'ನಾನು ಮತ್ತು ಗುಂಡ 2' ಡಬ್ಬಿಂಗ್‌ಗೆ ಇಳಿದ ಸಿಂಬ; ಡಾಗ್ ಪ್ರೇಮಿಗಳಿಗೆ ಬರ್ತಿದೆ ಮತ್ತೊಂದು ಸಿನಿಮಾ

ಶ್ವಾನಗಳನ್ನು ಇಟ್ಟುಕೊಂಡು ಸಿನಿಮಾ ಮಾಡೋದು ತುಂಬಾ ಕಷ್ಟ. ಆದರೆ, ಪ್ರಪಂಚದ ಯಾವುದೇ ಮೂಲೆ ಮೂಲೆಗೆ ಹೋಗದರೂ ಶ್ವಾನ ಪ್ರಿಯರು ಇದ್ದೇ ಇರುತ್ತಾರೆ. ಅವರಿಗೆ ಇಂತಹ ಸಿನಿಮಾ ಇಷ್ಟ ಆಗುತ್ತವೆ. ಕನ್ನಡದಲ್ಲಿ ನಾಯಿಯನ್ನು ಪ್ರಮುಖ ಪಾತ್ರದಲ್ಲಿ ಇಟ್ಟುಕೊಂಡು ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಅದುವೇ 'ನಾನು ಮತ್ತು ಗುಂಡ 2'.

ಈಗಾಗಲೇ 'ನಾನು ಮತ್ತು ಗುಂಡ' ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ಸೀಕ್ವೇಲ್ 'ನಾನು ಮತ್ತು ಗುಂಡ -‌2'. ಎರಡನೇ ಸರಣಿಯಲ್ಲಿ ಸಿನಿಮಾ ತಾರಾ ಬಳಗ ಬದಲಾಗಿದ್ದಾರೆ. ಶಿವು ಕೆ ಆರ್ ಪೇಟೆ ಜಾಗದಲ್ಲಿ ನಾಯಕನಾಗಿ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ವಿಶೇಷ ಪಾತ್ರದಲ್ಲಿ ಶ್ವಾನ ಸಿಂಬ ಕೂಡ ಪ್ರಮುಖ‌ ಪಾತ್ರದಲ್ಲಿ ನಟಿಸಿದೆ. ಶ್ವಾನ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.

Dog Simba dubbing for Naanu Mattu Gunda 2 movie which Rakesh Adiga in Main roles

ಈಗಾಗಲೇ ಶ್ವಾನವನ್ನು ಮುಂದಿಟ್ಟುಕೊಂಡು ಹಲವು ಸಿನಿಮಾಗಳು ಬಂದಿದೆ. ಕನ್ನಡದಲ್ಲಿಯೇ ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಟಿಸಿದ 'ಚಾರ್ಲಿ 777' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ 'ನಾನು ಮತ್ತು ಗುಂಡ' ಸಿನಿಮಾ ಕೂಡ ರಿಲೀಸ್ ಆಗಿತ್ತು. ಎರಡೂ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಇದೇ ಸಿನಿಮಾದ ಸೀಕ್ವೆಲ್ 'ನಾನು ಮತ್ತು ಗುಂಡ 2' ಬಿಡುಗಡೆ ರೆಡಿಯಾಗಿದೆ.

'ನಾನು ಮತ್ತು ಗುಂಡ 2' ಸಿನಿಮಾಗೆ ನಿರ್ದೇಶಕ ರಘು ಹಾಸನ್ ಆಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ನಡೆಯುತ್ತಿದೆ. ಕಲಾವಿದರು ಬಂದು ತಮ್ಮ ಪಾತ್ರಗಳಿಗೆ ಡಬ್ ಮಾಡುವುದು ಬೇರೆ ಮಾತು. ಅದೇ ಈ ಸಿನಿಮಾದಲ್ಲಿ ನಟಿಸಿರುವ ಶ್ವಾನ ಕೂಡ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದೆ.

ಇಡೀ ಸಿನಿಮಾದಲ್ಲಿ ಸಾಕಷ್ಟು ಎಮೋಷನ್ಸ್ ಸೀನ್‌ಗಳು ಇವೆ. ಈ ಸಿನಿಮಾಗೆ ಡಾಗ್ ವಿಶೇಷವಾಗಿ ಸಿಂಬಾ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ. ಇಡೀ ಸಿನಿಮಾದಲ್ಲಿ ಸಿಂಬಾನ ಒರಿಜಿನಲ್ ಸೌಂಡ್ ಕಾಣಿಸಿಕೊಳ್ಳಲಿವೆ. ಕೇವಲ ಬೊಗಳುವ ದೃಶ್ಯವನ್ನು ಡಬ್ಬಿಂಗ್ ಮಾಡುವುದಕ್ಕೆ ಯಾಕೀ ಸಾಹಸ ಅನ್ನೋ ಮಾತು ಕೇಳಿ ಬರುತ್ತದೆ. ಡಬ್ಬಿಂಗ್ ಅಂದ್ರೆ ಕೇವಲ ಮಾತಲ್ಲ. ಎಲ್ಲೆಲ್ಲಾ ಶ್ವಾನ ಬೊಗಳಬೇಕೋ ಆ ಎಲ್ಲಾ ಜಾಗದಲ್ಲಿ ಸಿಂಬಾನಿಂದಲೇ ಧ್ವನಿಯನ್ನು ರೆಕಾರ್ಡ್ ಮಾಡಲಾಗಿದೆ.

Dog Simba dubbing for Naanu Mattu Gunda 2 movie which Rakesh Adiga in Main roles

"ಸಿಂಬಾನ ಒರಿಜಿನಲ್ ಸೌಂಡ್‌ ಅನ್ನು ನಾವು ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ಸೀನ್‌ಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಡಾಗ್ ಕೈಲಿ ಡಬ್ಬಿಂಗ್ ಮಾಡಿಸುತ್ತಿರುವುದು ನಾವೇ ಮೊದಲೆನ್ನಬಹುದು. ಹಿಂದಿನ ಪಾರ್ಟ್ ಒನ್ ಚಿತ್ರದಲ್ಲೂ ಡಾಗ್‌ನಿಂದಲೇ ಡಬ್ಬಿಂಗ್ ಮಾಡಿಸಿದ್ದೇವೆ. ಆದರೆ, ಅದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಆಗಿತ್ತು. ಪಾರ್ಟ್-2ನ ಇಡೀ ಸಿನಿಮಾದಲ್ಲಿ ಡಾಗ್ ಸಿಂಬಾನೇ ಡಬ್ ಮಾಡುತ್ತಿದೆ." ಎನ್ನುತ್ತಾರೆ ನಿರ್ದೇಶಕರು.

'ನಾನು ಮತ್ತು ಗುಂಡ 2' ಸಿನಿಮಾಗಾಗಿ ಶ್ವಾನದಿಂದ ಡಬ್ಬಿಂಗ್ ಮಾಡಿಸಲಾಗುತ್ತಿದೆ. ದೇಶಾದ್ಯಂತ ಇಂತಹ ಪ್ರಯತ್ನಕ್ಕೆ ಯಾರೂ ಮುಂದಾಗಿಲ್ಲ ಎನ್ನುತ್ತಾರೆ ನಿರ್ದೇಶಕ ರಘು ಹಾಸನ್. ಸದ್ಯ ಡಬ್ಬಿಂಗ್ ಹಂತದಲ್ಲಿದ್ದು, ಡಿಐ ಹಾಘೂ ಆರ್‌ಆರ್ ಕೆಲಸ ಆಗಬೇಕಿದೆ. ವಿಶೇಷ ಅಂದರೆ ಬಹಳ ದಿನಗಳ ಬಳಿಕ ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದಾರೆ. ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದೆ.

More from Filmibeat

English summary
Dog Simba dubbing for Naanu Mattu Gunda 2 movie which Rakesh Adiga in Main roles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X