ಸಾಹಸ ಸಿಂಹನ ಹೊಸ ಮನೆ: ಸಿಎಂ, ಸುಮಲತಾ ಜಗ್ಗೇಶ್ ಉಪಸ್ಥಿತಿ!

ಬೆಂಗಳೂರಿನ ಜಯನಗರದಲ್ಲಿ ಡಾ. ವಿಷ್ಣುವರ್ಧನ್ ಬಾಳಿ ಬದುಕಿದ ಮನೆಯೀಗ ಹೊಸ ರೂಪ ಪಡೆದುಕೊಂಡಿದೆ. ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ದಂಪತಿ ಈ ಹೊಸ ಮನೆಯ ನಿರ್ಮಾಣ ಕಾರ್ಯದಲ್ಲಿ ಹಲವು ದಿನಗಳಿಂದ ತೊಡಗಿಸಿಕೊಂಡಿದ್ದರು. ಅದರಂತೆ ಇಂದು ಗೃಹಪ್ರವೇಶ ನೆರವೇರಿದೆ.

ಇಂದು (ನವೆಂಬರ್ 27) ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹೊಸ ಮನೆ ಗೃಗಪ್ರವೇಶ ನೆರವೇರಿದೆ. ಈ ಶುಭ ಘಳಿಗೆಗೆ ಸ್ಯಾಂಡಲ್‌ವುಡ್ ಸೇರಿದಂತೆ ರಾಜಕೀಯ ಮುಖಂಡರು ಸಾಕ್ಷಿಯಾಗಿದ್ದರು.

ಸಿ ಎಂ ಬಸವರಾಜ ಬೊಮ್ಮಾಯಿ, ಸುಮಲತಾ ಹಾಗೂ ಜಗ್ಗೇಶ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಮನೆಯೊಳಗೊಮ್ಮೆ ರೌಂಡ್ ಹೊಡೆಸಿದ್ದಾರೆ.

ವಿಷ್ಣುವರ್ಧನ್ ಹೊಸ ಮನೆ ಹೆಸರು 'ವಲ್ಮೀಕ'

ವಿಷ್ಣುವರ್ಧನ್ ಹೊಸ ಮನೆ ಹೆಸರು 'ವಲ್ಮೀಕ'

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮನೆಯನ್ನು ಆಧುನಿಕವಾಗಿ ವಿನ್ಯಾಸಗೊಳಿಸಿ ಕಟ್ಟಲಾಗಿದೆ. ಇಂದಿನ ಪೀಳಿಕೆ ಇಷ್ಟ ಪಡುವಂತೆಯೇ ಹೊಸ ಮನೆಯನ್ನು ಡಿಸೈನ್ ಮಾಡಲಾಗಿದೆ. ಹಾಗೇ ಈ ಮನೆಗೆ 'ವಾಲ್ಮೀಕ' ಅಂತ ಹೆಸರನ್ನೂ ಇಡಲಾಗಿದೆ. ಹಲವು ದಿನಗಳಿಂದ ನಿರ್ಮಾಣಗೊಳ್ಳುತ್ತಿದ್ದ ವಿಷ್ಣುದಾದನ ಮನೆ ಪೂರ್ಣಗೊಂಡಿದ್ದು, ಇಂದು (ನವೆಂಬರ್ 27) ಗೃಹಪ್ರವೇಶ ಮಾಡಲಾಗಿದೆ. ಸಂಪ್ರದಾಯದಂತೆ ಪೂಜೆ ಕಾರ್ಯಕ್ರಮಗಳು ಬೆಳಗ್ಗಿನಿಂದ ನಡೆದಿವೆ.

ವಿಷ್ಣು ಮನೆಗೆ ಶುಭ ಹಾರೈಸಿದ ಬೊಮ್ಮಾಯಿ

ವಿಷ್ಣು ಮನೆಗೆ ಶುಭ ಹಾರೈಸಿದ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಆಹ್ವಾನವನ್ನು ನೀಡಲಾಗಿತ್ತು. ರಾಜಕೀಯ ಒತ್ತಡ ಹಾಗೂ ಬ್ಯುಸಿ ಶೆಡ್ಯೂಲ್‌ಗಳ ನಡುವೆಯೂ ವಿಷ್ಣುದಾದನ ಹೊಸ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ, ಶುಭ ಹಾರೈಸಿದ್ದಾರೆ. ಇದೇ ವೇಳೆ " ಬಹಳ ಸಂತೋಷ ಆಯ್ತು. ವಿಷ್ಣುವರ್ಧನ್ ಇದ್ದ ಮನೆಯನ್ನು ಇವತ್ತು ಅಂದವಾಗಿ ಚಂದವಾಗಿ ಮಾಡಿದ್ದಾರೆ. ಭಾರತಿ ಅಮ್ಮ ಅವರ ಪ್ರಯತ್ನ, ಶ್ರಮ. ವಿಷ್ಣುವರ್ಧನ್ ಅವರ ತ್ಯಾಗ ಎಲ್ಲವನ್ನೂ ಇದರೊಳಗೆ ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಮುಂದಿನ ದಿನಗಳಲ್ಲಿ ಅವರ ಸ್ಮಾರಕವನ್ನು ವೈಭವವಾಗಿ ಉದ್ಘಾಟನೆ ಮಾಡುತ್ತೇವೆ." ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುಮಲತಾ ಗೃಹ ಪ್ರವೇಶದಲ್ಲಿ ಭಾಗಿ

ಸುಮಲತಾ ಗೃಹ ಪ್ರವೇಶದಲ್ಲಿ ಭಾಗಿ

ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರೂ ಕುಚಿಕು ಗೆಳೆಯರಾಗಿದ್ದರು ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಹೀಗಾಗಿ ಸುಮಲತಾ ಅಂಬರೀಷ್ ಸಂಭ್ರಮ ಸಡಗರದಿಂದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭೇಟಿಯಾದ ಭಾರತಿ ವಿಷ್ಣುವರ್ಧನ್ ಜೊತೆ ಇರುವ ಫೋಟೊ ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. "ಅಂಬರೀಶ್ ಅವರ ಕುಚಿಕು ವಿಷ್ಣುವರ್ಧನ್ ಅವರ ಕನಸಿನ ಮನೆ, ಇದೀಗ ನವೀಕರಣಗೊಂಡು ಹೊಸ ವಿನ್ಯಾಸದಲ್ಲಿ ತಲೆಯೆತ್ತಿದೆ. ಆ ಹೊಸ ಮನೆಯ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದೆ. ಇದು ನಮ್ಮ ಕುಟುಂಬದ ಕಾರ್ಯಕ್ರಮವೇ ಆಗಿದ್ದು, ಭಾರತಿ ವಿಷ್ಣುವರ್ಧನ್ ಅವರ ಆತಿಥ್ಯ ಸ್ವೀಕರಿಸಿದೆ. ಹೊಸ ಮನೆಯಲ್ಲಿ ಸದಾ ಸಂಭ್ರಮವೇ ತುಂಬಿರಲಿ ಎಂದು ನಾನು ಮತ್ತು ಅಂಬರೀಶ್ ಅವರ ಪರವಾಗಿ ಹಾರೈಸಿದೆ." ಎಂದು ಬರೆದುಕೊಂಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಭಾಗಿ

ನವರಸ ನಾಯಕ ಜಗ್ಗೇಶ್ ಭಾಗಿ

ಸಾಹಸ ಸಿಂಹನ ಮನೆಯ ಗೃಹ ಪ್ರವೇಶದಲ್ಲಿ ನವರಸ ನಾಯಕ ಜಗ್ಗೇಶ್ ಭಾಗಿಯಾಗಿದ್ದರು. ಸ್ವತ: ಅನಿರುದ್ಧ್ ಸ್ವಾಗತಿಸಿದ್ದು, ಹೊಸ ಮನೆಯಲ್ಲೊಂದು ರೌಂಡು ಹೊಡೆಸಿದ್ದಾರೆ. " ವಿಷ್ಣುವರ್ಧನ್ ಅವರಿಗೆ ಈ ಜಾಗ ತುಂಬಾನೇ ಪ್ರಿಯವಾಗಿತ್ತು. ಈ ಮನೆಯ ಒಂದೊಂದು ಜಾಗವೂ ಕಾಡುತ್ತೆ. ಈ ಮನೆ ನಮ್ಮೆಲ್ಲರ ಪಾಲಿಗೆ ದೇವಸ್ಥಾನ." ಎಂದು ಈ ವೇಳೆ ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

More from Filmibeat

English summary
Dr.Vishnuvardhan New House C M Basavaraj Bommai Sumalatha Attended Function,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X