ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?

ಸ್ಯಾಂಡಲ್‌ವುಡ್‌ ನಟಿ ಇತ್ತೀಚೆಗೆ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತ್ತಿಲ್ಲ. ಕಳೆದ ಕೆಲವು ವರ್ಷ ಅವರು ಹೊಸ ವಿದ್ಯೆಯೊಂದನ್ನು ಕಲಿತಿದ್ದಾರೆ. ಅದನ್ನೇ ಈಗ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆ ವಿದ್ಯೆಗೆ 'ಶಮನಿಸಂ' ಎಂದು ಕರೆಯುತ್ತಾರೆ. ಇದು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆ. ಇದರೊಂದಿಗೆ ಕನಸುಗಳನ್ನು ಟ್ರ್ಯಾಕ್ ಮಾಡುತ್ತಾರೆ.

ಇಷ್ಟು ದಿನ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ನೀತು, ಇದ್ದಕ್ಕಿದ್ದಂತೆ 'ಶಮನಿಸಂ' ಕಲಿಯುವುದಕ್ಕೆ ಮುಂದಾಗಿದ್ದೇಕೆ? ಕನಸುಗಳನ್ನು ಬೆನ್ನತ್ತಿ ಹೊರಟಿದ್ದು ಹೇಗೆ? ಅವರು ಆತ್ಮಗಳ ಜೊತೆ ಮಾತಾಡುತ್ತಾರಾ? ಬೀಳುವ ಕನಸುಗನ್ನು ಬೆನ್ನತ್ತಿ ಹೋಗುತ್ತಾರಾ? ಅದರಿಂದ ಏನು ಗೊತ್ತಾಗುತ್ತೆ ಈ ಎಲ್ಲಾ ವಿಷಯವನ್ನು ಆರ್‌ಜೆ ರಾಜೇಶ್ ಅವರ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ನೀತು ರಿವೀಲ್ ಮಾಡಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.

Does Kannada actress Neethu speak to spirits and crake dreams

"ಡ್ರೀಮ್ ಟ್ರ್ಯಾಕಿಂಗ್ ಅಂತಲ್ಲ. ನಾನು ಶಮನಿಸಂ ಕೋರ್ಸ್ ಮಾಡಿದ್ದೇನೆ. ಅದರಲ್ಲಿ ಡ್ರೀಮ್ ಟ್ರ್ಯಾಕಿಂಗ್ ಅನ್ನೋದು ಒಂದು ಭಾಗ. ಶಮನಿಸಂ ಅಂದರೆ, ಸಿನಿಮಾದಲ್ಲಿರೋ ತರ ಓಜಾ ಬಾಕ್ಸ್ ಇಟ್ಟುಕೊಂಡು ಆತ್ಮಗಳನ್ನು ಕರೆಯೋದೆಲ್ಲ ಅಲ್ಲ. ನಾನು ಈ ಕೋರ್ಸ್ ಅನ್ನು ಬೇಕು ಅಂತ ಮಾಡಿದ್ದೇ ಅಲ್ಲ. ನಾನು ಇದನ್ನೂ ಪ್ರೊಫೆಷನ್ ಆಗಿ ತೆಗೆದುಕೊಳ್ಳುತ್ತೇನೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ." ಎಂದು ನೀತು ಆರ್‌ಜೆ ರಾಜೇಶ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

ನೀತುಗೆ ಅವರ ತಂದೆ ತೀರಿಕೊಂಡ ಬಳಿಕ ಕೆಲವು ಸಮಸ್ಯೆಗಳು ಎದುರಾಗಿದ್ದವು. ಅವರು ಮಲಗುವುದಕ್ಕೆ ಹೊರಟಾಗ ಕಣ್ಣು ಮುಚ್ಚಿದ ಕೂಡಲೇ ಏನೋ ಕಪ್ಪಗೆ ಇರುವಂತಹದ್ದು ಹತ್ತಿರ ಬರುತ್ತಿದೆ ಅನಿಸುತ್ತಿತ್ತು. ದಿಢೀರನೇ ಎದ್ದು ಬಿಡೋರು. ಆದರೆ, ಅದು ಕನಸು ಅಲ್ಲ ರಿಯಲ್ ಅಂತ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಯಾಕೆ ಅಂತ ನೋಡಿದಾಗ ಅವರ ತಂದೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಅಂತ ಒಬ್ಬರು ಹೇಳಿದ್ದರು. ಬಳಿಕ ಗುರುವಾಯೂರು ದೇವಸ್ಥಾನಕ್ಕೆ ಹೋಗು ಅಂತ ಹೇಳಿದ್ದರು. ಅಲ್ಲಿಗೆ ಹೋಗಿ ತಂದೆಗೆ ಮುಕ್ತಿ ಕೊಡುವಂತೆ ಬೇಡಿಕೊಂಡಿದ್ದರು. ಅಲ್ಲಿಂದ ಮತ್ತೆ ನೀತುಗೆ ಆ ಸಮಸ್ಯೆ ಬರಲಿಲ್ಲ.

"ಅಲ್ಲಿಗೆ ಹೋದಮೇಲೆ ನನಗೆ ಯಾವತ್ತೂ ಈ ಅನುಭವ ಆಗಲಿಲ್ಲ. ಆದರೆ, ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ. ಇದು ಕನಸು ಮತ್ತು ರಿಯಾಲಿಟಿ ಮಧ್ಯೆ ಆಗೋದು. ನನಗೆ ಮಲಗುವುದಕ್ಕೆ ಹಿಂಜರಿಕೆ ಆಗುವುದಕ್ಕೆ ಶುರುವಾಗಿತ್ತು" ಎಂದು ನೀತು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Does Kannada actress Neethu speak to spirits and crake dreams

ಹೀಗಾಗಿ ಕನಸುಗಳನ್ನು ಟ್ರ್ಯಾಕ್ ಮಾಡುವುದನ್ನು ಕಲಿಯಬೇಕು ಅಂತ ನಿರ್ಧಾರ ಮಾಡಿದ್ದರು. ಆಗ ಅಹಮದಾಬಾದ್‌ನಲ್ಲಿ ದಂಪತಿಯೊಬ್ಬರು ಇದನ್ನು ಕಲಿಸುತ್ತಾರೆ ಅನ್ನೋದು ಗೊತ್ತಾಗಿ, ಅವರೊಂದಿಗೆ ನೀತೂ ಸಂಪರ್ಕದಲ್ಲಿದ್ದರು. ಅಲ್ಲಿಂದ 'ಶಾಮನಿಸಂ' ಅನ್ನೋದನ್ನು ಕಲಿಯಲು ಮುಂದಾದರು.

"ನಾನು ಯಾವುದೋ ಮೂಡನಂಬಿಕೆಗೆ, ಭಯಕ್ಕೆ ಬಗ್ಗೋದಿಲ್ಲ. ಆದರೂ ನನಗೂ ಭಯವಿದೆ. ಆದರೆ, ನಾನು ನಂಬಿದ್ದನ್ನು ಮೂಡನಂಬಿಕೆ ಅಂದರೆ, ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸೈನ್ಸ್‌ಗೆ ಅದರದ್ದೇ ಆದ ಜಾಗವಿದೆ. ಹಾಗೇ ಆತ್ಮಗಳ ವಿಜ್ಞಾನಕ್ಕೆ ಅದರದ್ದೇ ಜಾಗವಿದೆ." ಎಂದು ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ತನ್ನ ಮೊದಲ ಕೇಸ್ ಬಗ್ಗೆನೂ ಮಾತಾಡಿದ್ದಾರೆ. "ಒಂದು ಚಾಲೆಂಜಿಂಗ್ ಕೇಸ್ ಇತ್ತು. ಒಬ್ಬರು ಕೋಮಾದಲ್ಲಿ ಇದ್ದರು. ಆಗ ನಾನು ಇನ್ನೂ ಬಿಗಿನಿಂಗ್‌ನಲ್ಲಿದ್ದೆ. ಈ ಕೆಲಸ ಮಾಡುವಾಗ ಎಕ್ಸ್‌ಪೀರಿಯನ್ಸ್ ಕೂಡ ಬೇಕಾಗುತ್ತೆ. ಧೈರ್ಯವನ್ನೂ ಇಟ್ಟುಕೊಳ್ಳಬೇಕಾಗುತ್ತೆ. ಗಂಡ ಕೋಮಾದಲ್ಲಿದ್ದರು. ವೆಂಟಿಲೇಟರ್ ತೆಗೀಬೇಕು ಅಂತಿದ್ರು. ಆ ಸಮಯದಲ್ಲಿ ಆತ್ಮ ಬಿಡುವುದಕ್ಕೂ ರೆಡಿಯಿರಲಿಲ್ಲ. ಹಾಗಂತ ಇರುವುದಕ್ಕೂ ರೆಡಿಯಿರಲಿಲ್ಲ. ನನಗೆ ಏನೋ ಒಂದು ವಿಷನ್ ಕಾಣಿಸಿತು. ಆಗ ನನಗೆ ಭಯ ಬಂತು." ಎಂದು ಒಂದು ಘಟನೆಯನ್ನು ವಿವರಿಸಿದ್ದಾರೆ.

More from Filmibeat

English summary
Kannada actress Neethu learned Shamanism:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X