ಗೋಲ್ಡನ್ ಸ್ಟಾರ್ ಜನ್ಮದಿನಕ್ಕೆ ಯೋಗರಾಜ್ ಭಟ್ಟರ ಶುಭ ಹಾರೈಕೆ: 'ತಪ್ಪು ಕನ್ನಡ' ಬಳಕೆಗೆ ಆಕ್ಷೇಪ

ಗೋಲ್ಡನ್ ಸ್ಟಾರ್ ಗಣೇಶ್ 42ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮನೆಗೆ ಬರಬಾರದು ಎಂದು ಮನವಿ ಮಾಡಿದ್ದ ಗಣೇಶ್, ಸರಳವಾಗಿ ಮನೆಯವರೊಂದಿಗೆ ಜನ್ಮದಿನ ಆಚರಿಸಿಕೊಂಡರೂ, ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಜೋರಾಗಿದೆ. 'ಹ್ಯಾಪಿ ಬರ್ಥಡೇ ಗೋಲ್ಡನ್ ಸ್ಟಾರ್' ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

Recommended Video

Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

ಗಣೇಶ್ ಜನ್ಮದಿನಕ್ಕೆ ಚಿತ್ರರಂಗದ ಗಣ್ಯರು, ನಟರು, ನಿರ್ದೇಶಕರು ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಅವರಲ್ಲಿ ಕೆಲವರ ಶುಭ ಹಾರೈಕೆ ವಿಭಿನ್ನ ಬರಹಗಳ ಮೂಲಕ ಗಮನ ಸೆಳೆದಿವೆ. ನಟ ಕಿಚ್ಚ ಸುದೀಪ್ ಎರಡು ದಿನಗಳ ಮುಂಚೆಯೇ ಶುಭ ಹಾರೈಸಿದ್ದರು. ಈ ನಡುವೆ ಗಣೇಶ್ ಅಭಿನಯದ 'ಗಾಳಿಪಟ 2' ಚಿತ್ರದ ತುಸು ವಿಭಿನ್ನವಾಗಿ ಶುಭಾಶಯ ಕೋರಿದೆ. ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಮುಂದೆ...

ಗಾಳಿಪಟ 2ದಿಂದ ಶುಭಾಶಯ

ಗಾಳಿಪಟ 2ದಿಂದ ಶುಭಾಶಯ

ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಚಿತ್ರತಂಡ ಹಂಚಿಕೊಂಡಿರುವ ಶುಭಾಶಯದ ಪೋಸ್ಟರ್ ಗಮನ ಸೆಳೆಯುತ್ತಿದೆ. 'ಹುದ್ದಿಟ ಹಬ್ಬದ ಶುಶಾಭಯ' ಎಂದು ಯೋಗರಾಜ್ ಭಟ್ ಮತ್ತು ತಂಡ ಗಣೇಶ್‌ಗೆ ಶುಭ ಕೋರಿದೆ.

ಗಣೇಶ್ ಪಾತ್ರದ ಸುಳಿವು

ಗಣೇಶ್ ಪಾತ್ರದ ಸುಳಿವು

'ಗಾಳಿಪಟ' ಚಿತ್ರ ವೀಕ್ಷಿಸಿದವರಿಗೆ ಈ ತಪ್ಪು ತಪ್ಪು ಕನ್ನಡ ಭಾಷೆಯ ಪ್ರಯೋಗ ನೆನಪಿರುತ್ತದೆ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದ ಯುವಕ ಕನ್ನಡ ಬರೆಯಲು ಹೆಣಗಾಡುವ ದೃಶ್ಯಗಳು ಈ ಚಿತ್ರದಲ್ಲಿದ್ದವು. 'ಗಾಳಿಪಟ 2' ಚಿತ್ರದಲ್ಲಿಯೂ ಗಣೇಶ್ ಈ ಕನ್ನಡ ಭಾಷೆಯ ಪರದಾಟ ಮುಂದುವರಿಯುವ ಸುಳಿವನ್ನು ಈ ಪೋಸ್ಟರ್ ನೀಡಿದೆ.

ಅಭಿಮಾನಿಗಳ ಪ್ರತಿಕ್ರಿಯೆ

ಅಭಿಮಾನಿಗಳ ಪ್ರತಿಕ್ರಿಯೆ

ಕನ್ನಡ ಭಾಷೆಯಲ್ಲಿ ಪಂಡಿತರಾದ ಯೋಗರಾಜ್ ಭಟ್ಟರ ತಂಡದ ಈ ಹೊಸ ಬಗೆಯ ಶುಭ ಹಾರೈಕೆಗೆ ವಿಭಿನ್ನ ಬಗೆಯ ಪ್ರತಿಕ್ರಿಯೆಗಳು ಬಂದಿವೆ. ವಿಶೇಷ ರೀತಿಯಲ್ಲಿ ವಿಷ್ ಮಾಡಿದ್ದೀರಿ. ಹೊಸ ಪದಗಳನ್ನು ಪರಿಚಯಿಸಿದ್ದೀರಿ ಎಂದು ಇದನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಭಟ್ಟರು ತಪ್ಪಾಗಿ ಟೈಪ್ ಮಾಡಿದ್ದಾರೆ, ಸರಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ತಪ್ಪು ಸಂದೇಶ ಹೋಗುತ್ತದೆ...

ತಪ್ಪು ಸಂದೇಶ ಹೋಗುತ್ತದೆ...

ಆದರೆ, ಇದು ಸೃಜನಶೀಲತೆಯಲ್ಲ. ಪ್ರಚಾರದ ಗಿಮಿಕ್ ಎಂದು ಅನೇಕರು ಟೀಕಿಸಿದ್ದಾರೆ. ಪಾತ್ರ ತಪ್ಪಾಗಿ ಕನ್ನಡ ಬಳಸುತ್ತದೆ ಎಂದು ಇದರಲ್ಲಿಯೂ ಆ ರೀತಿ ಭಾಷೆ ಬಳಕೆ ಮಾಡುವುದು ಸರಿಯಲ್ಲ. ಕನ್ನಡ ಕಲಿಯುತ್ತಿರುವವರಿಗೆ ಇದರಿಂದ ತಪ್ಪು ಸಂದೇಶಗಳು ಹೋಗುತ್ತದೆ. 'ಗಾಳಿಪಟ' ಬಂದು ಹತ್ತು ವರ್ಷಗಳಾಗಿದೆ. ಆಗ ಸೃಷ್ಟಿಸಿದ ಪಾತ್ರ ಈಗಲೂ ಹಾಗೆಯೇ ಇದೆಯೇ? ಎಂದು ಆಕ್ಷೇಪಿಸಿದ್ದಾರೆ. ಇದು ಪ್ರಚಾರಕ್ಕಾಗಿ ಮಾಡಿರುವ ತರಲೆ ಅಷ್ಟೇ. ಇದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯೋಗರಾಜ್ ಭಟ್ಟರ ಕನ್ನಡ ಭಾಷೆ ಜ್ಞಾನ ಅದ್ಭುತವಾಗಿದೆ. ಸಿನಿಮಾಗಳಿಗಾಗಿ ಇಂತಹ ಪ್ರಯೋಗಗಳು ಸಾಮಾನ್ಯ ಎಂದು ಕೆಲವರು ಸಮರ್ಥಿಸಿದ್ದಾರೆ.

More from Filmibeat

English summary
Many on social media made objection over the wrong use of Kannada words in birthday wishes poster for Ganesh by Yogaraj Bhat's Gaalipata 2 team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X