ವದಂತಿಗಳನ್ನ ನಂಬಬೇಡಿ: ದರ್ಶನ್ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ವೈದ್ಯರು

Recommended Video

ದರ್ಶನ್‌ಗೆ ಚಿಕಿತ್ಸೆ ಕೊಟ್ಟ ವೈದ್ಯರ ಮಾತುಗಳಿವು..! | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅವರ ಬಲಗೈ ಗೆ ಪೆಟ್ಟಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲವೆಂದು ತಿಳಿದು ಬಂದಿದೆ.

ಇನ್ನು ದರ್ಶನ್ ಅವರ ಜೊತೆಯಲ್ಲಿ ಹಿರಿಯ ನಟ ದೇವರಾಜ್, ಪ್ರಜ್ವಲ್ ದೇವರಾಜ್ ಅವರು ಇದ್ದರು. ಅವರಿಗೂ ಗಾಯಗಳಾಗಿದ್ದು, ಅವರು ಕೂಡ ಆರೋಗ್ಯವಾಗಿದ್ದಾರೆ ಎಂದು ದರ್ಶನ್ ಅವನ್ನ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ, ನಿರ್ಮಾಪಕ ಸಂದೇಶ್ ನಾಗರಾಜ್ ಮಾಹಿತಿ ನೀಡಿದ್ದರು.

ಇದೀಗ ದರ್ಶನ್ ಆರೋಗ್ಯದ ಬಗ್ಗೆ ಸ್ವತಃ ಆಸ್ಪತ್ರೆಯ ವೈದ್ಯರೇ ಸ್ಪಷ್ಟನೆ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ. ಹಾಗಿದ್ರೆ, ನಿಜಕ್ಕೂ ದರ್ಶನ್ ಗೆ ಏನಾಗಿದೆ.? ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನ ವೈದ್ಯರ ಮಾತಿನಲ್ಲೇ ಕೇಳಿ....ಮುಂದೆ ಓದಿ....

25 ಹೊಲಿಗೆ ಹಾಕಲಾಗಿದೆ

25 ಹೊಲಿಗೆ ಹಾಕಲಾಗಿದೆ

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಉಪೇಂದ್ರ ಶೆಣೈ ಅವರು, ''ದರ್ಶನ್ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು 25 ಹೊಲಿಗೆ ಹಾಕಲಾಗಿದೆ. ಅವರ ಮುಂಗೈ ಮುರಿದಿದೆ. ಅದಕ್ಕೆ ಪ್ಲೇಟ್ ಹಾಕಿದ್ದೇವೆ. ಸದ್ಯ ಆಸ್ಪತ್ರೆಯಲ್ಲಿಯೇ ಇರುತ್ತಾರೆ. ಸಾಧ್ಯವಾದರೇ ಇಂದು ವಾರ್ಡ್ ಗೆ ಶಿಫ್ಟ ಮಾಡಲಾಗುವುದು.

ಯಾವಾಗ ಡಿಸ್ಚಾರ್ಜ್.?

ಯಾವಾಗ ಡಿಸ್ಚಾರ್ಜ್.?

''24 ರಿಂದ 48 ಗಂಟೆಯವರೆಗೂ ಆಸ್ಪತ್ರೆಯಲ್ಲಿಯೇ ಪರಿಶೀಲನೆಯಲ್ಲಿ ಇರಿಸಲಾಗುತ್ತದೆ. ಇಬ್ಬರು ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ವಾರ್ಡ್ ಗೆ ಶಿಪ್ಟ್ ಮಾಡಲಾಗುವುದು ಎಂದರು. ನಟ ದರ್ಶನ್ ಗೆ ಡಾ. ಅಜಯ್ ಹೆಗ್ಡೆ, ಡಾ. ವಿಜಯ್ ವೈದ್ಯ, ಡಾ. ಉಪೇಂದ್ರ ಶೈಣೈ ಸರ್ಜರಿ ನಡೆಸಿದ್ದು 48 ಗಂಟೆಗಳ ಬಳಿಕ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

ದೇವರಾಜ್ ಆರೋಗ್ಯ ಹೇಗಿದೆ.?

ದೇವರಾಜ್ ಆರೋಗ್ಯ ಹೇಗಿದೆ.?

ನಟ ದೇವರಾಜ್ ಅವರ ಎಡಗೈ ಬೆರಳಿಗೆ ಪೆಟ್ಟಾಗಿದೆ. ಪ್ರಜ್ವಲ್ ದೇವರಾಜ್ ಗೆ ಎದೆ ಹಾಗೂ ತಲೆ ಭಾಗಕ್ಕೆ ಗಾಯವಾಗಿದೆ. ಕಾರು ಚಾಲಕನಿಗೆ ಕಾಲು, ಕೈಗೆ ಪೆಟ್ಟಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.

ಎಕ್ಸ ರೇ ಕಾಪಿ ಬಿಡುಗಡೆ

ಎಕ್ಸ ರೇ ಕಾಪಿ ಬಿಡುಗಡೆ

ಆಸ್ಪತ್ರೆಯಿಂದ ದರ್ಶನ್ ಎಕ್ಸರೇ ಮಾಡಿರುವ ಕಾಪಿಯನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ದರ್ಶನ್ ಅವರ ಬಲಗೈನಲ್ಲಿ ಎಲ್ಲಿ ಗಾಯವಾಗಿದೆ ಎಂದು ನಿಖರವಾದ ಮಾಹಿತಿ ನೀಡಿದ್ದಾರೆ.

More from Filmibeat

English summary
Kannada actor Darshan along with actors Devraj and Prajwal Devraj met with an accident near Mysuru. now doctors clarified about darshan health condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X