ಕ್ರೇಜಿಸ್ಟಾರ್ ರವಿಚಂದ್ರನ್ ನಿಮ್ಮ ಮನೆಗೆ ಬರ್ತಾರಂತೆ: ನೀವು ಮಾಡಿಬೇಕಿರೋದು ಇಷ್ಟೇ!

ಕ್ರೇಜಿಸ್ಟಾರ್ ರವಿಚಂದ್ರನ್‌ ನಟಿಸಿದ 'ದೃಶ್ಯ 2' ಥಿಯೇಟರ್‌ಗೆ ಎಂಟ್ರಿಕೊಟ್ಟಿದೆ. ಇದು ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಪಕ್ಕಾ ಫ್ಯಾಮಿಲಿ ಥ್ರಿಲ್ಲರ್‌. 'ದೃಶ್ಯ 2' ಮಲಯಾಳಂ ಸಿನಿಮಾದ ರಿಮೇಕ್ ಆಗಿದ್ದರೂ, ಕನ್ನಡಿಗರನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ನೆಲ ಹಾಗೂ ಭಾಷೆಗೆ ಸಂಬಂಧಿಸಿದಂತೆ ಚಿತ್ರೀಕರಿಸಲಾಗಿದೆ. ಹೀಗಾಗಿ 'ದೃಶ್ಯ 2' ಅಪ್ಪಟ ಕನ್ನಡದ ಸಿನಿಮಾ ಆಗಿಯೇ ತೆರೆಮೇಲೆ ಬಂದಿದೆ ಅಂತಿದೆ ಟೀಮ್.

ಈಗ ವಿಷಯ ಬೇರೆ ಇದೆ. ಇದು ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಖುಷಿ ಕೊಡುವ ವಿಷಯ. ರವಿಚಂದ್ರನ್ ಅವರೇ ನಾನು ನಿಮ್ಮ ಮನೆಗೆ ಬರುತ್ತೇನೆ ಅಂದರೆ, ಅದ್ಯಾವ ಅಭಿಮಾನಿ ಖುಷಿ ಪಡುವುದಿಲ್ಲ ಅಲ್ವಾ? ಅಭಿಮಾನಿಗಳು ಕ್ರೇಜಿಸ್ಟಾರ್ ಅನ್ನು ತಮ್ಮ ಮನೆಗೆ ಸ್ವಾಗತಿಸಲು ರಾತ್ರಿಯಿಡಿ ನಿದ್ದೆ ಮಾಡುವುದಿಲ್ಲ. ರವಿಚಂದ್ರನ್ ಎಲ್ಲಿ ಬರುತ್ತಾರೆ? ಅಂದುಕೊಳ್ಳಬೇಡಿ. ಕ್ರೇಜಿಸ್ಟಾರ್ ನಿಮ್ಮ ಮನೆಗೆ ಬರುವುದು ಗ್ಯಾರಂಟಿ. ಅದಕ್ಕೆ ನೀವು ಒಂದು ಚಿಕ್ಕ ಕೆಲಸ ಮಾಡಬೇಕು ಅಷ್ಟೇ. ಅದೇನು ಮಾಡಬೇಕು ಅಂತ ಮುಂದೆ ಓದಿ.

'ದೃಶ್ಯ 2' ತಂಡಕ್ಕೊಂದು ಸೆಲ್ಫಿ ಕಳಿಸಿ

'ದೃಶ್ಯ 2' ತಂಡಕ್ಕೊಂದು ಸೆಲ್ಫಿ ಕಳಿಸಿ

ಹೌದು.. ನೀವು ಮಾಡಬೇಕಿರುವುದು ಒಂದು ಸಣ್ಣ ಕೆಲಸ. ನಿಮ್ಮ ಕುಟುಂಬದ ಜೊತೆ ಚಿತ್ರಮಂದಿರಕ್ಕೆ ಹೋಗಿ ಒಂದು ಸೆಲ್ಫಿ ತೆಗೆಯಿರಿ ಅದನ್ನು ದೃಶ್ಯ 2 ತಂಡಕ್ಕೆ ಕಳುಹಿಸಿ. ಯಾರಿಗೆ ಗೊತ್ತು. ನೀವೇನಾದರೂ ಅದೃಷ್ಟಶಾಲಿಗಳಾಗಿದ್ದರೆ. ನಿಮ್ಮ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬರುತ್ತಾರೆ. ರಾಜೇಂದ್ರ ಪೊನ್ನಪ್ಪ ಗೆಟಪ್‌ನಲ್ಲಿಯೇ ನಿಮ್ಮ ಮನೆ ನಿಂತು ಕಾಲಿಂಗ್ ಬೆಲ್ ಒತ್ತಿದರೂ ಅಚ್ಚರಿ ಇಲ್ಲ. ಇನ್ನು ಟ್ರೈ ಮಾಡುವುದು ಬಿಡುವುದು ನಿಮಗೆ ಬಿಟ್ಟಿದ್ದು.

ರವಿಚಂದ್ರನ್ ನಿಮ್ಮ ಮನಗೆ ಬರೋಕೆ ಏನು ಮಾಡಬೇಕು?

'ದೃಶ್ಯ 2' ಸಿನಿಮಾ ನೋಡಿ, ಕುಟುಂಬದ ಜೊತೆ ಸೆಲ್ಫಿ ಕೂಡ ತೆಗೆಸಿಕೊಂಡಿದ್ದು ಆಯ್ತು. ಆಮೇಲೆ ಆ ಸೆಲ್ಫಿಯನ್ನು ಕಳುಹಿಸುವುದು ಹೇಗೆ? ಅನ್ನುವ ಅನುಮಾನ ಮೂಡಿರುವುದು ಸಹಜ. ಅದಕ್ಕೆ 'ದೃಶ್ಯ 2' ತಂಡವೇ ಪರಿಹಾರವನ್ನೂ ನೀಡಿದೆ. ಕುಟುಂಬದ ಜೊತೆ ತೆಗೆದ ಸೆಲ್ಫಿಯನ್ನು ನಿಮ್ಮ ಫೇಸ್ ಬುಕ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯೊಳಗೆ #Drishyam2familycontest ಅಂತ ಟೈಟಲ್ ಮಾಡಿ ಪೋಸ್ಟ್ ಮಾಡಿ. ಅದೃಷ್ಟ ನಿಮ್ಮ ಕಡೆ ಇದ್ದರೆ, ಕ್ರೇಜಿ ನಿಮ್ಮ ಮನೆಗೆ ಬರುವುದು ಗ್ಯಾರಂಟಿ.

ಇಷ್ಟೊಂದು ಪ್ರಚಾರ ಮಾಡಿಲ್ಲ ಕ್ರೇಜಿಸ್ಟಾರ್

ಇಷ್ಟೊಂದು ಪ್ರಚಾರ ಮಾಡಿಲ್ಲ ಕ್ರೇಜಿಸ್ಟಾರ್

'ದೃಶ್ಯ 2' ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿದೆ. ಮೊದಲ ದಿನ ಪ್ರೇಕ್ಷಕರು ನೀಡಿರುವ ಪ್ರತಿಕ್ರಿಯೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಸುಮಾರು 550ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಸ್ವತಃ ರವಿಚಂದ್ರನ್ ಅವರೇ ಪ್ರಚಾರಕ್ಕೆ ಇಳಿದಿದ್ದಾರೆ. ಹಲವು ದಿನಗಳಿಂದ 'ದೃಶ್ಯ 2' ಪ್ರಚಾರದಲ್ಲಿ ಕ್ರೇಜಿ ಸ್ಟಾರ್ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಕ್ರೇಜಿ ಸ್ಟಾರ್ ಇಷ್ಟೊಂದು ಪ್ರಚಾರ ಮಾಡಿದ್ದು ಯಾರೂ ಕಂಡಿದ್ದೇ ಇಲ್ಲ. ಅದರಲ್ಲೂ ವಿನೂತನವಾಗಿ ಸಿನಿಮಾ ನೋಡಿದ ಅಭಿಮಾನಿಗಳ ಮನೆಗೆ ಹೋಗುವುದನ್ನು ಹಿಂದೆಂದೂ ಮಾಡಿಲ್ಲ. ಆದರೆ, ರವಿಚಂದ್ರನ್ ಈ ಹೊಸ ಪ್ರಯತ್ನಕ್ಕೆ ಅಭಿಮಾನಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇಷ್ಟು ಪಟ್ಟು ನಟಿಸಿದ ಚಿತ್ರ 'ದೃಶ್ಯ 2'

ಇಷ್ಟು ಪಟ್ಟು ನಟಿಸಿದ ಚಿತ್ರ 'ದೃಶ್ಯ 2'

'ದೃಶ್ಯ' ತೆರೆಕಂಡು ಏಳು ವರ್ಷಗಳಾಗಿವೆ. ಆದರೂ ಆ ಸಿನಿಮಾವನ್ನು ಕನ್ನಡಿಗರು ಮರೆತಿಲ್ಲ. ಈಗ ಮತ್ತೆ ದೃಶ್ಯದ ಎರಡನೇ ಚಾಪ್ಟರ್ ರಿಲೀಸ್ ಆಗಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಸಿನಿಮಾ ಕನ್ನಡಿಗರಿಗೆ ಇಷ್ಟ ಆಗುತ್ತಾ ಅನ್ನುವ ಕುತೂಹಲ ಸ್ವತಃ ರವಿಚಂದ್ರನ್ ಅವರಿಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ರವಿಚಂದ್ರನ್ ಮನಸಾರೆ ಒಪ್ಪಿ ಸಿನಿಮಾ ಮಾಡಿರುವುದರಿಂದ 'ದೃಶ್ಯ 2' ಜನರಿಗೆ ತಲುಪಲೇ ಬೇಕು ಅಂತ ಶತಪ್ರಯತ್ನ ಮಾಡುತ್ತಿದ್ದಾರೆ.

More from Filmibeat

English summary
Drishaya 2 team planned new promotional idea. If audience send selfi while waching Drishya 2, lucky one can recieve Ravichandran at your house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X