twitter
    For Quick Alerts
    ALLOW NOTIFICATIONS  
    For Daily Alerts

    ವೀರಪ್ಪನ್ ನಿಂದ ಕಿಡ್ನಾಪ್ ಆದ ಜಾಗದಲ್ಲೇ ಉದಯವಾಯಿತು 'ಡಾ.ರಾಜಕುಮಾರ್ ನಗರ'

    |

    ಕರ್ನಾಟಕದ ಹಲವು ನಗರಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಮುತ್ತುರಾಜ್ ರಸ್ತೆ ಇರುವುದು ಗೊತ್ತಿರುವ ವಿಚಾರ. ಆದರೆ, ಬೇರೆ ರಾಜ್ಯದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ನಮ್ಮ ಅಣ್ಣಾವ್ರ ಹೆಸರಿನಲ್ಲೊಂದು ರಸ್ತೆಯಲ್ಲ, ಊರೇ ಇದೆ.

    ಜುಲೈ 31ರಂದು ಬೆಳಗ್ಗೆನೇ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ವರದಿಗಳು ಬರಲಾರಂಭಿಸಿದ್ದವು. ಅದರ ಹಿಂದಿನ ದಿನ, ಜುಲೈ 30, 2000 ಭೀಮನ ಅಮಾವಾಸ್ಯೆಯ ಕಡುಕತ್ತಲು. ದಂತಚೋರ, ನರಹಂತಕ ವೀರಪ್ಪನ್, ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದ.

    ಸೂಪರ್ ಸ್ಟಾರ್ ರಜನಿಕಾಂತ್ ಮುಡಿಗೆ 'ಗೋಲ್ಡನ್ ಜುಬಿಲಿ ಅವಾರ್ಡ್' ಗರಿಸೂಪರ್ ಸ್ಟಾರ್ ರಜನಿಕಾಂತ್ ಮುಡಿಗೆ 'ಗೋಲ್ಡನ್ ಜುಬಿಲಿ ಅವಾರ್ಡ್' ಗರಿ

    ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು, ಕರ್ನಾಟಕ - ತಮಿಳುನಾಡು ಗಡಿ, ಗಾಜನೂರಿನ ತಮ್ಮ ಫಾರಂಹೌಸ್ ನಲ್ಲಿ, ಪತ್ನಿ ಮತ್ತು ಆಪ್ತರ ಜೊತೆ ರಾಜ್ ತಂಗಿದ್ದರು. ರಾತ್ರಿ ಊಟ ಮುಗಿಸಿಕೊಂಡು ಕೂತಿದ್ದಾಗ, ವೀರಪ್ಪನ್ ನೇತೃತ್ವದ ಹದಿನೈದು ಜನರ ತಂಡ, ರಾಜ್ ಮತ್ತು ಗೋವಿಂದರಾಜ್, ನಾಗೇಶ್ ಮತ್ತು ನಾಗಪ್ಪ ಅವರನ್ನೂ ಕಿಡ್ನಾಪ್ ಮಾಡಿತು.

    ರಾಜ್ ಪತ್ನಿ ಪಾರ್ವತಮ್ಮ ಬಳಿ ಒಂದು ಕ್ಯಾಸೆಟ್ ಅನ್ನು ನೀಡಿ, ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ತಲುಪಿಸುವಂತೆ ಸೂಚಿಸಿ, ವೀರಪ್ಪನ್ ಎಲ್ಲರನ್ನೂ ಕರೆದುಕೊಂಡು ಹೋಗಿದ್ದ. ಮಧ್ಯರಾತ್ರಿ 1.30ರ ಸುಮಾರಿಗೆ ಬೆಂಗಳೂರಿಗೆ ದೌಡಾಯಿಸಿದ ಪಾರ್ವತಮ್ಮ, ಸಿಎಂ ಅವರನ್ನು ಭೇಟಿಯಾದರು. ರಾಜ್ ಹೆಸರಿನಲ್ಲೊಂದು ನಗರ..

    ರಾಜ್ ಕಿಡ್ನಾಪ್ ಘಟನೆ

    ರಾಜ್ ಕಿಡ್ನಾಪ್ ಘಟನೆ

    ಮೊದಲೇ, ಕರ್ನಾಟಕ ಮತ್ತು ತಮಿಳುನಾಡು ನಡುವೆ ತೀರಾ ಹದೆಗೆಟ್ಟ ಪರಿಸ್ಥಿತಿಯ ಕಾಲವದು. ರಾಜ್ ಕಿಡ್ನಾಪ್ ಘಟನೆ, ಎರಡು ರಾಜ್ಯಗಳ ನಡುವಿನ ಸಂಬಂಧಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸವನ್ನು ಮಾಡಿತು. ಕೆಲವು ದಿನಗಳ ಕಾಲ, ಎರಡು ರಾಜ್ಯಗಳ ನಡುವೆ ಬಸ್ ಸಂಚಾರವೂ ಸ್ಥಗಿತಗೊಂಡಿತ್ತು.

    ಸಿಎಂ ಕರುಣಾನಿಧಿ

    ಸಿಎಂ ಕರುಣಾನಿಧಿ

    ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಂದಿನ ಸಿಎಂ, ಚೆನ್ನೈಗೆ ಹೋಗಿ, ಅಲ್ಲಿನ ಸಿಎಂ ಕರುಣಾನಿಧಿಯವರನ್ನು ಭೇಟಿಯಾದರು. ನಕ್ಕೀರನ್ ಪತ್ರಿಕೆಯ ಸಂಪಾದಕರಾಗಿದ್ದ ಆರ್.ಆರ್.ಗೋಪಾಲ್ ಅವರನ್ನು ಎರಡು ರಾಜ್ಯಗಳ ಪ್ರತಿನಿಧಿಯಾಗಿ ವೀರಪ್ಪನ್ ಅವರನ್ನು ಭೇಟಿಯಾದರು. 108 ದಿನಗಳ ನಂತರ, ಅಣ್ಣಾವ್ರನ್ನು ವೀರಪ್ಪನ್ ಬಿಡುಗಡೆ ಮಾಡಿದ. ಎಲ್ಲಿಂದ ಕಿಡ್ನಾಪ್ ಆದರೋ, ಅದೇ ತಾಲೂಕಿನ ಊರಿಗೆ ರಾಜ್ ಹೆಸರಿಡಲಾಯಿತು.

     ರಾಜ್ ಹುಟ್ಟಿದ ಊರು ಕೂಡಾ

    ರಾಜ್ ಹುಟ್ಟಿದ ಊರು ಕೂಡಾ

    ಡಾ.ರಾಜ್ ಕಿಡ್ನಾಪ್ ಆಗಿದ್ದದು ಗಾಜನೂರು ಎನ್ನುವಲ್ಲಿ. ಇದು, ರಾಜ್ ಹುಟ್ಟಿದ ಊರು ಕೂಡಾ. ಜೊತೆಗೆ, ಈ ಊರು, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತದ್ದು. ಗಾಜನೂರಿನ ತಾಲೂಕು ಕೇಂದ್ರ ತಲವಾಡಿ. ಇದು ಮೈಸೂರಿನಿಂದ ಸುಮಾರು ಎಂಬತ್ತು ಕಿಲೋಮೀಟರ್ ದೂರದಲ್ಲಿದೆ.

    ತಮಿಳುನಾಡಿನಲ್ಲಿ ಎಲ್ಲಿಂದ ಕಿಡ್ನಾಪ್ ಆದ್ರೋ, ಅಲ್ಲೊಂದು 'ಡಾ.ರಾಜಕುಮಾರ್ ನಗರ'

    ತಮಿಳುನಾಡಿನಲ್ಲಿ ಎಲ್ಲಿಂದ ಕಿಡ್ನಾಪ್ ಆದ್ರೋ, ಅಲ್ಲೊಂದು 'ಡಾ.ರಾಜಕುಮಾರ್ ನಗರ'

    ಈ ಊರಿನ ಒಂದು ಪ್ರದೇಶಕ್ಕೆ 'ಡಾ.ರಾಜಕುಮಾರ್ ನಗರ' ಎಂದು ಜಿಲ್ಲಾಡಳಿತ ಹೆಸರಿಟ್ಟಿದೆ. ಸತ್ಯಮಂಗಲಂ ದಟ್ಟಾರಣ್ಯಕ್ಕೆ ಸಮೀಪವಾಗಿ ಈ ತಾಲೂಕು ಕೇಂದ್ರವಿದೆ. ಅಲ್ಲಿಗೆ, ಎಲ್ಲಿಂದ ಕಿಡ್ನಾಪ್ ಆದರೋ, ಅಲ್ಲೇ ಅಣ್ಣಾವ್ರ ಹೆಸರಿನಲ್ಲಿ ನಗರವೊಂದರ ಉದಯವಾಯಿತು.

    English summary
    Dr. Rajkumar Nagar In Erode, Where Kannada Matinee Idol Kidnapped By Veerappan
    Tuesday, November 5, 2019, 14:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X