"ನಿಖಿಲ್ ವೆರಿ ವರಿ ಸಾರಿ" ಡಿಕೆ ಶಿವಕುಮಾರ್; ಗೆದ್ದ ಮಾತ್ರಕ್ಕೆ ಬೀಗಬಾರದು ನಿಖಿಲ್ ಕುಮಾರಸ್ವಾಮಿ

ಕರ್ನಾಟಕದಲ್ಲಿ ಮೂರು ಸ್ಥಾನಗಳ ಉಪ ಚುನಾವಣೆಯ ಫಲಿತಾಂಶದ ರಿಸಲ್ಟ್ ಬಂದಿದೆ. ಇದರಲ್ಲಿ ಹೈ ವೋಲ್ಟೇಜ್ ಅಂತ ಅನಿಸಿದ್ದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಎಚ್‌.ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಮೂರನೇ ಬಾರಿ ನಿಖಿಲ್ ಕುಮಾರಸ್ವಾಮಿ ಚುನಾವಣೆಯನ್ನು ಎದುರಿಸಿದ್ದರು.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪರ ಅಖಾಡಕ್ಕೆ ಇಳಿದಿದ್ದರು. ಇತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಇಬ್ಬರೂ ಸಿನಿಮಾ ಕ್ಷೇತ್ರದಿಂದಲೇ ಬಂದಿದ್ದರಿಂದ ಈ ಚುನಾವಣೆ ಮತದಾರರ ಫೇವರಿಟ್ ಕ್ಷೇತ್ರವಾಗಿತ್ತು.

DK Shivakumar says sorry to Nikhil Kumaraswamy lost Channapatna By Election here is his reply

ಈ ಉಪ ಚುನಾವಣೆ ರಾಜ್ಯದ ಉಪ ಮುಖ್ಯಮುಂತ್ರಿ ಡಿಕೆ ಶಿವಕುಮಾರ್‌ಗೆ ಹಾಗೂ ಕೇಂದ್ರ ಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಪ್ರತಿಷ್ಠೆಯಾಗಿತ್ತು. ತಮ್ಮ ಡಿಕೆ ಸುರೇಶ್ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡಿಕೆಶಿ ಮುಂದಾಗಿದ್ದರು. ಎಚ್‌ಡಿ ಕುಮಾರಸ್ವಾಮಿ ತಮ್ಮ ಕ್ಚೇತ್ರವನ್ನು ಉಳಿಸಿಕೊಳ್ಳುವ ಒತ್ತಡದಲ್ಲಿ ಇದ್ದರು. ಇಂದು (ನವೆಂಬರ್ 23) ಹೊರಬಿದ್ದಿದ್ದ ಫಲಿತಾಂಶದಲ್ಲಿ ನಿಖಿಲ್‌ಗೆ ಮತ್ತೆ ಸೋಲಾಗಿದೆ. ಬೈ ಎಲೆಕ್ಷನ್ ರಿಸಲ್ಟ್ ಬಂದ ಬಳಿಕ ಡಿಕೆಶಿ ಹಾಗೂ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆಗಳು ಹೀಗಿವೆ.

ಸವಾಲೆಸೆದಂತೆ ಸಿಪಿ ಯೋಗೇಶ್ವರ್ ಅವರನ್ನು ಗೆಲ್ಲಿಸಿದ ಬಳಿಕ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಗಮನ ಸೆಳೆದಿದೆ. ನಿಖಿಲ್ ಕುಮಾರ್ ಸೋಲಿನ ಬಳಿಕ ಸಿಂಪಥಿಯನ್ನು ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆಶಿ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ಸಿಪಿ ಯೋಗೇಶ್ವರ್ ಅವರು ಕಲೆಗಾರರು, ಚಿತ್ರನಟರು. ಯಾವ್ಯಾವ ಸಮಯದಲ್ಲಿ ಡೈಲಾಗ್ ಹೊಡೆಯಬೇಕು ಅಂತ ಗೊತ್ತಿದೆ. ಅವರು ಸೋಲುತ್ತೇನೆ ಎಲ್ಲೂ ಹೇಳಲಿಲ್ಲ. ಕುಮಾರಸ್ವಾಮಿ ಪ್ರಡ್ಯೂಸರ್.. ಇವರು ಆಕ್ಟರ್.. ಕುಮಾರಸ್ವಾಮಿ ಮಗನೂ, ಅಪ್ಪ ಎಲ್ಲಿದ್ದೀಯಪ್ಪ ಅಂದರೆ, ಜನ್ರು ಮಧ್ಯೆ ಇದ್ದೆ ಅಂತಾರೆ. ಪಾಪ ಅವರ ಸೋಲು ಅಂತ ಹೇಳಲ್ಲ. ಐ ಯಾಮ್ ಸಾರಿ ಫಾರ್ ಹಿಮ್." ಎಂದು ಡಿಕೆಶಿ ಸಾಪ್ಟ್ ಕಾರ್ನರ್ ತೋರಿಸಿದ್ದಾರೆ.

ಇತ್ತ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಕೂಡ ಕೂಲ್‌ ಆಗಿಯೇ ಉತ್ತರ ಕೊಟ್ಟಿದ್ದಾರೆ. ಗೆದ್ದಿರುವ ಮಾತ್ರ ಬೀಗಬಾರದು ಅಂತ ತಿರುಗೇಟು ಕೊಟ್ಟಿದ್ದಾರೆ. "ಗೆದ್ದಿದ್ದಾರೆ. ಗೆದ್ದಿರುವ ಮಾತ್ರ ಬೀಗುವಂತಹದ್ದು ಆಗಬಾರದು. ನನ್ನ ವಯಸ್ಸು ಬಹಳ ಚಿಕ್ಕದಿದೆ. ನನ್ನ ರಾಜಕಾರಣದ ಅನುಭವ, ನನಗೆ ಮೂರು ಸೋಲುಗಳಾಗಿದೆ. ಪೆಟ್ಟು ತಿಂದಿದ್ದೇನೆ. ನನ್ನಲ್ಲಿ ಲೋಪದೋಷಗಳು ಇಲ್ಲದೇ ಹೋದರೂ ಕಾರಣಾಂತರಗಳಿಂದ ಸೋತಿದ್ದೇನೆ. ಬೀಗಿದರೆ ಮುಂದಿನ ಚುನಾವಣೆಯಲ್ಲಿ ಯಾವ್ಯಾವ ರೀತಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತಾರೆ." ಎಂದಿದ್ದಾರೆ.

ಹಾಗೇ ಚನ್ನಪಟ್ಟಣ ಕ್ಷೇತ್ರವನ್ನು ಖಾಲಿ ಮಾಡಿಸಿದ್ದೇವೆ ಎನ್ನುವ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. "ಇಲ್ಲಿಂದ ಖಾಲಿ ಮಾಡಿಸಿದ್ವಿ. ಅಥವಾ ಮತ್ತೆ ನಾವು ನಮ್ಮ ರಾಜಕೀಯ ಶಕ್ತಿಯನ್ನು ಬೆಳೆಸಿಕೊಂಡ್ವಿ ಅನ್ನುವಂತಹದ್ದನ್ನು ತೀರ್ಮಾನ ಮಾಡುವುದಕ್ಕೆ ಆಗುವುದಿಲ್ಲ. ಹಾಗಿದ್ಮೇಲೆ ಮುಂದಿನ ಲೋಕಸಭಾ ಚುನಾವಣೆ ಏನಾಯ್ತು? ನಾವು ಏನಾದರೂ ಮಾತಾಡಿದ್ವಾ? ನಾವು ರಾಮನಗರ ಜಿಲ್ಲೆಯಿಂದ ಖಾಲಿ ಮಾಡಿಸಿದ್ವಿ ಅಂತ ಹೇಳುವುದಕ್ಕೆ ಆಗುತ್ತಾ? ಇಲ್ಲಿ ಶಕ್ತಿ ಇರುವುದು ಕ್ಷೇತ್ರದ ಮತದಾರರಿಗೆ ಮಾತ್ರ." ಎಂದು ನಿಖಿಲ್ ತಿರುಗೇಟು ಕೊಟ್ಟಿದ್ದಾರೆ.

ಹಾಗೇ ಜೆಡಿಎಸ್ ಕಾರ್ಯಕರ್ತರ ಕೆಲಸವನ್ನು ಹೊಗಳಿದ್ದಾರೆ. "ನಾನು ಮಂಡ್ಯ ಮತ್ತು ರಾಮನಗರ ಎರಡು ಚುನಾವಣೆಯನ್ನು ನೋಡಿದ್ದೇನೆ. ಆದರೆ, ಈ ಚುನಾವಣೆಯಲ್ಲಿ ಮಾತ್ರ ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತರು ಕೂಡ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅಂತಹವರಿಗೆ ನಾನು ಋಣಿಯಾಗಿರುತ್ತೇನೆ. ಈ ಮುಗಿದು ಹೋಗಿದೆ ಮುಂದೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. " ಎಂದಿದ್ದಾರೆ.

More from Filmibeat

English summary
DK Shivakumar says sorry to Nikhil Kumaraswamy lost Channapatna By Election here is his reply
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X