ಅಂದು ವೀರ ಮದಕರಿಯ ಮಗಳು ಇಂದು ಗ್ಲಾಮರ್ ಬೊಂಬೆ: ಈ ನಟಿ ನೆನಪಿದೆಯೇ?

ಕನ್ನಡ ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿ ನಟಿಸಿದ್ದವರು ಮುಂದೆ ನಾಯಕರಾಗಿ ಕಾಣಿಸಿಕೊಂಡಿದ್ದು ತೀರಾ ವಿರಳ. ದೊಡ್ಡ ಮಟ್ಟಕ್ಕೆ ಹೆಸರು ಮಾಡಿದವರೂ ಕೂಡ ಹೀರೋ ಆಗಿ ಮಿಂಚುವಲ್ಲಿ ವಿಫಲರಾಗಿದ್ದರು. ಆದರೆ, ಈ ನಟಿಯ ಹಾಗಲ್ಲ. ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಈ ನಟಿ ಈಗ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

ಅಷ್ಟಕ್ಕೂ ಈ ಬಾಲ ನಟಿಯ ಫೋಟೋ ನೋಡಿದವರೆ ನಿಮಗೆ ಯಾವ ಸಿನಿಮಾ ನೆನಪಾಗುತ್ತೆ? ಕಿಚ್ಚ ಸುದೀಪ್ 16 ವರ್ಷಗಳ ಹಿಂದೆ ನಟಿಸಿದ್ದ 'ವೀರ ಮದಕರಿ' ಸಿನಿಮಾದಲ್ಲಿ ಈಕೆ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಆ ನಟಿಯ ಹೆಸರೇ ಜೆರುಶಾ ಕ್ರಿಸ್ಟೋಫರ್. ಅಂದು ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ನಟಿ ಈಗ ನಾಯಕಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

Do you know Kichcha Sudeep Veera Madakari movie child artist Jerusha Christopher looking know

ಜೆರುಶಾ ಕ್ರಿಸ್ಟೋಪರ್ 'ವೀರ ಮದಕರಿ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಮಗಳ ಪಾತ್ರದಲ್ಲಿ ನಟಿಸಿದ್ದರು. ಆಗಿನ್ನೂ ಇವರಿಗೆ ಕೇವಲ 5 ವರ್ಷ ವಯಸ್ಸು. ಪುಟ್ಟ ಬಾಲಕಿಯಾಗಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದ ಈ ನಟಿಯೀಗೆ ಗುರುತೇ ಸಿಗದ ಹಾಗೆ ಬೆಳೆದು ನಿಂತಿದ್ದಾರೆ. ಅಷ್ಟಕ್ಕೂ ಇಷ್ಟು ವರ್ಷ ಜೆರುಶಾ ಏನು ಮಾಡುತ್ತಿದ್ದರು? ಇವರ ಸಿನಿಮಾ ಕರಿಯರ್ ಹೇಗಿದೆ? ತಿಳಿಯಲು ಮುಂದೆ ಓದಿ.

2009ರಲ್ಲಿ ಕಿಚ್ಚ ಸುದೀಪ್ ನಟಿಸಿದ 'ವೀರ ಮದಕರಿ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು. ತೆಲುಗಿನ 'ವಿಕ್ರಮಾರ್ಕುಡು' ಸಿನಿಮಾದ ರಿಮೇಕ್ ಆಗಿದ್ದರೂ, ಕನ್ನಡದಲ್ಲೂ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮಗಳಾಗಿ ಜೆರುಶಾ ಕ್ರಿಸ್ಟೋಫರ್ ಮಗನ ಸೆಳೆದಿದ್ದರು. ಆದರೂ, ಬಾಲನಟಿಯಾಗಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಆದರೆ, ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದರು. ಮೂಲತ: ಬೆಂಗಳೂರಿನವರೇ ಆಗಿರುವ ಜೆರುಶಾ ಸುಮಾರು 50 ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ನಟಿ ಪಾಡ್‌ಕಾಸ್ಟ್ ಒಂದಕ್ಕೆ ಸಂದರ್ಶನ ನೀಡಿದ್ದರು. ಆ ವೇಳೆ 'ವೀರ ಮದಕರಿ' ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದನ್ನು ಹೇಳಿಕೊಂಡಿದ್ದರು. ಅಂದಿನಿಂದ ಮತ್ತೆ ಸುದ್ದಿಯಾಗಿದ್ದರು.

ಜೆರುಶಾ ಕ್ರಿಸ್ಟೋಫರ್ ಸದ್ಯ ಮಾಡಲ್ ಆಗಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಪವನ್ ಕುಮಾರ್ ನಿರ್ದೇಶಿಸಿದ ಮಲಯಾಳಂ ಸಿನಿಮಾ 'ಧೂಮಂ'ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಂದು ಪುಟ್ಟ ಬಾಲಕಿಯಾಗಿದ್ದ ಜೆರುಶಾ ಈಗ ನಾಯಕಿಯಾಗುವಷ್ಟು ಎತ್ತರಕ್ಕೆ ಗ್ಲಾಮರ್ ಬೊಂಬೆಯಾಗಿ ಬೆಳೆದಿದ್ದಾರೆ. ಜಾಹೀರಾತು ಅಷ್ಟೇ ಅಲ್ಲ. ನಾಟಕಗಳಲ್ಲಿಯೂ ನಟಿಸಿದ ಅನುಭವ ಇವರಿಗೆ ಇದೆ.

ಇಂದು (ಆಗಸ್ಟ್ 21) ಜೆರುಶಾ ಕ್ರಿಸ್ಟೋಫರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅಧಿಕೃತವ ನಿರ್ದೇಶಕ ಮಹೇಶ್ ಬಾಬು ತಂಡ ಅವರನ್ನು ವೆಲ್‌ ಕಮ್ ಮಾಡಿದೆ. ಸ್ಮೈಲ್ ಗುರು ಖ್ಯಾತಿಯ ರಕ್ಷಿತ್ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾವನ್ನು 'ಅರಸು', 'ಆಕಾಶ್' ಖ್ಯಾತಿಯ ಮಹೇಶ್ ಬಾಬು ನಿರ್ದೇಶಿಸುತ್ತಿದ್ದು, ಆ ಸಿನಿಮಾದಲ್ಲಿ ಜೆರುಶಾ ಕ್ರಿಸ್ಟೋಫರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Sudeep Veera Madakari movie child artist Jerusha Christopher adult look
Read more about: sudeep actress filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X