ಶಾಕಿಂಗ್! ಮೈತುಂಬ ಸೀರೆ ಹೊದ್ದ 'ಡರ್ಟಿ' ಮಲ್ಲಿಕಾ!

By Prasad

Don't get shocked : Mallika Sherawat in Saree
'ಡರ್ಟಿ' ಎಂಬ ಶಬ್ದ ಕೇಳಿದ ಕೂಡಲೆ ಚಿತ್ರದಲ್ಲಿ ಸಖತ್ ರೋಚಕ ದೃಶ್ಯಗಳಿರಬಹುದು ಎಂದು ಸಿನಿರಸಿಕರು ಊಹಿಸತೊಡಗುತ್ತಾರೆ. ಇನ್ನು ಡರ್ಟಿ ಎಂಬ ಆ ಪದದ ಜೊತೆ ಮಾದಕ ನಟಿ ಮಲ್ಲಿಕಾ ಶೇರಾವತ್ ಹೆಸರು ತಳಕುಹಾಕಿಕೊಂಡರೆ ಕೇಳಬೇಕೆ? ತಡಕಳ್ಳಿ ಸಾ ತಡಕಳ್ಳಿ...

'ಡರ್ಟಿ ಪಾಲಿಟಿಕ್ಸ್' ಚಿತ್ರದಲ್ಲಿ ಹೊಲಸು ರಾಜಕೀಯದ ಸುಳಿಯಲ್ಲಿ ಸಿಲುಕಿ ಹತ್ಯೆಗೀಡಾದ ಮಹಿಳೆಯ ಪಾತ್ರದಲ್ಲಿ ಮಲ್ಲಿಕಾ ಶೇರಾವತ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೈತುಂಬ ಸೀರೆಯುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಲ್ಲಿಕಾ, ಇದಕ್ಕೆ ಪುರಾವೆಯಾಗಿ ಚಿತ್ರದ ಸ್ಟಿಲ್ ವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯ ಮುಖಾಂತರ ಒನ್ಇಂಡಿಯಾ ಟ್ವಿಟ್ಟರ್ ಖಾತೆಗೆ ಕಳಿಸಿದ್ದಾರೆ.

"ಡರ್ಟಿ ಪಾಲಿಟಿಕ್ಸ್‌ನಲ್ಲಿ ನನ್ನ ಫೆವರಿಟ್ ಸೀರೆ" ಎಂದು ಟ್ವೀಟ್ ಮಡಿದ್ದು, ಖ್ಯಾತ ಬಾಲಿವುಡ್ ನಟ ಓಂ ಪುರಿ ಜೊತೆ, ಮತಯಾಚಿಸುವ ಥೇಟ್ ರಾಜಕಾರಣಿಯಂತೆ ತಲೆಮೇಲೆ ಸೀರೆ ಹೊದ್ದು ಕೈಮುಗಿದು ನಿಂತಿದ್ದಾರೆ. ಈ ಚಿತ್ರ ನೋಡಿದ ಮಲ್ಲಿಕಾ ಶೇರಾವತ್ ಚಿತ್ರಪ್ರೇಮಿಗಳಿಗೆ ನಿರಾಶೆಯಾಗುವುದು ಖಂಡಿತ.

ಮೊತ್ತಮೊದಲ ಚಿತ್ರ ಮರ್ಡರ್‌ನಲ್ಲಿ ಇನ್ನು ಮಾಡುವುದಕ್ಕೆ ಏನೂ ಇಲ್ಲದಂತೆ ನಟಿಸಿದ ಮಲ್ಲಿಕಾ ಶೇರಾವತ್ ಮುಂದೆ ಐಟಂ ಸಾಂಗ್‌ಗಳಿಗೆ, ವರ್ಷಾಂತ್ಯದ ಪಾರ್ಟಿಗಳಲ್ಲಿ ಬಿಂದಾಸ್ ಆಗಿ ಕುಣಿಯಲು ಮಾತ್ರ ಲಾಯಕ್ಕು ಎಂಬ ಮಟ್ಟಿಗೆ ಇಳಿದುಬಿಟ್ಟರು. ಭಾರತೀಯ ಚಿತ್ರಗಳು ನನ್ನ ಲೇವೆಲ್ಲಿಗೆ ಅಲ್ಲ ಅಂದ ಮಲ್ಲಿಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೈದೋರುವಂತೆ ಬಟ್ಟೆ ಧರಿಸಿಕೊಂಡು ಕಂಡಕಂಡವರ ಜೊತೆ ಕಾಣಿಸಿಕೊಂಡರು.

ಮರ್ಡರ್ ನಂತರ ಕೆಲ ಬೆರಳೆಣಿಕೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರಾದರೂ ಉತ್ತಮ ನಟಿಯಾಗಿ ಅವರನ್ನು ಯಾರೂ ಪರಿಗಣಿಸಿಯೇ ಇಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ 'ಡರ್ಟಿ ಪಾಲಿಟಿಕ್ಸ್' ಚಿತ್ರದಲ್ಲಿ ಅಭಿನಯಕ್ಕೆ ಅವಕಾಶವಿರುವಂಥ ಪಾತ್ರ ದೊರೆತಿದೆ. ಕೆಟ್ಟ ರಾಜಕೀಯ ದಾಳವಾಗಿ ಬಳಕೆಯಾಗಿ, ಹಣದ ಹಿಂದೆ ಬಿದ್ದು ಮರ್ಡರ್ ಆಗುವ ರಾಜಸ್ತಾನದ ಭನವಾರಿ ದೇವಿ ಪಾತ್ರದಲ್ಲಿ ಮಲ್ಲಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡನೊಂದಿಗೆ 'ಆತ್ಮೀಯ'ವಾಗಿ ಕಳೆದ ಅಶ್ಲೀಲ ಸಿಡಿ ಬಹಿರಂಗವಾಗಿ, ಅದನ್ನೇ ಬಳಸಿಕೊಂಡು ಮುಖಂಡನನ್ನು ಬ್ಲಾಕ್ ಮೇಲ್ ಮಾಡಲು ಹೋಗಿ ಭನವಾರಿ ದೇವಿ ಕೊಲೆಯಾಗುತ್ತಾಳೆ. ಈಗ ಇದೇ ವಿಷಯ ಭಾರೀ ವಿವಾದಕ್ಕೆ ಗುರಿಯಾಗಿದೆ. ಮಲ್ಲಿಕಾ ಶೇರಾವತ್ ಮತ್ತು ಚಿತ್ರದ ನಿರ್ದೇಶಕ, ಖ್ಯಾತ ನಿರ್ಮಾಪಕ ಕೆಸಿ ಬೋಕಾಡಿಯಾ ಅವರಿಗೆ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆಯಂತೆ.

ಆದರೆ, ಇಂಥ ಕೊಲೆ ಬೆದರಿಕೆ ಕರೆಗಳಿಗೆ ತಲೆಕೆಡಿಸಿಕೊಳ್ಳದ ಮಲ್ಲಿಕಾ ಶೇರಾವತ್ ಚಿತ್ರದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ. ಮೈತುಂಬ ಸೀರೆಹೊದ್ದಿರುವ ಈ ಚಿತ್ರ ನನಗೆ ತುಂಬಾ ಇಷ್ಟ ಎಂದೂ ಟ್ವೀಟ್ ಮಾಡಿದ್ದಾರೆ. ಅವರಿಗೆ ಶುಭವಾಗಲಿ, ಮುಂದೆಯೂ ಇಂಥದೇ ಸತ್ವಯುತ ಪಾತ್ರಗಳಲ್ಲಿ ಮಲ್ಲಿಕಾ ಶೇರಾವತ್ ಕಾಣಿಸಿಕೊಳ್ಳಲಿ, ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆ ಊರಲಿ ಎಂದು ಹಾರೈಸೋಣ.

More from Filmibeat

English summary
Bollywood actress Mallika Sherawat has released a still from her latest movie Dirty Politics in her twitter account. Saree clad Mallika is playing the role of Bhanwari Devi who was brutally murdered in Rajasthan. Let's wish her all the best.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X