ಒಂದು ಕರೆ ಎತ್ತದೆ ಇದ್ದಿಕ್ಕೆ ₹13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ?
ಸೋಶಿಯಲ್ ಮೀಡಿಯಾ ಸ್ಟಾರ್ ಬೆಳ್ಳುಳ್ಳಿ ಕಬಾಬ್ ಚಂದ್ರು ಈಗ ಯಾರಿಗೆ ಗೊತ್ತಿಲ್ಲ ಹೇಳಿ. ಜನರು ತಮ್ಮ ಮನಸ್ಸಿಗೆ ಬಂದಂತೆ ಪ್ರೀತಿಯಿಂದ ಕರೆಯುತ್ತಾರೆ. ಒಮ್ಮೆ ಒನ್ಸ್ ಮೋರ್ ಚಂದ್ರು ಅಂತಾರೆ. ಇನ್ನೊಮ್ಮೆ ಚಟಪಟ ಚಂದ್ರು ಅಂತಾರೆ. ಹೀಗೆ ಅಡುಗೆ ಮಾಡುತ್ತಲೇ ತಮ್ಮ ವಿಶಿಷ್ಠ ಶೈಲಿಯಿಂದ ಫೇಮಸ್ ಆದವರು ಚಂದ್ರು.
ಚಂದ್ರು ಹಿನ್ನೆಲೆ ಈಗಾಗಲೇ ಹಲವು ಸಂದರ್ಶಗಳಲ್ಲಿ ಹೇಳಿಕೊಂಡಿದ್ದಾರೆ. ಅಣ್ಣಾವ್ರ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಚಂದ್ರು ಇಂದು ಬೆಳ್ಳುಳ್ಳಿ ಕಬಾಬ್ ಅಂತ ಜನಪ್ರಿಯರಾಗಿದ್ದೇ ಒಂದು ರೋಚಕ ಕಥೆ. ಮೇಕಪ್ ಆರ್ಟಿಸ್ಟ್ ಆದಲ್ಲಿಂದ ಹಿಡಿದು ಹೊಟೇಲ್ ಉದ್ಯಮಿ ಆಗುವವರೆಗೂ ಚಂದ್ರು ಬೆಳೆದು ನಿಂತಿದ್ದಾರೆ.

ಇತ್ತೀಚೆಗೆ ರ್‍ಯಾಪಿಡ್ ರಶ್ಮಿಕಾ ಯೂಟ್ಯೂಬ್ ಚಾನೆಲ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಭಾಗವಹಿಸಿದ್ದರು. ಈ ವೇಳೆ ತಮ್ಮ ಜರ್ನಿಯನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಹೊಟೇಲ್ ಉದ್ಯಮಕ್ಕೆ ಇಳಿದಾಗ ಬರೋಬ್ಬರಿ 13 ಕೋಟಿ ರೂಪಾಯಿಯನ್ನು ಒಂದು ಕರೆ ಸ್ವೀಕರಿಸಿದೆ ಇದ್ದಿದ್ದಕ್ಕೆ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಅಣ್ಣಾವ್ರ ಕಂಪನಿಯಲ್ಲಿ ಚಂದ್ರು ಸಹಾಯಕರಾಗಿ ಸೇರಿಕೊಂಡಿದ್ದರು. ಆ ಬಳಿಕ ಕನಸಿನ ರಾಣಿ ಮಾಲಾಶ್ರೀಯವರಿಗೆ ಮೇಕಪ್ ಆರ್ಟಿಸ್ಟ್ ಆಗಿದ್ದರು. ಸುಮಾರು 4 ವರ್ಷಗಳ ಕಾಲ ಮಾಲಾಶ್ರೀಗೆ ಮೇಕಪ್ ಮಾಡಿದ್ದ ಚಂದ್ರು, ಬಳಿಕ ಹೊಟೇಲ್ ಉದ್ಯಮಕ್ಕೆ ಕೈ ಹಾಕಿದ್ದರು. ಚಿಕ್ಕದೊಂದು ಗಾಡಿಯಲ್ಲಿ ಹೊಟೇಲ್ ನಡೆಸುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಶುರುವಾಗಿದ್ದ ಜರ್ನಿ ಕಾಂಟ್ರಾಕ್ಟ್ ತೆಗೆದುಕೊಳ್ಳುವವರೆಗೂ ಬಂದು ನಿಂತಿತ್ತು.

ಬೆಂಗಳೂರಿನಲ್ಲಿ ನಡೆದ ಏಷ್ಯನ್ ಗೇಮ್ಸ್ ನಡೆಯುತ್ತಿತ್ತು. ಈ ವೇಳೆ ಚಟಪಟ ಚಂದ್ರುಗೆ ಒಂದು ಬಿಗ್ ಆಫರ್ ಬಂದಿತ್ತು. ಸುಮಾರು 13 ಕೋಟಿ ರೂಪಾಯಿ ಡೀಲ್ ಅದು. ಆದರೆ, ಆಗ ಮೊಬೈಲ್ ಫೋನ್ ಇರಲಿಲ್ಲ. ಆಗ ಕೇವಲ ಪೇಜರ್ ಅಷ್ಟೇ ಇತ್ತು. ಹೀಗಾಗಿ ಪೇಜರ್ ಅನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದರು. ಈ ವೇಳೆ ಏಷ್ಯನ್ ಗೇಮ್ಸ್‌ಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಅಂತ ಬಂದಿದ್ದ ಡೀಲ್ ಮಿಸ್ ಆಗಿತ್ತು. ಈ ವಿಷಯವನ್ನು ಚಟಪಟ ಚಂದ್ರು ರ್‍ಯಾಪಿಡ್ ರಶ್ಮಿಕಾ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
"ಫೋನ್ ಎತ್ತದೆ ಇದ್ದಿದ್ದಕ್ಕೆ ದೊಡ್ಡ ಆರ್ಡರ್ ಹೊರಟು ಹೋಗಿದೆ. ಆಗ ದೇವೇಗೌಡರು ಸಿಎಂ ಆಗಿದ್ದರು. ಅಂಬರೀಶ್ ಅಣ್ಣ ಸಪೋರ್ಟ್. 97 ಕೋರಮಂಗಲದಲ್ಲಿ ಏಷ್ಯನ್ ಗೇಮ್ ಆಯ್ತು. ಅಜಯ್ ಕುಮಾರ್ ಸರ್ನಾಯಕ್ ಅಂತ ಸ್ಪೋರ್ಟ್ಸ್ ಮಿನಿಸ್ಟರ್ ಆಗಿದ್ದರು. ಎಂಎಲ್‌ಎಗಳ ಕ್ರಿಕೆಟ್ ಆಡಿದ್ದರು. ಫಿಶ್ ಹಾಗೂ ಕೊನೆಯ ದಿನ 4 ಸಾವಿರ ಮಂದಿಗೆ ಅಡುಗೆ ಮಾಡಿಕೊಟ್ಟೆ. ಮಧ್ಯಾಹ್ನ 1.30ಕ್ಕೆ ಆರ್ಡರ್ ತೆಗೆದುಕೊಂಡೆ. ರಾತ್ರಿ 9 ಗಂಟೆಗೆ ಅಡುಗೆ ಶಬರಿಮಲೆಗೆ ಹೋದೆ. ಆ ಧೈರ್ಯವಿತ್ತು. ಅದನ್ನು ನೋಡಿ ಅಜಯ್ ಕುಮಾರ್ ಸರ್ನಾಯಕ್ ಏಷ್ಯಾನ್ ಗೇಮ್ ಮಾಡಿ ಅಂದರು." ಎಂದು ಏಷ್ಯನ್ ಗೇಮ್ಸ್ ಆರ್ಡರ್ ಸಿಕ್ಕಿದ್ದನ್ನು ಹೇಳಿಕೊಂಡಿದ್ದರು.
ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ್ಮೇಲೆ ಹಗಲು ರಾತ್ರಿ ಎನ್ನದೆ ಫೋನ್ ಕಾಲ್‌ಗಳು ಬರುತ್ತವೆ. ಆದರೆ, ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ಫೇಕ್ ಕರೆಗಳಾಗಿದ್ದರೂ ಸ್ವೀಕರಿಸುತ್ತಾರೆ. ಅದಕ್ಕೆ ಕಾರಣ 13.4 ಕೋಟಿ ರೂಪಾಯಿಯ ಆರ್ಡರ್
"ಆ ಊಟದ್ದು 13.4 ಕೋಟಿ ರೂಪಾಯಿ ಕಾಂಟ್ರ್ಯಾಕ್ಟ್. ಆಗ ನಮ್ಮ ಬಳಿ ಪೇಜರ್ ಇತ್ತು. ಆಗ ಮೊಬೈಲ್ ಇರಲಿಲ್ಲ. ಪೇಜರ್ ಏನು ಗಿರಗಿರ ಅನ್ನುತ್ತೆ ಅಂತ ಹೇಳಿ ಪಕ್ಕಕ್ಕೆ ಬಿಸಾಕಿದ್ದೆ. ಆಗ ನಾನು ಆ ಬ್ಯುಸಿನೆಸ್ ಮಾಡಿದ್ದರೆ, ಎಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿರೋದು? ಆಗ ಅಷ್ಟೊಂದು ಕ್ಯಾಟರಿಂಗ್ಸ್ ಇರಲಿಲ್ಲ. ಆ ಫೀಲಿಂಗ್ ಇವತ್ತಿನವರೆಗೂ ಇದೆ." ಎಂದು ಚಂದ್ರು ಹೇಳಿಕೊಂಡಿದ್ದಾರೆ.


Click it and Unblock the Notifications











