ಕಿಚ್ಚ ಸುದೀಪ್ ಬಿಗ್‌ಬಾಸ್‌ನಲ್ಲಿ ತೊಡುವ ಕಾಸ್ಟ್ಯೂಮ್‌ನ ಡಿಸೈನ್ ಮಾಡೋದ್ಯಾರು ಗೊತ್ತೇ?
ಕಿಚ್ಚ ಸುದೀಪ್ ಕಾಸ್ಟ್ಯೂಮ್ ಸೆನ್ಸ್ ಬೇರೆ ಲೆವೆಲ್‌ನಲ್ಲಿಯೇ ಇದೆ ಬಿಡಿ. ಕಿಚ್ಚ ಸುದೀಪ್ ಸಿನಿಮಾನೇ ಮಾಡಲಿ. ರಿಯಾಲಿಟಿ ಶೋನಲ್ಲಿ ಬರಲಿ. ಇಲ್ಲವೇ ಇವೆಂಟ್‌ನಲ್ಲಿ ಕಾಣಿಸಿಕೊಳ್ಳಲಿ. ಎಲ್ಲರ ಕಣ್ಣು ಕಿಚ್ಚ ಸುದೀಪ್ ನಟಿಸಿದ ಕಾಸ್ಟ್ಯೂಮ್ ಮೇಲೆ ಹೋಗುತ್ತೆ. ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ
ಕಿಚ್ಚ ಸುದೀಪ್ ಧರಿಸುವ ಕಾಸ್ಟ್ಯೂಮ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಇದ್ದವು.
ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುವಾಗ ವೀಕೆಂಡ್‌ಗಳಲ್ಲಿ ಕಿಚ್ಚ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತಾರೆ. ಆ ಎರಡು ದಿನ ಸುದೀಪ್ ಒಂದೊಂದು ಡಿಸೈನರ್ ವೇರ್ ಧರಿಸಿ ಬಿಗ್‌ಬಾಸ್ ವೇದಿಕೆಗೆ ಎಂಟ್ರಿ ಕೊಡುತ್ತಾರೆ. ಈ ವೇಳೆ ಅವರಿಗಾಗಿಯೇ ವಿಶೇಷವಾಗಿ ಕಾಸ್ಟ್ಯೂಮ್‌ಗಳನ್ನು ಡಿಸೈನ್ ಮಾಡಲಾಗುತ್ತೆ. ಆ ಕಾಸ್ಟ್ಯೂಮ್‌ಗಳನ್ನು ಧರಿಸಿ ಪ್ರತಿಬಾರಿ ವೇದಿಕೆಗೆ ಬಂದಾಗಲೂ ಕಿರುತೆರೆ ವೀಕ್ಷಕರ ಕಣ್ಣು ಅವರ ಮೇಲೆ ಹೋಗುತ್ತೆ.
ಅಷ್ಟಕ್ಕೂ ಕಿಚ್ಚ ಸುದೀಪ್‌ಗೆ ಈಗ ವಿಭಿನ್ನವಾಗಿ ಡಿಸೈನ್ ಮಾಡಿಕೊಡುವ ಡಿಸೈನರ್ ಯಾರು? ಕೇವಲ ಕಿಚ್ಚ ಸುದೀಪ್‌ಗೆ ಅಷ್ಟೇ ಅಲ್ಲ. ಸ್ಯಾಂಡಲ್‌ವುಡ್‌ನ ಬಹುತೇಕ ಹಲವು ಸ್ಟಾರ್ ನಟರಿಗೂ ಡಿಸೈನರ್ ಆಗಿರುವ ಈ ವ್ಯಕ್ತಿಯ ಹೆಸರೇನು? ಇತ್ತೀಚೆಗೆ ಯಾವ ನಟನಿಗೆ ಡಿಸೈನ್ ಮಾಡಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್‌ಬಾಸ್ ರಿಯಾಲಿಟಿ ಶೋನ ವೀಕೆಂಡ್‌ನಲ್ಲಿ ಡಿಫ್ರೆಂಟ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಸ್ಟೈಲಿಶ್ ಲುಕ್‌ನ ಹಿಂದಿನ ರೂವಾರಿಯ ಹೆಸರು ಭರತ್. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಈ ಫೇವರಿಟ್ ಡಿಸೈನರ್ ಕನ್ನಡ ಚಿತ್ರರಂಗದ ಹಲವರ ಅಚ್ಚು ಮೆಚ್ಚಿನ ಡಿಸೈನರ್. ಇತ್ತೀಚೆಗೆ ರಮೇಶ್ ಅರವಿಂದ್ ಫೋಟೋಶೂಟ್‌ಗೂ ಡಿಸೈನರ್ ಆಗಿದ್ದಾರೆ.

ಸ್ಯಾಂಡಲ್‌ವುಡ್ ತ್ಯಾಗರಾಜ ಅಂತಲೇ ಕರೆಸಿಕೊಳ್ಳುವ ಪ್ರತಿಭಾನ್ವಿತ ಕಲಾವಿದ ರಮೇಶ್ ಅರವಿಂದ್. ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಹಲವು ಪ್ರತಿಭೆಗಳನ್ನು ಸಜ್ಜನಿಕೆಯ ನಟ ರಮೇಶ್ ಅರವಿಂದ್. ಸ್ಯಾಂಡಲ್‌ವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಂತಲೇ ಕರೆಸಿಕೊಂಡಿರುವ ಈ ನಟ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.
ರಮೇಶ್ ಅರವಿಂದ್ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಡಿಫ್ರೆಂಟ್ ಲುಕ್‌ನಲ್ಲಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಶೂಟ್‌ಗೆ ಡಿಸೈನ್ ಮಾಡಿದ್ದು ಇದೇ ಭರತ್. ಈ ಕಾಸ್ಟ್ಯೂನ್‌ನಲ್ಲಿ ರಮೇಶ್ ಅರವಿಂದ್ ಮತ್ತಷ್ಟು ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











