54 ವರ್ಷಗಳ ಬಳಿಕ ಮತ್ತೆ ಸೆಟ್ಟೇರಲಿದೆ 'ಜೇಡರಬಲೆ': ಆದ್ರೀಗ ಅಣ್ಣಾವ್ರ ಸಿನಿಮಾ ಅಲ್ಲ

'ಜೇಡರ ಬಲೆ' ಅಂದ್ಕೂಡಲೇ ಮೊದಲ ನೆನಪಾಗೋದು ಡಾ.ರಾಜ್‌ಕುಮಾರ್. ಇದು ಕನ್ನಡದ ಮೊದಲ ಬಾಂಡ್ ಸಿನಿಮಾ. 1968ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಅಂದಿನ ಸಿನಿಪ್ರಿಯರಿಗೆ ಕಿಕ್ ಕೊಟ್ಟಿತ್ತು. ಬಾಂಡ್ ಸಿನಿಮಾ ಅನ್ನೋದು ಕೇವಲ ಇಂಗ್ಲಿಪ್ ಚಿತ್ರಗಳನ್ನು ನೋಡೋರಿಗೆ ಅನ್ನೋ ಕಾಲದಲ್ಲಿ ಕನ್ನಡಿಗರಿಗೆ ಬಾಂಡ್ ಆಗಿದ್ದು ಡಾ. ರಾಜ್‌ಕುಮಾರ್. ಆ ಸಿನಿಮಾನೇ 'ಜೇಡರಬಲೆ'

ಇದೇ 'ಜೇಡರಬಲೆ' ಸಿನಿಮಾದಿಂದ ಸ್ಯಾಂಡಲ್‌ವುಡ್‌ನಲ್ಲೂ ಬಾಂಡ್ ಸಿನಿಮಾಗಳು ಬರೋಕೆ ಶುರುವಾಗಿದ್ದವು. ಕನ್ನಡದಲ್ಲಿ ಬಾಂಡ್ ಚಿತ್ರಗಳಿಗೆ ಅಡಿಪಾಯ ಹಾಕಿಕೊಟ್ಟಿದ್ದೇ ದೊರೆ ಮತ್ತು ಭಗವಾನ್. 1968ರ ವೇಳೆ ಸಾಮಾಜಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳನ್ನೇ ನೋಡುತ್ತಿದ್ದ ಜನರಿಗೆ ಬಾಂಡ್ ಸಿನಿಮಾ ಕೊಟ್ಟಿದ್ದು ದೊರೆ-ಭಗವಾನ್. ಈಗ ಟೈಟಲ್ ಅನ್ನು ಇಟ್ಕೊಂಡು ಮತ್ತೊಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ.

Dr. Rajkumar Starrer Jedara Bale Movie Title Using After 54 Years

ಕನ್ನಡದಲ್ಲಿ ಮತ್ತೆ ಜೇಡರ ಬಲೆ

ಅತೀ ಶೀಘ್ರದಲ್ಲಿಯೇ ಮತ್ತೆ 'ಜೇಡರಬಲೆ' ಶುರುವಾಗಲಿದೆ. ಸಸ್ಪೆನ್ಸ್ ಸ್ಟೋರಿಯ ಸಿನಿಮಾಗೆ 'ಜೇಡರ ಬಲೆ' ಅಂತ ಸಿನಿಮಾ ಮಾಡುವುದಕ್ಕೆ ಚಿತ್ರತಂಡವೊಂದು ರೆಡಿಯಾಗಿದೆ. ಈಗಾಗಲೇ ಸಿನಿಮಾ ಮಾಡುವ ಬಗ್ಗೆ ಘೋಷಣೆಯನ್ನೂ ಮಾಡಲಾಗಿದೆ.

ಸುಮಾರು 54 ವರ್ಷಗಳ ಬಳಿಕ ಮತ್ತೆ 'ಜೇಡರಬಲೆ' ಟೈಟಲ್ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಇಷ್ಟು ದಿನ ಅಣ್ಣಾವ್ರು ಅಭಿನಯಿಸಿದ ಈ ಟೈಟಲ್ ಅನ್ನು ಇಟ್ಟು ಸಿನಿಮಾ ಮಾಡುವುದಕ್ಕೆ ಯಾರೂ ಮುಂದೆ ಬಂದಿರಲಿಲ್ಲ. ಈಗ ಅದೇ ಟೈಟಲ್ ಇಟ್ಟು ಮಾಡಲು ಯುವಕರ ತಂಡವೊಂದು ಸಜ್ಜಾಗಿ ನಿಂತಿದೆ.

ಅಣ್ಣಾವ್ರ ಅಭಿಮಾನಿಯಿಂದ 'ಜೇಡರ ಬಲೆ'

ಅಂದ್ಹಾಗೆ 'ಜೇಡರ ಬಲೆ' ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿರೋದು ವಿಕಾಸ್ ಗೌಡ. ಉದ್ಯಮಿಯೂ ಆಗಿರುವ ವಿಕಾಸ್ ಗೌಡ ಈ ಸಿನಿಮಾ ನಿರ್ಮಿಸಲು ಮುಂದೆ ಬಂದಿದ್ದರೆ, ಈಗಾಗಲೇ ' ಮಂಗಳವಾರ ರಜಾದಿನ' ಸಿನಿಮಾ ನಿರ್ದೇಶಿಸಿರೋ ಯುವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ಮಾಪಕ ವಿಕಾಸ್ ಗೌಡ ಕೂಡ ಅಣ್ಣಾವ್ರ ಅಭಿಮಾನಿ. ಡಾ.ರಾಜ್‌ಕುಮಾರ್ ಸಿನಿಮಾಗಳನ್ನು ಇಷ್ಟ ಪಡುವ ನಿರ್ಮಾಪಕ ತಮ್ಮ ಸಿನಿಮಾಗೆ 'ಜೇಡರಬಲೆ' ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಕೂಡ ಸಸ್ಪೆನ್ಸ್ ಅಗಿರುವುದರಿಂದ 'ಜೇಡರಬಲೆ' ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

Dr. Rajkumar Starrer Jedara Bale Movie Title Using After 54 Years

ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಶುರು

ಹೊಸ 'ಜೇಡರ ಬಲೆ' ಸಿನಿಮಾವನ್ನು ಮುಂದಿನ ತಿಂಗಳಿನಿಂದ ಚಿತ್ರೀಕರಣ ಮಾಡಲು ನಿರ್ಮಾಪಕ ವಿಕಾಸ್ ಗೌಡ ನಿರ್ಧರಿಸಿದ್ದಾರೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಸದ್ಯ ಟೈಟಲ್ ರಿವೀಲ್ ಆಗಿದ್ದು ಮುಂದಿನ ದಿನಗಳಲ್ಲಿ ಸಿನಿಮಾದ ಸ್ಟಾರ್ ಕಾಸ್ಟ್ ಅನ್ನು ರಿವೀಲ್ ಮಾಡಲಿದ್ದಾರೆ.

ಅಣ್ಣಾವ್ರು ನಟಿಸಿದ 'ಜೇಡರ ಬಲೆ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಅದೇ ಹೆಸರಿನ ಸಿನಿಮಾ ನಿರ್ಮಾಣ ಆಗಿದ್ದು, ಪ್ರೇಕ್ಷಕರು ಮೆಚ್ಚುಗೆ ಆಗುತ್ತಾ? ಹೊಸ ಇತಿಹಾಸವನ್ನು ಸೃಷ್ಟಿಸುತ್ತಾ ಅನ್ನೋದು ಸದ್ಯದ ಮಟ್ಟಿಗೆ ಯಕ್ಷ ಪ್ರಶ್ನೆ.

More from Filmibeat

English summary
Dr. Rajkumar Starrer Jedara Bale Movie Title Using After 54 Years, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X