ಡಾ.ವಿಷ್ಣುವರ್ಧನ್ ಸಿನಿ ಪಯಣಕ್ಕೆ 50 ವರ್ಷ: ದಾಖಲೆ ಬರೆಯಲು ಸಜ್ಜಾದ ಫ್ಯಾನ್ಸ್!

ಇದೇ ಮುಂಬರುವ ಸೆಪ್ಟೆಂಬರ್ 18ಕ್ಕೆ ಸಾಹಸ ಸಿಂಹ ವಿಷ್ಣುವರ್ಧನ್ 72ನೇ ಹುಟ್ಟುಹಬ್ಬ. ಈ ಕಾರಣಕ್ಕೆ ಪ್ರತಿ ವರ್ಷದಂತೆ ಅಭಿಮಾನಿಗಳು ಸಂಭ್ರಮಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ವಿಷ್ಣುದಾದ ಬರ್ತ್‌ಡೇ ಕೊಂಚ ವಿಶೇಷ.

ಸಾಹಸಿ ಸಿಂಹ ಡಾ.ವಿಷ್ಣುವರ್ಧನ್ 72ನೇ ಜಯಂತೋತ್ಸವಕ್ಕೆ ದಾದಾ ಅಭಿಮಾನಿಗಳು ರೆಡಿಯಾಗಿದ್ದಾರೆ. ಈ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ನೆರವೇರಿಸಲು ಸಜ್ಜಾಗಿದ್ದಾರೆ. ಇದಕ್ಕೊಂದು ಬಲವಾದ ಕಾರಣವೂ ಇದೆ. ಅದಕ್ಕಾಗಿಯೇ ಸಂಭ್ರಮ ಜೋರಾಗಿ ಇರಲಿದೆ.

ಮುಂಬರುವ ಡಿಸೆಂಬರ್ 29ಕ್ಕೆ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಚಿತ್ರಕ್ಕೆ ಬಂದು 50 ವರ್ಷಗಳನ್ನು ಪೂರೈಸಲಿದೆ. ಹೀಗಾಗಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ಸಾಹಸ ಸಿಂಹನ ಪ್ರಮುಖ ಸಿನಿಮಾಗಳು ಸುಮಾರು 50 ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಸಜ್ಜಾಗುತ್ತಿದ್ದಾರೆ.

Dr.Visnhuvardhan Cutout Jathere By Fans On his Birth Anniversary And 50th Year

ಇದೇ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಚಿತ್ರರಂಗಕ್ಕೆ ಬಂದು 50 ವರ್ಷಗಳಾಗುತ್ತಿರೋದ್ರಿಂದ ವಿಭಿನ್ನವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಚಿಂತಿಸಿತ್ತು. ಹೀಗಾಗಿ ವಿಷ್ಣುಸೇನಾ ಸಮಿತಿ, ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳು ಅಧ್ಯಕ್ಷರು ಸೇರಿ ಒಂದೇ ಜಾಗದಲ್ಲಿ ಐವತ್ತು ಕಟೌಟ್ ಹಾಕಲು ನಿರ್ಧರಿಸಿದ್ದಾರೆ.

ಡಾ.ವಿಷ್ಣುವರ್ಧನ್ ನಟಿಸಿದ ಸೂಪರ್ ಹಿಟ್ ಸಿನಿಮಾಗಳ ಕಟೌಟ್ ಇಲ್ಲಿ ನಿಲ್ಲಲಿದೆ. ಈ ಮೂಲಕ ವಿಷ್ಣು ಅಭಿಮಾನಿಗಳು ದಾಖಲೆ ಬರೆಯಲು ಮುಂದಾಗಿದ್ದಾರೆ. ವಿಶೇಷ ಅಂದರೆ, ಒಂದು ಸಿನಿಮಾ ಕಟೌಟ್ ಸುಮಾರು 40 ಅಡಿ ಇರಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದೇ ಸ್ಥಳದಲ್ಲಿ 50 ಕಟೌಟ್‌ಗಳನ್ನು ಯಾವುದೇ ಸ್ಟಾರ್ ನಟನಿಗೆ ನಿಲ್ಲಿಸಿಲ್ಲ. ವಿಷ್ಣು ಸೇನಾ ಸಮಿತಿ ಸದಸ್ಯರು ಹೇಳಿಕೊಂಡಿದ್ದಾರೆ.

Dr.Visnhuvardhan Cutout Jathere By Fans On his Birth Anniversary And 50th Year

ಪ್ರತಿ ಹುಟ್ಟುಹಬ್ಬಕ್ಕೆ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿರುತ್ತೆ. ಅನ್ನದಾನ, ರಕ್ತದಾನ ಶಿಬಿರಗಳು ಅಲ್ಲಿ ನಡೆಯುತ್ತವೆ. ಈ ಬಾರಿ ಕೊಂಚ ವಿಭಿನ್ನವಾಗಿ ಆಚರಣೆ ಮಾಡಲಿದ್ದಾರೆ. ಇನ್ನೊಂದು ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗುತ್ತಿದೆ. ಹುಟ್ಟುಹಬ್ಬದೊಳಗೆ ಸ್ಮಾರಕ ಲೋಕಾರ್ಪಣೆಯಾಗುವ ನಿರೀಕ್ಷೆಯಿತ್ತು. ಆದರೆ, ಅದು ಈಡೇರುವ ಸಾಧ್ಯತೆ ಸದ್ಯಕ್ಕಿಲ್ಲ.

More from Filmibeat

English summary
Dr.Visnhuvardhan Cutout Jathere By Fans On his Birth Anniversary And 50th Year, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X