ದರ್ಶನ್‌ರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದ್ರಾ ಡಿಕೆ ಬ್ರದರ್ಸ್? ಸಿಪಿ ಯೋಗೇಶ್ವರ್ ಅಚ್ಚರಿ ಹೇಳಿಕೆ

ದರ್ಶನ್ ಬಂಧನ ಆಗಿದ್ದೇ ಆಗಿದ್ದು, ಒಂದೊಂದು ಅಚ್ಚರಿಯ ವಿಷಯಗಳು ಹೊರಬೀಳುತ್ತಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದರೇ? ಇಂತಹದ್ದೊಂದು ಅಚ್ಚರಿಯ ಹೇಳಿಕೆಯನ್ನು ರಾಜ್ಯದ ಬಿಜೆಪಿ ಮುಖಂಡ ಹೇಳಿಕೆ ಕೊಟ್ಟಿದ್ದಾರೆ. ಇದು ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ದರ್ಶನ್‌ಗೆ ಮಂಡ್ಯ ಹಾಗೂ ಮೈಸೂರು ಭಾಗಗಳಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಜೊತೆ ಮೈಸೂರು ಭಾಗದವರೇ ಆಗಿದ್ದರಿಂದ ಆ ಭಾಗದಲ್ಲಿ ದರ್ಶನ್‌ ಫ್ಯಾನ್ ಫಾಲೋವಿಂಗ್ ಚೆನ್ನಾಗಿಯೇ ಇದೆ. ಇತ್ತೀಚೆಗೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದಾರೆ. ಈ ಮಧ್ಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ.

DK brothers had planned for Darshan to contest from Channapatna CP Yogeshwar surprising statement

ಈ ಕ್ಷೇತ್ರದಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಾರೆ ಎಂದು ಗುಲ್ಲೆದ್ದಿತ್ತು. ಬಳಿಕ ಡಿಕೆ ಸುರೇಶ್ ಸ್ಪರ್ಧೆ ಮಾಡುವುದಿಲ್ಲ ಎಂಬ ಸುದ್ದಿನೂ ಹೊರಬಿದ್ದಿತ್ತು. ಇದೇ ಸಂದರ್ಭದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಸಂಬಂಧ ಬಿಜೆಪಿ ಸಿ ಪಿ ಯೋಗೇಶ್ವರ್ ಕಾಂಗ್ರೆಸ್‌ನ ಆ ಅಚ್ಚರಿಯ ಅಭ್ಯರ್ಥಿ ಈಗ ಕೊಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದಾರೆ ಎಂದಿದ್ದಾರೆ.

ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿ ಪಿ ಯೋಗೇಶ್ವರ್ ಪರೋಕ್ಷವಾಗಿ ದರ್ಶನ್ ಹೆಸರನ್ನು ತೆಗೆದಿದ್ದಾರೆ. ಡಿಕೆ ಬ್ರದರ್ಸ್ ಚನ್ನಪಟ್ಟಣದಿಂದ ದರ್ಶನ್‌ರನ್ನು ಕಣಕ್ಕೆ ಇಳಿಸುವುದಕ್ಕೆ ಪ್ಲ್ಯಾನ್ ಮಾಡಿದ್ದರು. ಆದರೆ, ಅಚ್ಚರಿಯ ಅಭ್ಯರ್ಥಿ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.

"ಡಿಕೆ ಬ್ರದರ್ಸ್ ಅಚ್ಚರಿ ಅಭ್ಯರ್ಥಿಯನ್ನು ಯಾರು ಹಾಕಬೇಕು ಅಂತ ಇದ್ದರು ಅಂತ ಗೊತ್ತು ನನಗೆ. ಅಚ್ಚರಿ ಅಭ್ಯರ್ಥಿ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಅವರು ಯಾವುದೋ ಕೊಲೆ ಕೇಸ್‌ನಲ್ಲಿ ಸಿಕ್ಕಿಕೊಂಡು ಜೈಲು ಕಂಬಿ ಎಣಿಸುತ್ತಿದ್ದಾರೆ ಪಾಪ. ಅಚ್ಚರಿಯ ಅಭ್ಯರ್ಥಿಯಾದರೂ ಬರಲಿ, ಯಾರಾದರೂ ಬರಲಿ ಚುನಾವಣೆಗೆ ಸಿದ್ಧವಾಗಿದ್ದೇವೆ, ಚುನಾವಣೆ ಮಾಡುತ್ತೇವೆ." ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

DK brothers had planned for Darshan to contest from Channapatna CP Yogeshwar surprising statement

ಡಿಕೆ ಬ್ರದರ್ಸ್ ಚನ್ನಪಟ್ಟಣ್ಣದಲ್ಲಿ ದರ್ಶನ್ ನಿಲ್ಲಿಸಿ ಕಾಂಗ್ರೆಸ್ ಗೆಲ್ಲಿಸುವುದಕ್ಕೆ ಹೊರಟಿದ್ದರು. ಅದು ಈಗ ಸಾಧ್ಯವಾಗುವುದಿಲ್ಲ ಎಂದು ದರ್ಶನ್ ಹೆಸರು ಎತ್ತದೆ ಸ್ಟೋಟಕ ಹೇಳಿಕೆ ಕೊಟ್ಟಿದ್ದಾರೆ. "ಅಚ್ಚರಿಯ ಅಭ್ಯರ್ಥಿ ಮರ್ಡರ್ ಕೇಸ್‌ನಲ್ಲಿ ಸಿಕ್ಕಿಕೊಂಡಿದ್ದರು. ಅವರನ್ನೇ ಅಚ್ಚರಿಯ ಅಭ್ಯರ್ಥಿಯನ್ನಾಗಿ ಮಾಡಬೇಕು ಅಂತಿದ್ದರು. ಅದು ಈಗ ಆಗಲ್ಲ. ಇನ್ನೊಬ್ಬರು ಯಾರಾದರೂ ಅಚ್ಚರಿಯ ಅಭ್ಯರ್ಥಿಯನ್ನು ಹುಡುಕಬಹುದು ನೋಡೋಣ." ಎಂದಿದ್ದಾರೆ.

ಹಾಗೇ ಡಿಕೆ ಬ್ರದರ್ಸ್ ಸ್ಕೆಚ್ ಹಾಕಿದ್ದ ಅಚ್ಚರಿಯ ಅಭ್ಯರ್ಥಿ ಚಿತ್ರನಟರು. ಅವರು ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆ ಎದುರಿಸುವುದಕ್ಕೆ ಮುಂದಾಗಿದ್ದರು ಎಂದಿದ್ದಾರೆ. "ಚಿತ್ರನಟರು ಕಾಂಗ್ರೆಸ್ ಪರ ಹೆಚ್ಚು ಪ್ರಚಾರವನ್ನು ಮಾಡಿದವರು. ಮುಂದೊಂದು ದಿನಗಳಲ್ಲಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು, ಅದರ ಮುಖಾಂತರ ಚುನಾವಣೆಯನ್ನು ಎದುರಿಸಬೇಕು ಅಂತ ಹೇಳಿ ನಮ್ಮ ಡಿಕೆ ಬ್ರದರ್ಸ್ ಪ್ಲ್ಯಾನ್ ಮಾಡಿದ್ದರು. ನೀವು ಊಹೆ ಮಾಡಿಕೊಳ್ಳಿ. ಸಾಕು ಇಷ್ಟು ಕಂಟೆಂಟ್ ಸಾಕು." ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಹಾಗೇ ದರ್ಶನ್ ಹೆಸರೇ ಎತ್ತದೆ ಸ್ಟೋಟಕ ಹೇಳಿಕೆ ಕೊಟ್ಟ ಸಿ ಪಿ ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ. "ಪಾಪ ಅವರಿಗೂ ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ, ಪಾಪ ಅನಾಹುತ ಆಗಿ ಹೋಗಿದೆ ಮುಂದೆ ನೋಡೋಣ." ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಮೂಲಕ ಈ ಕೊಲೆ ಪ್ರಕರಣ ನಡೆಯದೇ ಹೋಗಿದ್ದರೆ, ದರ್ಶನ್ ರಾಜಕೀಯಕ್ಕೆ ಧುಮುಕುತ್ತಿದ್ದರೇ? ಇಂತಹದ್ದೊಂದು ಪ್ರಶ್ನೆ ಈಗ ರಾಜಕೀಯವಲಯದಲ್ಲಿ ಎದ್ದಿದೆ.

More from Filmibeat

English summary
DK brothers had planned for Darshan to contest from Channapatna CP Yogeshwar surprising statement:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X