ಯುವ ರಾಜ್‌ಕುಮಾರ್ ಅವರ ಹುಡುಗಿಯನ್ನು ಏನಂತಾ ಕರೆಯುತ್ತಾರೆ ಗೊತ್ತಾ? ಏನೋ ಗುಡ್‌ ನ್ಯೂಸ್ ಕಾದಿದೆ!

ಸ್ಯಾಂಡಲ್‌ವುಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಸ್ಥಾನವನ್ನು ತುಂಬುವುದಕ್ಕೆ ಯುವ ಬಂದಿದ್ದಾಗಿದೆ. ದೊಡ್ಮೆನೆಯ ಕುಡಿ ಯುವ ರಾಜ್‌ಕುಮಾರ್ ಗ್ರ್ಯಾಂಡ್ ಎಂಟ್ರಿ ಆದ್ಮೇಲೆ ಮಾಸ್ ಅವತಾರ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕಾಗಿ 'ಎಕ್ಕ' ರೆಡಿಯಾಗಿದೆ. ಈಗಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ಸಿನಿಮಾ ಯುವ ಅವತಾರ ನೋಡಿ ಮತ್ತೊಬ್ಬ ಮಾಸ್ ಹೀರೋ ಸಿಕ್ಕ ಖುಷಿಯಲ್ಲಿ ಫ್ಯಾನ್ಸ್ ಇದ್ದಾರೆ.

ಸಿನಿಮಾವೇನೋ ಮಾಸ್. ಆದರೆ, ಮನಸ್ಸು ಕೂಡ ಮಾಸ್ ಆಗಿ ಇರಬೇಕಲ್ಲ. "ದಿಲ್ ತೋ ಬಚ್ಚಾ ಹೇ ಜೀ" ಅನ್ನೋ ಹಾಗೆ ಯುವ ಹೃದಯ ಪ್ರೀತಿಗೆ ಹಂಬಲಿಸೋ ಹಾಗೆ ಕಾಣಿಸುತ್ತಿದೆ. ಅಷ್ಟಕ್ಕೂ ಸಿನಿಮಾ ರಿಲೀಸ್ ಆಗೋ ಸಮಯದಲ್ಲಿ ಯಾಕೀ ಪ್ರೀತಿ ಮಾತು ಅಂತ ಅನುಮಾನ ಮೂಡುವುದು ಸಹಜ. ಯುವ ರಾಜ್‌ಕುಮಾರ್ ಮತ್ತೆ ಲವ್ ಆಗಿದೆಯಾ? ಈ ಪ್ರಶ್ನೆ ಬರೋದೂ ಕೂಡ ಸಹಜ.

Do you know what Yuva RajKumar s girlfriend is affectionately called Watch video

ಅಭಿಮಾನಿಗಳಿಗೂ ಇದೇ ಪ್ರಶ್ನೆ ಕಾಡುತ್ತಿರುವುದಕ್ಕೂ ಸಾಕು. ಏನಪ್ಪ 'ಎಕ್ಕ' ಸಿನಿಮಾ ರಿಲೀಸ್ ಆಗಲಿ ಅಂದರೆ, ಇದೇನಿದು ಪ್ರೀತಿ ಗೀತಿ ಇತ್ಯಾದಿ ಅಂದ್ಕೊಂಡ್ರೆ, ಯುವ ಏನೋ ಗುಡ್ ನ್ಯೂಸ್ ಕೊಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಅಭಿಮಾನಿಗಳಿಗೆ ನಿಮ್ಮ ಹುಡುಗಿಯನ್ನು ನೀವು ಏನಂತಾ ಕರೆಯುತ್ತೀರಾ? ಅಂತ ವಿಡಿಯೋ ಮಾಡಿ ಪ್ರಶ್ನೆ ಕೇಳಿದ್ದಾರೆ. ಹಾಗೇ ಅವರು ಏನಂತ ಕರೀತಾರೆ? ಅನ್ನೋ ಬಗ್ಗೆನೂ ಮಾತಾಡಿದ್ದಾರೆ. ಹೀಗಿದ್ಮೇಲೆ ಲೈಫ್‌ನಲ್ಲಿ ಏನೋ ನಡೆದಿದೆ ಅಂತಾನೇ ಅರ್ಥ.

ಯುವ ರಾಜ್‌ಕುಮಾರ್ ಮೊದಲ ಸಿನಿಮಾದಲ್ಲೇ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದರು. ಆಮೇಲೆ ಅವರು ಆಕ್ಷನ್‌ ಹೀರೋ ಅಂತ ಅನಿಸಿದ್ದು. ಚೊಚ್ಚಲ ಸಿನಿಮಾ ಆದ್ಮೇಲೆ ಎರಡನೇ ಸಿನಿಮಾ ಕಂಪ್ಲೀಟ್ ಮಾಸ್. 'ಎಕ್ಕ' ತುಣುಕುಗಳನ್ನು ನೋಡಿದರೇ, ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಅನ್ನೋದನ್ನು ಹೇಳಿ ಬಿಡಬಹುದು. ಆದರೆ, ಪುನೀತ್ ರಾಜ್‌ಕುಮಾರ್ ನಟಿಸಿದ 'ಜಾಕಿ' ಸಿನಿಮಾದಲ್ಲೂ ಒಂದು ಲವ್ ಟ್ರ್ಯಾಕ್ ಇತ್ತು. ಹಾಗೇ 'ಎಕ್ಕ'ದಲ್ಲೂ ನಿರೀಕ್ಷೆ ಮಾಡಬಹುದು. ಹಾಗಂತ ಇದು ಸಿನಿಮಾ ಬಗ್ಗೆ ಏನೂ ಹೇಳಿಲ್ಲ. ದಿಢೀರನೇ ಒಂದು ವಿಡಿಯೋ ಮಾಡಿ ನಮ್ಮ ಹುಡುಗೀನ ಪ್ರೀತಿಯಿಂದ ಏನಂತ ಕರೀತಿನಿ ಗೊತ್ತಾ? ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂದರೆ..

"ಎಲ್ಲರೂ ಹೇಗಿದ್ದೀರ? ವಾತಾವರಣ ಎಷ್ಟು ಸಖತ್ ಆಗಿದೆಯಲ್ವ? ಈ ವಾತಾವರಣಕ್ಕೆ ಸರಿಯಾಗಿ ಒಂದು ಕಾಫಿ ಕುಡಿದರೆ, ಸೂಪರ್ ಆಗಿರುತ್ತೆ. ಅದು ಸರಿ.. ಎಲ್ಲಾ ಹುಡುಗರಿಗೂ ಒಂದು ಪ್ರಶ್ನೆ. ನಿಮ್ಮ ಹುಡುಗಿಯನ್ನು ನೀವು ಏನಂತ ಕರೀತಿರಾ? ಅದಕ್ಕೆ ಪ್ರೀತಿಯಿಂದ ಒಂದು ಹೆಸರು ಇಟ್ಟಿರುತ್ತೀರಲ್ಲ. ಏನಂತ ಸ್ವಲ್ಪ ಹೇಳುತ್ತೀರ? ಯಾಕಂದ್ರೆ, ನಾನು ಏನಂತ ಕರೆಯುತ್ತೇನೆ ಗೊತ್ತಾ?" ಎಂದು ವಿಡಿಯೋ ಎಂಡ್ ಮಾಡಿದ್ದಾರೆ. ಅಂದರೆ, ಮುಂದುವರೆದ ಭಾಗ ಇನ್ನೂ ಇದೆ. ಯಾವಾಗ ಪೋಸ್ಟ್ ಮಾಡುತ್ತಾರೋ ಮುಂದೆ ನೋಡೋಣ.

ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ನಾ ಮುಂದು ತಾ ಮುಂದು ಅಂತ ಕಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಒಬ್ಬರು "ನಮ್ ಹುಡುಗಿ ಹೆಸರನ್ನ ಅವ್ರ ಅಪ್ಪ ಅಮ್ಮ ಕಷ್ಟ ಪಟ್ಟು ನಾಮಕರಣ ಮಾಡವ್ರೆ, ಅದಕ್ಕೆ ಅವ್ರು ಇಟ್ಟಿರೋ ಹೆಸರನ್ನೇ ಕರೆಯುತ್ತೇನೆ" ಎಂದಿದ್ದಾರೆ. ಇನ್ನೊಬ್ಬರು "ಯುವ ಅಣ್ಣಾ ನಾವು ಇನ್ನಾ ಸಿಂಗಲ್ ಇದೀವಿ. ಇನ್ನೂ ಹುಡ್ಗಿ ಎಲ್ಲಿ? ಪ್ರೀತಿಯಿಂದ ಹೆಸ್ರು ಹೆಂಗ್ ಇಡೋಣ?" ಅಳಲು ತೋಡಿಕೊಂಡಿದ್ದಾರೆ. ಮತ್ತೊಬ್ಬರು "ಬೇಬಿ ಅಂತಾ ಕರಿತೀನಿ ಯುವ ಅಣ್ಣ" ಎಂದಿದ್ದಾರೆ. ಹೀಗೆ ಕಮೆಂಟ್‌ಗಳ ಮೇಲೆ ಕಮೆಂಟ್ ಬಂದಿದೆ.

ಇನ್ನು ಈ ವಿಡಿಯೋ ಯಾಕೆ ಅಂತ ಕೆಲವರು ಡಿಕೋಡ್ ಮಾಡಿದ್ದಾರೆ. ಶೀಘ್ರದಲ್ಲೇ 'ಎಕ್ಕ' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಬಹುದು. ಅದಕ್ಕೆ ಯುವ ರಾಜ್‌ಕುಮಾರ್‌ ಇಂತಹದ್ದೊಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆಂದು ಗೆಸ್ ಮಾಡಿದ್ದಾರೆ.

More from Filmibeat

English summary
Do you know what Yuva RajKumar's girlfriend is affectionately called? Watch video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X