ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ 'ಮೋಡ ಕವಿದ ವಾತಾವರಣ'ಕ್ಕೆ ಹಣ ಹೂಡಿಕೆ ಮಾಡಿದೆ. ಈ ಬ್ಯಾನರ್‌ನಲ್ಲಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. 'ಮೋಡ ಕವಿದ ವಾತಾವರಣ' ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.

English summary
Director Simple Suni released Moda Kavida Vaatavarana hero intro teaser.
Read more about: simple suni kannada movie teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X