»   » ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?

ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?

Posted By:
Subscribe to Filmibeat Kannada

ದುನಿಯಾ ಸೂರಿ ಮರಳಿ ಬಂದಿದ್ದಾರೆ. ಮೂರು ವರ್ಷಗಳ ನಂತ್ರ 'ಕೆಂಡಸಂಪಿಗೆ'ಯ ಘಮಲು ಪಸರಿಸುತ್ತಾ ಗಾಂಧಿನಗರಕ್ಕೆ ವಾಪಸ್ಸಾಗಿದ್ದಾರೆ. 'ದೊಡ್ಮನೆ ಹುಡುಗ' ತಯಾರಿಯಾಗುವ ಹೊತ್ತಲ್ಲೇ 'ಕೆಂಡಸಂಪಿಗೆ' ಚಿತ್ರವನ್ನ ರೆಡಿಮಾಡಿದ್ದಾರೆ ಸುಕ್ಕಾ ಸೂರಿ.

ನಿಜ ಹೇಳ್ಬೇಕಂದ್ರೆ, ದುನಿಯಾ ಸೂರಿ ಟೈಮ್ ಚೆನ್ನಾಗಿದಿದ್ದರೆ, ಈ ಮೂರು ವರ್ಷಗಳ ಗ್ಯಾಪಲ್ಲಿ ಮೂರು ಸಿನಿಮಾಗಳನ್ನ ತೆರೆಗೆ ತರುತ್ತಿದ್ದರು. 'ಕಂಟ್ರಿ ಪಿಸ್ತೂಲ್', 'ಕರೆನ್ಸಿ' ಚಿತ್ರಗಳ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಸೂರಿ, ಆ ಎರಡು ಪ್ರಾಜೆಕ್ಟ್ ಗಳನ್ನು ಬಿಟ್ಟು ಈಗ 'ಕೆಂಡಸಂಪಿಗೆ' ಹಿಡಿದು ಬಂದಿದ್ದಾರೆ. [ಕಾಣದಂತೆ ಮಾಯವಾದರು... ದುನಿಯಾ ಸೂರಿ...]

Kannada movie Kendasampige trailer

'ಕೆಂಡಸಂಪಿಗೆ' ಹೆಸರು ಕೇಳ್ತಿದ್ದ ಹಾಗೆ, ಇದು ಯಾವುದೋ ಕಲಾತ್ಮಕ ಚಿತ್ರ ಅಂತ ನೀವು ಅಂದುಕೊಳ್ಳಬೇಡಿ. ಯಾಕಂದ್ರೆ, ಇದು ಸುಕ್ಕಾ ಸೂರಿ ಸಿನಿಮಾ. ಅಂದ್ಮೇಲೆ 'ಕೆಂಡಸಂಪಿಗೆ' ಎಲ್ಲಾ ಕಮರ್ಶಿಯಲ್ ಅಂಶಗಳನ್ನೊಳಗೊಂಡಿರುವ ಚಿತ್ರ. ಆದ್ರೆ, 'ಕೆಂಡಸಂಪಿಗೆ'ಯಲ್ಲಿ ಯಾವುದೇ 'ಸ್ಟಾರ್' ವಾಲ್ಯೂ ಇಲ್ಲ.

ಹೊಸ ನಟ-ನಟಿಯರನ್ನ ಹಾಕಿಕೊಂಡು, ಎಸ್.ಸುರೇಂದ್ರನಾಥ್ ಕಥೆಯನ್ನಿಟ್ಟುಕೊಂಡು ಸೂರಿ ಈ ಚಿತ್ರವನ್ನ ರೆಡಿಮಾಡಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಸೂರಿ, 'ಕೆಂಡಸಂಪಿಗೆ'ಯನ್ನ ಅದಿನ್ಹೇಗೆ ಮಾಡಿದ್ದಾರೆ ಅಂತ ನೀವು ಯೋಚಿಸುತ್ತಿದ್ದರೆ, ಮೊದಲು ಚಿತ್ರದ ಈ ಟ್ರೇಲರ್ ನೋಡಿ.....

Kannada movie Kendasampige trailer

'ಕೆಂಡಸಂಪಿಗೆ' ಚಿತ್ರದ ಟ್ರೇಲರ್ ನೋಡ್ತಿದ್ರೆ, ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಅಂತ ಅನಿಸೋದು ಪಕ್ಕಾ. 18-19 ವರ್ಷದ ಯುವಕ-ಯುವತಿಯರ ಸುತ್ತ ಒಂದು ಪೊಲೀಸ್ ವಿಚಾರಣೆಯ ಬಗ್ಗೆ ಇರುವ ಕಥೆ ಇದು. ಅದಕ್ಕೆ 'ಪಾರ್ಟ್-2 ಗಿಣಿಮರಿ ಕೇಸ್' ಅಂತ ಕ್ಯಾಪ್ಷನ್ ಕೊಟ್ಟಿರುವ ಸೂರಿ, ಚಿತ್ರದ ಕೌತುಕವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. [ದುನಿಯಾ ಸೂರಿ 'ಕಂಟ್ರಿ ಪಿಸ್ತೂಲ್' ಫಸ್ಟ್ ಲುಕ್ ಔಟ್]

'ಪಾರ್ಟ್-2' ಅಂತ ಇಟ್ಟ ಮಾತ್ರಕ್ಕೆ 'ಕೆಂಡಸಂಪಿಗೆ' ಚಿತ್ರದ ಮೊದಲ ಆವೃತ್ತಿ ಮೊದಲೇ ಬಿಡುಗಡೆ ಆಗಿದೆ ಅಂತಲ್ಲ. ಗಿಣಿಮರಿ ಕೇಸ್ ಜಾಲಾಡುವುದಕ್ಕೆ ಹೊರಟಿರುವ ಸೂರಿ, ಪಾರ್ಟ್-2 ಅಂತ ಯಾಕೆ ಕರೆದಿದ್ದಾರೆ ಅನ್ನುವುದಕ್ಕೆ ಸಿನಿಮಾ ಬಿಡುಗಡೆಯಾಗುವವರೆಗೂ ಕಾಯಲೇಬೇಕು.

Kannada movie Kendasampige trailer

ಟ್ರೇಲರ್ ನಲ್ಲಿ ಕಾಣುವಂತೆ ಇಡೀ ಸಿನಿಮಾ ತುಂಬಾ ಹೊಸಬರ ದಂಡೇ ಇದೆ. ನಾಯಕ ಸಂತೋಷ್ ರೇವಾ ಮತ್ತು ನಾಯಕಿ ಶ್ವೇತಾ ಕಾಮತ್ ಬಣ್ಣ ಹಚ್ಚಿರುವುದು ಈ ಚಿತ್ರದಲ್ಲೇ. ಉಳಿದಂತೆ ಸೂರಿ ಕ್ಯಾಂಪಿನ ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಚಂದ್ರಿಕಾ ಕೂಡ 'ಕೆಂಡಸಂಪಿಗೆ'ಯಲ್ಲಿದ್ದಾರೆ. [ಸೂರಿ, ಪುನೀತ್ ಸಂಗಮದ 'ದೊಡ್ಮನೆ ಹುಡುಗ' ಶುರು]

Kannada movie Kendasampige trailer

ಒಂದು ಪ್ರೇಮ ಕಥೆ ಮತ್ತು ಕೊಲೆಯ ವಿಚಾರಣೆ ಸುತ್ತ ನಡೆಯುವ 7 ದಿನಗಳ ಜರ್ನಿಯಲ್ಲಿ ಬುಲ್ಲೆಟ್ ಸದ್ದೇ ಹೆಚ್ಚಾಗಿ ಕೇಳುವಂತಿದೆ. ಅದಕ್ಕೆ ಈಗ ರಿಲೀಸ್ ಆಗಿರುವ 'ಕೆಂಡಸಂಪಿಗೆ' ಟ್ರೇಲರ್ ಸಾಕ್ಷಿ. ವಿ.ಹರಿಕೃಷ್ಣ ಸಂಗೀತ 'ಕೆಂಡಸಂಪಿಗೆ' ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. [ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದಾರೆ ದುನಿಯಾ ಸೂರಿ]

ಹೊಸಬರ ಜೊತೆ ಮತ್ತೊಂದು ಪ್ರಯೋಗಕ್ಕೆ ಇಳಿದಿರುವ ಸೂರಿಗೆ 'ಕೆಂಡಸಂಪಿಗೆ'ಯಿಂದ ಯಶಸ್ಸಿನ ಸುವಾಸನೆ ಸಿಗಲಿ ಅನ್ನುವುದು ಅವರ ಅಭಿಮಾನಿಗಳ ಹಾರೈಕೆ. (ಫಿಲ್ಮಿಬೀಟ್ ಕನ್ನಡ)

English summary
Director Duniya Soori is back with the new movie called 'Kendasampige'. Watch Kendasampige official trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada