ಸಪ್ತಸಾಗರ ದಾಟಿದ ಮುಂದೆ ಸಾಗಿದ ರುಕ್ಷ್ಮಿಣಿ ವಸಂತ್; ಈಗ ನಟಿ ಕೈಯಲ್ಲಿರೋ ಸಿನಿಮಾಗಳೆಷ್ಟು?
ಒಂದು ಸಿನಿಮಾ ಕೈ ಹಿಡಿದರೆ ಸಾಕು ಯಾರೇ ಆಗಿದ್ದವರೂ ಅವರ ನಸೀಬು ಬದಲಾಗಿ ಬಿಡುತ್ತೆ. ಒಂದರ ಹಿಂದೊಂದು ಸಿನಿಮಾಗಳು ಸಿಗುತ್ತವೆ. ಅವು ಗೆದ್ದರೆ ಪರಭಾಷೆಯಿಂದಲೂ ಆಫರ್ ಬಂದು ಬಿಡುತ್ತೆ. ಈ ಹಂತದಲ್ಲಿ ಸ್ವಲ್ಪ ಎಡವಿದರೂ ಅವರ ವೃತ್ತಿ ಬದುಕು ಪಾತಾಳಕೆ ಕುಸಿಯುವ ಛಾನ್ಸ್ ಹೆಚ್ಚಿರುತ್ತೆ. ಇದು ನಟಿಯರ ಪಾಲಿಗಂತೂ ಮುಳ್ಳಿನ ಹಾದಿಯೇ..
'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಹಾಗೂ ಸೈಡ್ ಬಿ ಬಳಿಕ ರುಕ್ಮಿಣಿ ವಸಂತ್ ಎಲ್ಲರ ಫೇವರಿಟ್ ನಟಿಯಾಗಿದ್ದಾರೆ. ಈ ಸಿನಿಮಾ ತೆರೆಕಂಡ ಬಳಿಕ ರುಕ್ಮಿಣಿ ಬಗ್ಗೆ ಸುದ್ದಿಯಿಲ್ಲ. ಹಾಗಂತ ಆಫರ್‌ಗಳು ಇಲ್ಲಾ ಅಂತಲ್ಲ. ಸುಮ್ಮನೆ ಕೂತಿದ್ದಾರೆ ಅಂತನೂ ಅಲ್ಲ. ರುಕ್ಮಿಣಿ ವಸಂತ್ ಕೈ ತುಂಬಾ ಸಿನಿಮಾಗಳಿವೆ. ಎಲ್ಲವೂ ಬಿಗ್ ಬಜೆಟ್ ಸಿನಿಮಾಗಳೇ. ಇವೆಲ್ಲದರ ಶೂಟಿಂಗ್ ಸದ್ದಿಲ್ಲದೇ ನಡೆಯುತ್ತಿದೆ.

ರುಕ್ಮಿಣಿ ವಸಂತ್ ಕೈಯಲ್ಲಿ ಎರಡು ಕನ್ನಡ ಸಿನಿಮಾಗಳಿದ್ದರೆ, ಇನ್ನೆರಡು ತಮಿಳು ಸಿನಿಮಾಗಳಿವೆ. ಹೀಗಾಗಿ ಈ ವರ್ಷ ರುಕ್ಮಿಣಿ ಬಹುತೇಕ ಬ್ಯುಸಿ ಅಂತಲೇ ಹೇಳಬಹುದು. ಇವುಗಳಲ್ಲೊಂದು 'SK 23'. ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ ನಟಿಸುತ್ತಿರುವ ಸಿನಿಮಾ ಎರಡನೇ ಹಂತದ ಶೂಟಿಂಗ್ ಕೆಲವು ದಿನಗಳ ಹಿಂದಷ್ಟೇ ಶುರುವಾಗಿದೆ. 'ಗಜನಿ'ಯಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ಮುರುಗದಾಸ್ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ರುಕ್ಮಿಣಿ ವಸಂತ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಸಪ್ತಸಾಗರದ ಬಳಿಕ ಬ್ಯುಸಿ
'ಬೀರ್‌ಬಲ್' ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ 'ಅಪ್‌ಸ್ಟಾರ್ಟ್ಸ್' ಅನ್ನುವ ಹಿಂದಿ ಸಿನಿಮಾದಲ್ಲಿ ನಟಿಸಿದ್ದರೂ, ಆಗ ಮಟ್ಟಿಗೆ ಸದ್ದು ಮಾಡಿರಲಿಲ್ಲ. ಆದರೆ, ರಕ್ಷಿತ್ ಶೆಟ್ಟಿ ಜೊತೆ ನಟಿಸಿದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ರಕ್ಮಿಣಿಗೆ ಹೊಸ ಇಮೇಜ್ ಕೊಟ್ಟಿದೆ. ಪರಭಾಷೆಯ ಸಿನಿಮಾ ಮಂದಿ ರುಕ್ಮಿಣೀ ವಸಂತ್ ಡೇಟ್ಸ್‌ಗಾಗಿ ಕಾದು ಕೂತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಮತ್ತೊಬ್ಬ ನಟಿ ಪರಭಾಷೆಯಲ್ಲಿ ಮಿಂಚುವ ಲಕ್ಷಣಗಳು ಎದುರಾಗುತ್ತಿವೆ.

ಕೈಯಲ್ಲಿರೋ ಸಿನಿಮಾಗಳ್ಯಾವುವು?
'ಸಪ್ತ ಸಾಗರದಾಚೆ ಎಲ್ಲೋ' ಬಳಿಕ ರುಕ್ಮಿಣಿ ವಸಂತ್ ನಾಲ್ಕು ಸಿನಿಮಾಗಳು ಅನೌನ್ಸ್ ಆಗಿವೆ. ಈಗಾಗಲೇ ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿಯ 51ನೇ ಸಿನಿಮಾದಲ್ಲಿ ನಟಿಸಿ, ಅದರ ಶೂಟಿಂಗ್ ಮುಗಿಸಿದ್ದಾರೆ. ಮತ್ತೊಂದು ತಮಿಳು ಸಿನಿಮಾ 'ಎಸ್‌ಕೆ 23' ಶೂಟಿಂಗ್ ನಡೆಯುತ್ತಿದೆ. ಎ ಆರ್ ಮುರುಗದಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಕನ್ನಡದಲ್ಲಿ ಶಿವಣ್ಣ ನಟಿಸುತ್ತಿರುವ ಭೈರತಿ ರಣಗಲ್' ಸಿನಿಮಾಗೂ ರುಕ್ಮಿಣಿ ನಾಯಕಿಯಾಗಿದ್ದಾರೆ. ಹಾಗೇ ಶ್ರೀಮುರಳಿ ಸಿನಿಮಾ 'ಬಘೀರ'ಗೂ ಇವರೇ ನಾಯಕಿ. ಹೀಗಾಗಿ ಬ್ಯಾಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾಗಳು ಎಲ್ಲಿಗೆ ಬಂತು?
ಇತ್ತೀಚೆಗಷ್ಟೇ 'ಭೈರತಿ ರಣಗಲ್' ತಂಡ ಸಿನಿಮಾ ಡೇಟ್ ಅನ್ನು ಅನೌನ್ಸ್ ಮಾಡಿದೆ. ಇದೇ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಜೊತೆ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಈ ಸಿನಿಮಾ ಸುಮಾರು 70ರಷ್ಟು ಶೂಟಿಂಗ್ ಮುಗಿಸಿದೆ. ಇದರ ಜೊತೆನೇ ಶ್ರೀಮುರಳಿ ನಟನೆಯ 'ಬಘೀರ' ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಹೀಗಾಗಿ ಇವರೆಡರಲ್ಲಿ ಒಂದು ಸಿನಿಮಾ ಅಂತೂ ರಿಲೀಸ್ ಆಗೋದು ಪಕ್ಕಾ.
ತೆಲುಗು ಸಿನಿಮಾಗಳಿಗೂ ಆಫರ್?
ರುಕ್ಮಿಣಿ ವಸಂತ್ ಸದ್ಯ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ತೆಲುಗು ಸಿನಿಮಾಗಳಿಂದಲೂ ಆಫರ್ ನೀಡಲಾಗಿತ್ತಿದೆ. ಆದರೆ, ಒಳ್ಳೆಯ ಸಬ್ಜೆಕ್ಟ್‌ಗಳಿಗಾಗಿ ಕಾಯುತ್ತಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಒಟ್ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಬಳಿಕ ರುಕ್ಮಿಣಿ ಸದ್ದಿಲ್ಲ ಅಂದುಕೊಂಡಿದ್ದರೆ ಅದು ತಪ್ಪು. ಅವರು ಬಳಿ ಕೈ ತುಂಬಾ ಸಿನಿಮಾಗಳಿವೆ.


Click it and Unblock the Notifications











