BBK 11: ಮುಗ್ಧ ಮನಸ್ಸಿನ ಬಿಗ್‌ಬಾಸ್ ಸ್ಪರ್ಧಿ ಧರ್ಮ ಕೀರ್ತಿರಾಜ್ ಮದುವೆ ಕೊನೆ ಕ್ಷಣದಲ್ಲಿ ಮುರಿದು ಬಿದ್ದಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಬಗ್ಗೆ ಊಹೆ ಮಾಡುವುದಕ್ಕೆ ಕಷ್ಟ. ಒಬ್ಬೊಬ್ಬರದ್ದು ಒಂದೊಂದು ಹಿನ್ನೆಲೆಯಿದೆ. ಕೆಲವರು ಮಾತಿನಲ್ಲಿ ಜೋರು. ಮತ್ತೆ ಕೆಲಸವರು ಸಾಫ್ಟ್. ಒಂದೊಂದು ಟಾಸ್ಕ್‌ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ನಡೆದುಕೊಂಡಿದ್ದು ಇದೆ. ಅದೇ ರೀತಿ ಸ್ಯಾಂಡಲ್‌ವುಡ್‌ನ ಚಾಕಲೇಟ್ ಬಾಯ್ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಯಲ್ಲಿ ಮುಗ್ಧ ಅಂತಲೇ ಜನಪ್ರಿಯರಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ದರ್ಶನ್ ನಟಿಸಿದ 'ನವಗ್ರಹ' ಸಿನಿಮಾದ ಮೂಲಕ ಧರ್ಮ ಕೀರ್ತಿರಾಜ್ ಸ್ಯಾಂಡಲ್‌ವುಡ್‌ನಲ್ಲಿ ಚಾಕೊಲೇಟ್ ಬಾಯ್ ಅಂತಲೇ ಗುರುತಿಸಿಕೊಂಡಿದ್ದಾರೆ. ಈಗ ಬಿಗ್‌ಬಾಸ್ ಮೂಲಕ ಮತ್ತೆ ಸಿನಿಪ್ರಿಯರಿಗೆ ಹತ್ತಿರ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿಯೇ ಇದ್ದ ಧರ್ಮ ಈ ಬಾರಿ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮನೆಯೊಳಗೆ ಇದ್ದಾಗ ಸ್ಪರ್ಧಿಗಳಾಗಿದ್ದ ಅನುಷಾ ರೈ ಹಾಗೂ ಐಶ್ವರ್ಯಾ ಸಿಂಧೋಗಿ ಅವರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದ್ದೇ ಹೆಚ್ಚು. ಆದರೆ, ಧರ್ಮ ಕೀರ್ತಿರಾಜ್ ಈ ಹಿಂದೆನೇ ಮದುವೆ ಫಿಕ್ಸ್ ಆಗಿತ್ತು. ಆದರೆ, ಅದು ಮುರಿದು ಬಿದ್ದಿತ್ತು. ಬಿಗ್ ಬಾಸ್‌ನಿಂದ ಹೊರ ಬಂದ ಬಳಿಕ ಆ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಈ ಬಾರಿ ಬಿಗ್ ಬಾಸ್ ಕಪ್ ಗೆಲ್ಲುವವರಲ್ಲಿ ಧರ್ಮ ಕೀರ್ತಿರಾಜ್ ಕೂಡ ಇದ್ದರು. ಧರ್ಮ ಈ ರಿಯಾಲಿಟಿ ಶೋಗೆ ಬಂದಿರುವ ಸ್ಪರ್ಧಿಗಳಿಗೆ ಪೈಪೋಟಿ ಕೊಡಬಹುದು ಎಂದುಕೊಂಡಿದ್ದರು. ಆದರೆ, ಮನೆಯೊಳಗೆ ಮುಗ್ಧರಾಗಿದ್ದ ಧರ್ಮ ಕೀರ್ತಿರಾಜ್ ಕೇವಲ 55 ದಿನಗಳ ಒಳಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯಿತು. ಬಿಗ್‌ಬಾಸ್‌ನಿಂದ ಔಟ್ ಆಗುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಹೀಗೆ ನೀಡಿದ ಸಂದರ್ಶನವೊಂದರಲ್ಲಿ ಮದುವೆ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ. ತಮ್ಮ ಮುಗ್ಧತೆಯಿಂದ ಧರ್ಮ ಕೀರ್ತಿರಾಜ್ ಕನ್ನಡಿಗರ ಮನಗೆದ್ದಿದ್ದರೂ, ಅವರೊಂದಿಗೆ ಅನುಷಾ ರೈ ಹಾಗೂ ಐಶ್ವರ್ಯಾ ಸಿಂಧೋಗಿ ಹೆಸರುಗಳು ತಗಲಾಕಿಕೊಂಡಿದ್ದವು. ಅದರಲ್ಲೂ ಅನುಷಾ ರೈ ಜೊತೆ ತಳುಕು ಹಾಕಿಕೊಂಡಿದ್ದೇ ಹೆಚ್ಚು. ಹೀಗಾಗಿ ಪ್ರತಿ ಸಂದರ್ಶನದಲ್ಲಿಯೂ ಅವರಿಗೆ ಮದುವೆ ಬಗ್ಗೆನೇ ಪ್ರಶ್ನೆಗಳು ಎದುರಾಗುತ್ತಿವೆ. ಈ ವೇಳೆ ಧರ್ಮ ತಮಗೆ ಈ ಹಿಂದೆ ಮದುವೆ ಫಿಕ್ಸ್ ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಧರ್ಮ ಕೀರ್ತಿರಾಜ್ ಇತ್ತೀಚೆಗೆ ಜೀ ಕನ್ನಡ ನ್ಯೂಸ್‌ಗೆ ನೀಡಿದ ಸಂದರ್ಶನದ ವೇಳೆ ತಮ್ಮ ಮದುವೆ ಈ ಹಿಂದೇನೆ ಆಗಬೇಕಿತ್ತು ಎಂದು ಹೇಳಿಕೊಂಡಿದ್ದಾರೆ. " ಎರಡು ಮೂರು ವರ್ಷಗಳ ಹಿಂದೇನೆ ನನಗೆ ಮದುವೆ ಆಗಬೇಕಿತ್ತು. ಅದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಮದುವೆ ತುಂಬಾನೇ ಹತ್ತಿರ ಬಂದು ಕೆಲವು ಕಾರಣಗಳಿಂದಾಗಿ ಅದು ನಡೆಯಲಿಲ್ಲ. ಕೊನೆ ಕ್ಷಣದಲ್ಲಿ ಮದುವೆ ನಡೆಯಲಿಲ್ಲ" ಎಂದು ಧರ್ಮ ಕೀರ್ತಿರಾಜ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ಅನುಷಾ ರೈ ಜೊತೆಗಿನ ಪ್ರೀತಿ ಬಗ್ಗೆನೂ ರಿವೀಲ್ ಮಾಡಿದ್ದಾರೆ. ಅವರೊಂದಿಗೆ ಹೆಚ್ಚು ಸಿನಿಮಾ ಮಾಡಿದ್ದರಿಂದ ಗೆಳೆತನ ಬೆಳೆದಿದೆ. ಪ್ರೀತಿ - ಪ್ರೇಮ ಅಂತೇನು ಇಲ್ಲ. ಎಲ್ಲರೂ ಮದುವೆ ಆಗಬೇಕು. ನಮಗಾಗಿ ಒಂದು ಹೆಗಲು ಅಂತ ಬೇಕು. ಮುಂದೆ ಮದುವೆ ಆಗುತ್ತೇನೆ. ಸದ್ಯಕ್ಕೆ ಮದುವೆ ಆಗುವ ಪ್ಲ್ಯಾನ್ ಏನೂ ಇಲ್ಲ. ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











