"ಡಿಕೆ ಶಿವಕುಮಾರ್ ಓಡಿಸೋಣ" ದರ್ಶನ್ ಫ್ಯಾನ್ಸ್ ಪ್ರತಿಭಟನೆ; "ಅವನು ಪಾಪ ನಮ್ಮ ಹುಡುಗ" ಡಿಕೆಶಿ ಪ್ರತಿಕ್ರಿಯೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿ ಸೇರಿದ್ದನ್ನು ಅಭಿಮಾನಿಗಳಿಗೆ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ದರ್ಶನ್‌ಗೆ ಹಾಸಿಗೆ, ದಿಂಬು ಸಿಗುತ್ತಿಲ್ಲ. ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ವಿಷಯ ಕೋರ್ಟ್‌ನಲ್ಲಿದೆ. ಈಗ ಮಧ್ಯೆ ದರ್ಶನ್ ಅಭಿಮಾನಿಗಳು ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹರಿದಾಡುತ್ತಿದೆ. ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ಹಾಗೂ ಅಖಿಲ ಕರ್ನಾಟಕ ಡಿ ಬಾಸ್ ಅಭಿಮಾನಿಗಳ ಸಂಘ ಜಂಟಿಯಾಗಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಇದರಲ್ಲಿ ದರ್ಶನ್ ಜೈಲಿಗೆ ಹೋಗುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

DK Shivakumar Reacted to Darshan Fans Protest and Calls It is a Political Intrigue

"ದರ್ಶನ್ ಬಂಧಿಸಿದ್ದು, ಜಾಮೀನು ಕೊಡಿಸಿದ್ದು, ಮತ್ತೆ ಜೈಲಿಗೆ ಕಳುಹಿಸಿದ್ದು ಕಳ್ಳ ಕಾಂಗ್ರೆಸ್ ಪಕ್ಷ. ದರ್ಶನ್ ಜಾತಿಯಲ್ಲಿ ನಾಯ್ಡು, ಮುನಿರತ್ನಂ ಆಪ್ತ ಎಂಬ ಕಾರಣಕ್ಕೆ ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಅವರ ಪರ ನಿಲ್ಲಲಿಲ್ಲ. ರಾಜರಾಜೇಶ್ವರ ನಗರದಲ್ಲಿ ಕುಸಮಾ ಸೋಲಿಗೆ ದರ್ಶನ್ ಕಾರಣ ಎಂಬ ಅತಿರೇಖದಿಂದ ವರ್ತಿಸುತ್ತಿದ್ದ ಕಾಂಗ್ರೆಸ್ ನವರಿಗೆ ಸಿಕ್ಕಿದ ಅಸ್ತ್ರವೇ ರೇಣುಕಾಸ್ವಾಮಿ ಕೇಸ್. ಜಾಮೀನು ಮಂಜೂರು ಮಾಡಿಸಿದ್ದೂ ಕಾಂಗ್ರೆಸ್. ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿಸಿ ಬೇಲ್ ಕ್ಯಾನ್ಸಲ್ ಮಾಡಿಸಿದ್ದೂ ಕಾಂಗ್ರೆಸ್ ಇದಕ್ಕೆ ಸೂತ್ರದಾರ ಹಾಗೂ ಪಾತ್ರಧಾರಿ ಡಿಕೆ ಶಿವಕುಮಾರ್" ಕರಪತ್ರದಲ್ಲಿ ಬರೆದು ಸೋಶಿಯಲ್ ಮೀಡಿಯಾ ಹಂಚಿಕೊಳ್ಳಲಾಗಿದೆ.

ಹಾಗೇ ಕರಪತ್ರದ ಕೊನೆಯಲ್ಲಿ "ಕಾಂಗ್ರೆಸ್ ಸೋಲಿಸೋಣ.. ಡಿಕೆ ಶಿವಕುಮಾರ್ ಸೋಲಿಸೋಣ" ಎಂದೂ ಬರೆಯಲಾಗಿದೆ. ಈ ಪ್ರತಿಭಟನೆ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾಗಿ ವರದಿಯಾಗಿದೆ. ದರ್ಶನ್ ಜೈಲಿಗೆ ಹೋಗುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಡಿಕೆಶಿ ಹೇಳಿದ್ದಾಗಿ, ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಅಂದ್ಹಾಗೆ ದರ್ಶನ್ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಹೀಗಿದೆ. "ನಾನು ಯಾರ ಸುದ್ದಿಗೂ ಹೋಗಿಲ್ಲ. ನನಗೂ ದರ್ಶನ್ ಕೇಸ್‌ಗೂ ಯಾವುದೇ ಸಂಬಂಧವಿಲ್ಲ. ರಾಜಕೀಯವಾಗಿ ನನ್ನ ಮೇಲೆ ದೊಡ್ಡ ಪಿತೂರಿಯೇ ನಡೆಯುತ್ತಿರುವ ಸಾಧ್ಯತೆಯಿದೆ. ದರ್ಶನ್ ಪಾಪ ನಮ್ಮ ಹುಡುಗ. ಆ ಹೆಣ್ಣು ಮಗಳು (ದರ್ಶನ್ ಪತ್ನಿ) ನಮ್ಮ ಮನೆಗೆ ಬಂದಿದ್ಲು. ನಮಗೂ ಆ ಕೇಸ್‌ಗೂ ಯಾವುದೇ ಸಂಬಂಧವಿಲ್ಲ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾಗಿ ವರದಿಯಾಗಿದೆ.

DK Shivakumar Reacted to Darshan Fans Protest and Calls It is a Political Intrigue

ಹಾಗೇ ದರ್ಶನ್ ಕೇಸ್ ವಿಚಾರ ಏನಿದ್ದರೂ ಲಾ ಡಿಪಾರ್ಟ್‌ಮೆಂಟ್, ಹೋಮ್ ಮಿನಿಸ್ಟರ್‌ಗೆ ಸಂಬಂಧಿಸಿದೆ. ಅಭಿಮಾನಿಗಳು ಕೋರ್ಟ್‌ಗೆ ಹೋಗಲಿ. ನಾವೇನು ಬೇಡ ಅನ್ನುವುದಿಲ್ಲ. ದರ್ಶನ್ ಅಭಿಮಾನಿಗಳ ಸುದ್ದಿಗೆ ನಾನು ಯಾಕೆ ಹೋಗಲಿ. ಇದು ನನ್ನ ಮೇಲೆ ಮಾಡುತ್ತಿರುವ ರಾಜಕೀಯ ಷಡ್ಯಂತ್ರ." ಎಂದು ಡಿಕೆ ಶಿವಕುಮಾರ್ ಹೇಳಿದ್ದಾಗಿ ವರದಿ ಮಾಡಲಾಗಿದೆ. ಎಲ್ಲಿ ಯಾವಾಗ ಹೇಳಿದರು ಎಂಬ ಮಾಹಿತಿಯಿಲ್ಲ.

ಇದೇ ವೇಳೆ ಬಿಗ್ ಬಾಸ್‌ ಕಾರ್ಯಕ್ರಮದ ಸ್ಥಗಿತದ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಟ್ಟು ಬೋಲ್ಟು ವಿಚಾರವಾಗಿ ಸುದೀಪ್ ಪ್ರತಿಕ್ರಿಯಿಸಿದ್ದರಿಂದ ಡಿಕೆ ಶಿವಕುಮಾರ್ ಸೇಡು ತೀರಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್‌ಗೆ ಶೋ ಸ್ಥಗಿತಗೊಂಡಿದ್ದಕ್ಕೆ ನಾನು ಡಿಸಿ ಹಾಗೂ ಎಸ್‌ಪಿಗೆ ಬೈದಿದ್ದೇನೆ. ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಅಸಮಧಾನ ಹೊರ ಹಾಕಿದ್ದಾನೆ. ಅಲ್ಲಿ ಕೆಲಸ ಮಾಡುವ ಹುಡುಗರ ಉದ್ಯೋಗಕ್ಕೆ ಸಮಸ್ಯೆ ಆಗುತ್ತೆ ಎಂದು ಹೇಳಿದ್ದಾಗಿ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

More from Filmibeat

English summary
Karnataka Deputy CM DK Shivakumar reacted on Darshan fans protest against him and the Congress party is political conspiracy.
Read more about: darshan dk shivakumar protest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X