For Quick Alerts
  ALLOW NOTIFICATIONS  
  For Daily Alerts

  100 ದಿನ ಆದರೂ ಸ್ಯಾಟಲೈಟ್ ಭಾಗ್ಯ ದೊರಕಿಲ್ಲ 'ಕೆಂಡಸಂಪಿಗೆ'ಗೆ

  By Suneetha
  |

  ನಿರ್ದೇಶಕ ದುನಿಯಾ ಸೂರಿ ಅವರು ಹೊಸಬರನ್ನು ಹಾಕಿಕೊಂಡು ಮಾಡಿದ್ದ 'ಕೆಂಡಸಂಪಿಗೆ' ಸಿನಿಮಾ ನೂರು ದಿನಗಳನ್ನು ಪೂರೈಸಿದ್ದು, ಈ ಸಂಭ್ರಮವನ್ನು ನಿರ್ದೇಶಕರು ಭಾನುವಾರ ಸಂಜೆ, ಸಣ್ಣ ಕಾರ್ಯಕ್ರಮ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕಾಗಿ ದುಡಿದವರಿಗೆ ಪಾರಿತೋಷಕ ನೀಡಿ ಗೌರವ ಸಲ್ಲಿಸಿದ್ದಾರೆ.

  ಹೊಸಬರಾದ ನಟ ಸಂತೋಷ್ ರೇವಾ ಮತ್ತು ನಟಿ ಮಾನ್ವಿತಾ ಹರೀಶ್ ನಟಿಸಿರುವ 'ಕೆಂಡಸಂಪಿಗೆ' ಚಿತ್ರ ಶತದಿನೋತ್ಸವ ಆಚರಿಸಿದ್ದೇನೋ ನಿಜ ಆದರೆ ತುಂಬಾ ಜನರಿಗೆ ಗೊತ್ತಿಲ್ಲದಿರುವ ವಿಚಾರ ಏನಪ್ಪಾ ಅಂದ್ರೆ, ಈ ಚಿತ್ರ ನೂರು ದಿನ ಪೂರೈಸಿದರೂ ಕೂಡ ಯಾವೊಂದು ಚಾನಲ್ ಕೂಡ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ.['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

  ಅಂದಹಾಗೆ ಸೂರಿ ಅವರ 'ಕೆಂಡಸಂಪಿಗೆ' ಎಲ್ಲೆಡೆ ತನ್ನ ಪರಿಮಳವನ್ನು ಸೂಸಿದ್ದು, ಆಗಿದೆ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದು, ಆಗಿದೆ. ಅಲ್ಲದೇ ಸೆಲೆಬ್ರಿಟಿಗಳು ಕೂಡ ನೋಡಿ ಕೊಂಡಾಡಿದ್ದಾರೆ.

  ಆದರೆ ಯಾವ ಚಾನಲ್ ನವರು ಕೂಡ ಮುಂದೆ ಬಂದು ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿ ಮಾಡಿಲ್ಲ ಅನ್ನೋದು ವಿಶೇಷ. ಅಸಲಿ ಯಾರು ಯಾಕೆ ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಅನ್ನೋದು ಸೂರಿ ಅವರಿಗೂ ಯಕ್ಷಪ್ರಶ್ನೆಯಾಗಿ ಉಳಿದಿದೆ ಅಂತೆ.[ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

  ಚಿತ್ರ ಬಿಡುಗಡೆಯಾದ ದಿನದಿಂದ ಕೂಡ ಸೂರಿ ಅವರು ಅನೇಕ ಚಾನಲ್ ನವರ ಜೊತೆಗೆ ಮಾತು-ಕತೆ ನಡೆಸಿದ್ದಾರೆ. ಆದರೆ ಯಾವ ಚಾನಲ್ ಸಹ ಸದ್ಯಕ್ಕೆ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಕೊಳ್ಳುವುದಕ್ಕೆ ಮುಂದೆ ಬಂದಿಲ್ಲ. ಈಗಾಗಲೇ ಚಿತ್ರ 100 ದಿನ ಪೂರೈಸಿರುವುದರಿಂದ, ಇನ್ನಾದರೂ ಚಿತ್ರವನ್ನು ಯಾರಾದರೂ ಕೇಳಬಹುದಾ? ಎಂಬ ವಿಶ್ವಾಸದಲ್ಲಿ ಸೂರಿ ಇದ್ದಾರೆ.

  ಸೂರಿ ಅವರ ಕೆಂಡಸಂಪಿಗೆಯಿಂದ ಇನ್ನಷ್ಟು ದುಡ್ಡು ಬರದಿದ್ದರೆ, ಆಗ 'ಕಾಗೆ ಬಂಗಾರ' ಚಿತ್ರದ ಮೇಲೂ ಏಟು ಬೀಳುತ್ತದೆ. ಹಾಗಾಗಿ ಇನ್ನಾದರೂ ಯಾವುದಾದರೂ ಚಾನಲ್ ನವರು ಮುಂದೆ ಬಂದು ಸ್ಯಾಟಲೈಟ್ ಹಕ್ಕುಗಳನ್ನು ಕೊಳ್ಳುತ್ತಾರ ಅಂತ ಕಾದು ನೋಡಬೇಕು.

  English summary
  'Kendasampige' directed by Suri has silently completed a 100 day run and the team has decided to celebrate the success of the film. Soori has organised a special event on Sunday evening to mark the success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X