'ಸಿಂಪಲ್ಲಾಗ್ ಮತ್ತೂ ಒಂದು ಸ್ಟೋರಿ' ಹೇಳಿದ ಸಿಂಪಲ್ ಡೈರೆಕ್ಟರ್ ಸುನಿ: ಯಾವುದಾ ಸ್ಟೋರಿ?

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'- ಅದೆಷ್ಟೋ ಯುವಜನರ ಹೃದಯ ಗೆದ್ದ ಸಿನಿಮಾ. ಒಂದು ಸರಳವಾದ ಪ್ರೇಮಕಥೆಯನ್ನೂ ಹೀಗೂ ಹೇಳಬಹುದು ಎಂದು ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಇದು. ಶೀರ್ಷಿಕೆಯೂ ಲವ್ ಸ್ಟೋರಿ ಸಿಂಪಲ್ ಆಗಿ ಇದೆ ಎನ್ನುವುದನ್ನು ಹೇಳಿತ್ತು. ಆದರೆ ಅದರ ನಿರೂಪಣೆ ಅಷ್ಟು ಸಿಂಪಲ್ ಆಗಿರಲಿಲ್ಲ. ಆದರೆ ಈ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಸ್ಟಾರ್ ಆಗಿ ಹೊರಹೊಮ್ಮಿದರು. ನಿರ್ದೇಶಕ ಸುನಿಲ್ ಕುಮಾರ್, 'ಸಿಂಪಲ್' ಎಂಬ ವಿಶೇಷಣವನ್ನು ಕಾಯಂ ಆಗಿ ಅಂಟಿಸಿಕೊಂಡು ಸಿಂಪಲ್ ಸುನಿ ಆದರು.

Recommended Video

ಜಂಟಲ್ ಮೆನ್ ಚಿತ್ರದ ಟ್ರೇಲರ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಸ್ಯಾಂಡಲ್ ವುಡ್ ತಾರೆಯರು | GENTLEMAN | PRAJWAL

ಈ ಚಿತ್ರ ಅನೇಕರ ಸಿನಿಮಾ ಬದುಕಿಗೆ ದಾರಿ ಮಾಡಿಕೊಟ್ಟಿತು. ಈ ಯಶಸ್ಸಿನ ಗುಂಗಲ್ಲಿ ಸುನಿ, 'ಸಿಂಗಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'ಯನ್ನೂ ಹೇಳಿದರು. ಏಳು ವರ್ಷಗಳು ಉರುಳಿದರೂ ಅವರ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯ ತಾಜಾತನ ಇನ್ನೂ ಉಳಿದಿದೆ. ಈ ನಡುವೆ ಕ್ವಾರೆಂಟೀನ್‌ನಲ್ಲಿ ಕಾಲ ಕಳೆಯುತ್ತಿರುವ ಸುನಿ, ಪತ್ನಿ ಸೌಂದರ್ಯ ಗೌಡ ಜತೆಗೂಡಿ ಹೊಸದೊಂದು ಕಥೆ ಹೇಳಿದ್ದಾರೆ. ಸಿನಿಮಾದಂತೆಯೇ ಅದಕ್ಕೊಂದು ಟ್ವಿಸ್ಟ್ ಕೂಡ ನೀಡಿದ್ದಾರೆ. ಮುಂದೆ ಓದಿ...

ಸಿಂಪಲ್ಲಾಗ್ ಒಂದ್ ಕಟಿಂಗ್ ಸ್ಟೋರಿ

ಸಿಂಪಲ್ಲಾಗ್ ಒಂದ್ ಕಟಿಂಗ್ ಸ್ಟೋರಿ

ಅಂದಹಾಗೆ, ಸುನಿ ಹೇಳಿರುವುದು 'ಸಿಂಪಲ್ಲಾಗ್ ಒಂದ್ ಕಟಿಂಗ್ ಸ್ಟೋರಿ'ಯನ್ನು. ಲಾಕ್ ಡೌನ್ ಅವಧಿಯಲ್ಲಿ ಅಡ್ಡಾದಿಡ್ಡಿ ತಲೆಗೂದಲು, ಗಡ್ಡ ಬಿಟ್ಟಿರುವ ಸುನಿ ಅದರ ಮಧ್ಯೆಯೇ ಅಚ್ಚುಕಟ್ಟಾಗಿ ಹೇರ್ ಕಟ್ ಮಾಡಿಕೊಂಡು, ಗಡ್ಡ ಟ್ರಿಮ್ ಮಾಡಿಕೊಂಡು ಪ್ರತ್ಯಕ್ಷರಾಗಿದ್ದಾರೆ. ಅದು ಹೇಗೆ ಎಂಬ ಕಥೆಯನ್ನು ಅವರೇ ಹೇಳಿದ್ದಾರೆ.

ಹೆಂಡತಿ ಬೇಜಾರ್ ಮಾಡ್ಕೊಂಡಿದ್ಲು

ಹೆಂಡತಿ ಬೇಜಾರ್ ಮಾಡ್ಕೊಂಡಿದ್ಲು

'ನನ್ನ ಕೂದಲು ವಿಕಾರವಾಗಿ ಬೆಳೆದಿದೆ ನನ್ನ ವೈಫ್ ಬೇಜಾರು ಮಾಡಿಕೊಂಡಿದ್ಲು. ಕಾಲಳತೆಯ ದೂರದಲ್ಲಿ ಎಷ್ಟು ಹುಡುಕಿದರೂ ಯಾವ ಸಲೂನ್ ಓಪನ್ ಆಗಿರಲಿಲ್ಲ. ಇನ್ನೆಲ್ಲಿ ಮಾಡಿಸೋದು ಅಂದೆ. ನಾನೇ ಮಾಡ್ತೀನಿ ಅಂದ್ಲು' ಎಂದು ತಮ್ಮ 'ಸಿಂಪಲ್ಲಾಗ್ ಒಂದ್ ಕಟಿಂಗ್ ಸ್ಟೋರಿ'ಯ ಕಥೆ ಆರಂಭಿಸಿದ್ದಾರೆ.

ಕತ್ತರಿ ಕೈಗೆತ್ತಿಕೊಂಡ ಪತ್ನಿ

ಕತ್ತರಿ ಕೈಗೆತ್ತಿಕೊಂಡ ಪತ್ನಿ

ತಾವೇ ಕತ್ತರಿ ಮತ್ತು ಟ್ರಿಮ್ಮರ್ ಕೈಗೆತ್ತಿಕೊಂಡ ಸೌಂದರ್ಯ, ಸುನಿ ಅವರ ಹೇರ್ ಕಟ್ ಮಾಡಿದ್ದಾರೆ. ಅದರ ಮಜವಾದ ವಿಡಿಯೋವನ್ನು ಸುನಿ ಹಂಚಿಕೊಂಡಿದ್ದಾರೆ. ಕೊನೆಗೆ ಎಲ್ಲ ಮುಗಿದ ಬಳಿಕ 'ಫೈನಲ್ ಪ್ರಾಡಕ್ಟ್' ಎಂದು ನೀಟಾಗಿ ಹೇರ್ ಕಟ್ ಮತ್ತು ಟ್ರಿಮ್ ಮಾಡಿದ ಫೋಟೊವನ್ನು ಹಾಕಿದ್ದಾರೆ. ಅದನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ. ನಿಮ್ಮ ಪತ್ನಿ ಪಕ್ಕಾ ಪ್ರೊಫೆಷನಲ್ ಹೇರ್ ಸ್ಟೈಲಿಶ್ ರೀತಿ ಟ್ರಿಮ್ ಮಾಡಿದ್ದಾರೆ ಎಂದು ಹೊಗಳಿದ್ದಾರೆ.

ಇನ್ನೂ ಒಂದು ಟ್ವಿಸ್ಟ್ ಇದೆ

ಇನ್ನೂ ಒಂದು ಟ್ವಿಸ್ಟ್ ಇದೆ

ಆದರೆ 'ಸಿಂಪಲ್ಲಾಗ್ ಒಂದ್ ಕಟಿಂಗ್ ಸ್ಟೋರಿ'ಯ ಅಂತ್ಯ ಇದಲ್ಲ. ಅದರ ಮುಂದುವರಿದ ಭಾಗ ಇನ್ನೊಂದು ಇದೆ. ಅದರಲ್ಲಿ ಸುನಿ ಯಾರೂ ಊಹಿಸದ ಟ್ವಿಸ್ಟ್ ನೀಡಿದ್ದಾರೆ. 'ಅರೆರೆ ಸಖತ್ತಾಗೆ ಇದೆ ಅಂದ್ಕೊಂಡ್ರಾ? ನೆಕ್ಸ್ಟ್ ಇರೋದು ಟ್ವಿಸ್ಟ್. 10 ಫೋಟೊ ಮೇಲೆ ಹಾಕೋಕೆ ಆಗೊಲ್ಲ. ಹೀಗಾಗಿ ಮುಂದಿನ ಪೋಸ್ಟ್ ನೋಡಿ' ಎಂದು ಎರಡನೆ ಭಾಗಕ್ಕೆ ಕರೆದೊಯ್ದಿದ್ದಾರೆ.

ಬ್ರೇಕ್ ನಡುವೆ ಕಂಡಿದ್ದೇನು?

ಬ್ರೇಕ್ ನಡುವೆ ಕಂಡಿದ್ದೇನು?

'ಕಟಿಂಗ್ ಮಧ್ಯೆ ಬ್ರೇಕ್ ಸಿಕ್ತು. ಯಾಕೆ ಅಂತ ಕನ್ನಡಿ ನೋಡಿದರೆ ಕನ್ನಡಿ ಅಳುತ್ತಿತ್ತು. ಈ ರೀತಿ ಕಟ್ ಮಾಡಿ ಸೆಂಟರ್ ಅಲ್ಲಿ ಸ್ಟಕ್ ಆಗಿ ಫುಲ್ ಕನ್‌ಫ್ಯೂಸ್ ಆಗಿ ಹೆದರಿದ್ದಳು' ಎಂದು ಹೆಂಡತಿ ವಾಸ್ತವವಾಗಿ ಮಾಡಿದ ಕಟಿಂಗ್ ಹೇಗಿತ್ತು ಎಂದು ಪ್ರದರ್ಶಿಸಿದ್ದಾರೆ.

ಹೇರ್ ಸ್ಟೈಲಿಸ್ಟ್ ಕಟಿಂಗ್

ಹೇರ್ ಸ್ಟೈಲಿಸ್ಟ್ ಕಟಿಂಗ್

'ನಾನು ಮುಖ ಮುಚ್ಚಿಕೊಂಡು ನಮ್ಮ ಆಫೀಸ್ ಪಕ್ಕ ಇರೋ ಮಾಮೂಲಿ ಹೇರ್ ಡಿಸೈನರ್‌ಗೆ ಕಾಲ್ ಮಾಡಿ ಕಾಲಿಡ್ಕೊಂಡೆ. ಅವರು ಸಲೂನ್ ಓಪನ್ ಮಾಡೊಲ್ಲ. ಮನೇಲಿ ಜಾಗ ಇಲ್ಲ ನಿಮ್ಮ ಆಫೀಸ್ ಇಲ್ಲ ಅಂದ್ರೆ ಮನೆಗೆ ಬರ್ತೀನಿ' ಎಂದರು. ವೃತ್ತಿಪರ ಹೇರ್ ಸ್ಟೈಲಿಸ್ಟ್ ಮಂಜು ಅಲಂಕಾರ್ ಬಂದು ಸುನಿಗೆ ಹೇರ್ ಕಟಿಂಗ್ ಮಾಡಿದ್ದಾರೆ. ಅದನ್ನು ಹ್ಯಾಪಿ ಎಂಡಿಂಗ್ ಎಂದು ಸುನಿ ಕರೆದಿದ್ದಾರೆ.

ಹೆಂಡತಿಯೇ ವಿಲನ್

ಹೆಂಡತಿಯೇ ವಿಲನ್

'ನಾನು ಹೀರೋ ಅಂದ್ಕೊಂಡೆ. ಪತ್ನಿಯೇ ವಿಲನ್. ನಾನು ಎಡಬಿಡಂಗಿ. ನಮ್ಮ ಮಂಜಣ್ಣನೇ ಹೀರೋ. ಸಲೂನ್ ಓಪನ್ ಇಲ್ಲದ ಕಾರಣ ಹೆಂಡತಿ ಇಚ್ಛೆಯಂತೆ ಡೈ ಮಾಡಿಸಲು ಆಗಿಲ್ಲ' ಎಂದು ತಮ್ಮ ನೆರೆಗೂದಲನ್ನು ಸುನಿ ಪ್ರದರ್ಶಿಸಿ ಹೇಳಿದ್ದಾರೆ.

ಸೃಜನಶೀಲತೆಗೆ ಮೆಚ್ಚುಗೆ

ಸೃಜನಶೀಲತೆಗೆ ಮೆಚ್ಚುಗೆ

ಲಾಕ್ ಡೌನ್ ಅವಧಿಯಲ್ಲಿ ಹೇರ್ ಕಟಿಂಗ್ ಸಾಧ್ಯವಾಗದೆ ಅನೇಕರು ಮನೆಯಲ್ಲಿ ಇದೇ ರೀತಿ ಪ್ರಯೋಗ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿಗೆ ಹೇರ್ ಕಟಿಂಗ್ ಮಾಡಿದ್ದರು. ಆದರೆ ಸುನಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹೇರ್ ಕಟಿಂಗ್ ವಿಚಾರವನ್ನೂ ಸೃಜನಾತ್ಮಕವಾಗಿ ಹೇಳಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

More from Filmibeat

English summary
Director Simple Suni has shared his hair cutting experience hy his wife Soundarya and called it Simple Agi Ondh Cutting Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X