ವಿಷ್ಣುವರ್ಧನ್ ಹುಟ್ಟುಹಬ್ಬದ ಸಂಭ್ರಮ: ಶುರುವಾಯ್ತು 'ಯಜಮಾನ್ರೋತ್ಸವ'

'ಸಾಹಸ ಸಿಂಹ' ವಿಷ್ಣುವರ್ಧನ್ ಅವರ ಜನ್ಮದಿನದ ಸಂಭ್ರಮ ಈಗಾಗಲೇ ಶುರುವಾಗಿದ್ದೆ. ವಿಷ್ಣುವರ್ಧನ್ ಜನಿಸಿದ್ದು ಸೆ. 18ರಂದು. ಅವರು ಬದುಕಿದ್ದರೆ ಈ ವರ್ಷದ ಸೆ. 18ಕ್ಕೆ 70 ವರ್ಷ ತುಂಬುತ್ತಿತ್ತು. ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳ ಉತ್ಸಾಹವೇನೂ ಕಡಿಮೆಯಾಗಿಲ್ಲ. ವಿಷ್ಣುವರ್ಧನ್ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಮೊದಲ ಹೆಜ್ಜೆಯಾಗಿ ಬುಧವಾರ 50 ಡೇಸ್ ಫಾರ್ ಡಾ. ವಿಷ್ಣು ಬರ್ಥಡೇ ಟ್ರೆಂಡ್ ನಡೆಸಿದ್ದರು.

Recommended Video

ಶಿವಣ್ಣನ ಮನೆಗೆ ಎಲ್ಲಾ ಹೀರೋಗಳು ಬಂದ್ರು ಆದ್ರೆ ದರ್ಶನ್, ಸುದೀಪ್ ಬರ್ಲಿಲ್ಲ. | Filmibeat Kannada

ವಿಷ್ಣುವರ್ಧನ್ ಜನ್ಮದಿನಕ್ಕೆ 50 ದಿನ ಮೊದಲೇ ಮುನ್ನುಡಿ ಬರೆದಿರುವ ಅಭಿಮಾನಿಗಳು 'ಯಜಮಾನ್ರೋತ್ಸವ'ಕ್ಕೆ ಅಣಿಯಾಗಿದ್ದಾರೆ. ವಿಷ್ಣುವರ್ಧನ್ ಅವರು ನಾಯಕನಾಗಿ ನಟಿಸಿದ್ದ ಮೊದಲ ಚಿತ್ರ 'ನಾಗರಹಾವು' ಮತ್ತು ಕೊನೆಯ ಚಿತ್ರ 'ಆಪ್ತರಕ್ಷಕ'ದ ಚಿತ್ರಗಳನ್ನು ಬಳಸಿರುವ ಸುಂದರ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯಜಮಾನ್ರ ಹೆಸರು ಶಾಶ್ವತ

ಯಜಮಾನ್ರ ಹೆಸರು ಶಾಶ್ವತ

2 ಲಕ್ಷ ಟ್ವೀಟ್!! ವಾರದ ಹಿಂದೆ ಟ್ವೀಟರ್ ಟ್ರೆಂಡ್ ಅಂದರೇನು ಎಂದು ಗೊತ್ತಿಲ್ಲದ ಯಜಮಾನ್ರ ಸೇನಾನಿಗಳು ಇಂದು ಮೊದಲ ಯತ್ನದಲ್ಲೇ ಈ ಮಟ್ಟದ ಮೈಲಿಗಲ್ಲು ದಾಖಲಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷ್ಯ. ಅವರು ನಮ್ಮನ್ನಗಲಿ ಹತ್ತು ವರ್ಷವಾಯಿತು. ಆದರೂ ಈ ಪರಿ ಹವಾ ಇಟ್ಟಿದ್ದಾರೆಂದರೆ ಏನ್ ಹೇಳೋಣ!! ಸೂರ್ಯಚಂದ್ರರಿರುವ ತನಕ ಕರುನಾಡಲ್ಲಿ ಯಜಮಾನ್ರ ಹೆಸರು ಶಾಶ್ವತ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಎಂದು ವಿಷ್ಣುವರ್ಧನ್ ಅಭಿಮಾನಿಯಾಗಿರುವ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.

ನೀವು ನಡೆದ ದಾರಿಯಲ್ಲಿ...

ನೀವು ನಡೆದ ದಾರಿಯಲ್ಲಿ...

ಪ್ರತಿ ವರ್ಷ ವಿಷ್ಣು ದಾದಾರ ಹುಟ್ಟಿದ ದಿನವನ್ನ ಹಬ್ಬವನ್ನಾಗೇ ಆಚರಿಸುವ ಅಭಿಮಾನಿಗಳ ಮನಸ್ಸಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ದಾದಾ. ನೀವು ನಡೆದ ದಾರಿಯಲ್ಲಿ ನಮ್ಮ ಹೆಜ್ಜೆ ಎಂದು ವಿಷ್ಣುವರ್ಧನ್ ಜನ್ಮದಿನದ ಸಿಡಿಪಿ ಬಿಡುಗಡೆ ಮಾಡಿರುವ ನಿರ್ದೇಶಕ ಪ್ರೇಮ್, ಟ್ವೀಟ್ ಮಾಡಿದ್ದಾರೆ.

ರೋಮಾಂಚನವಾಗುತ್ತಿದೆ

ರೋಮಾಂಚನವಾಗುತ್ತಿದೆ

ಸನ್ನಡತೆ, ಸಂಸ್ಕಾರ, ಸಂಸ್ಕೃತಿಗಳ ಪ್ರತಿಬಿಂಬದಂತಿದ್ದ ಕನ್ನಡಿಗರ ಯಜಮಾನ್ರಿಗೆ 70 ವರುಷವಾಗುತ್ತಿದೆ ಎಂಬುದ ನೆನೆದರೆ ಮೈರೋಮಾಂಚನವಾಗುತ್ತಿದೆ. ಅವರ ಈ 70ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ನಟ ಸಂಚಾರಿ ವಿಜಯ್ ಟ್ವೀಟ್ ಮಾಡಿದ್ದಾರೆ.

ಸರ್ವಕಾಲಿಕ ಏಕೈಕ ಯಜಮಾನ

ಸರ್ವಕಾಲಿಕ ಏಕೈಕ ಯಜಮಾನ

ಕಲ್ಲಲ್ಲೇ ವೀಣೆಯನ್ನು ನುಡಿಸೋ ಈ ಚಾಣಾಕ್ಯ ಚಂದನವನದ ಮರೆಯದ ಮಾಣಿಕ್ಯ. ಊರಿಗೆ ಉಪಕಾರಿ ಇಟ್ಟಿದ್ದು ಒಂದೇ ಗುರಿ. ಕರ್ಣನ ನಿಯತ್ತು ಸಿಂಹಾದ್ರಿ ಸಿಂಹನ ತಾಕತ್ತು. ಮುಯ್ಯಿಗೆ ಮುಯ್ಯಿ ಅಂದವರಿಗೆ ಆಗಿ ಕರುಣಾಮಯಿ ಅಭಿಮಾನಿಗಳ ಸರ್ವಕಾಲಿಕ ಏಕೈಕ ಯಜಮಾನನ 'ಯಜಮಾನ್ರೋತ್ಸವ'. ವಿಷ್ಣುಸೇನಾ ಸಮಿತಿಯ ಈ ಪ್ರೇಮೋತ್ಸವ ಎಂದು ನಿರ್ದೇಶಕ ರಘುರಾಮ್ ಶುಭ ಕೋರಿದ್ದಾರೆ.

More from Filmibeat

English summary
Fans of Dr Vishnuvardhan has started counting the days of actor's 70th birthday 50 days before. Fans trending 50 Days For Dr Vishnu birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X