Duniya Suri:'ಕದನ ವಿರಾಮ' ರಕ್ಷಿತ್ ಶೆಟ್ಟಿಗೆ ಯಾಕೆ ಮಾಡ್ಲಿಲ್ಲ? ಅದೇ ಸಿನಿಮಾ ದರ್ಶನ್‌ಗೆ ಮಾಡ್ತಾರಾ ಸೂರಿ?

ಸ್ಯಾಂಡಲ್‌ವುಡ್‌ನಲ್ಲಿ ರಗಡ್ ಸಿನಿಮಾಗಳನ್ನು ನಿರ್ದೇಶನ ಮಾಡೋದು ದುನಿಯಾ ಸೂರಿ. ಇದೂವರೆಗೂ ಸೂರಿ ನಿರ್ದೇಶಿಸಿದ ಸಿನಿಮಾಗಳು ಅದನ್ನೇ ಹೇಳಿವೆ. ಅದಕ್ಕೆ ಸ್ಯಾಂಡಲ್‌ವುಡ್ ಮಂದಿಗೆ ಸುಕ್ಕಾ ಸೂರಿ ಅಂತಲೇ ಪ್ರೀತಿಯಿಂದ ಕರೆಯುವುದುಂಟು.

ಇಲ್ಲಿ ಹೀರೊ ಮುಖ್ಯ ಅಲ್ಲ. ವಿಲನ್ ಮುಖ್ಯ ಅಲ್ಲ. ದುನಿಯಾ ಸೂರಿ ಕಥೆಯನ್ನು ಹೇಗೆ ಹೇಳ್ತಾರೆ ಅನ್ನೋದು ಮುಖ್ಯ. 'ದುನಿಯಾ' ಸಿನಿಮಾದಿಂದ ಹಿಡಿದು ರಿಲೀಸ್‌ಗೆ ರೆಡಿಯಾಗಿರೋ 'ಬ್ಯಾಡ್ ಮ್ಯಾನರ್ಸ್'ವರೆಗೂ ಆ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. 'ರಾ', ಖಡಕ್ ಆಗಿ ಆಕ್ಷನ್ ಸಿನಿಮಾ ಮಾಡ್ತಾನೇ ಬಂದಿದ್ದಾರೆ.

darshan-duniya-suri-rakshit-shetty

'ಬ್ಯಾಡ್ ಮ್ಯಾನರ್ಸ್' ಪ್ರಚಾರ ಶುರು ಮಾಡಿದಾಗಿನಿಂದ ದುನಿಯಾ ಸೂರಿನೇ ನಿರ್ದೇಶಿಸಬೇಕಿದ್ದ ಮತ್ತೊಂದು ಸಿನಿಮಾ ಹೆಸರು ಹರಿದಾಡುತ್ತಿದೆ. ಈ ಹಿಂದೆ ಸಿಕ್ಕಾಪಟ್ಟೆ ಚರ್ಚೆಯಾಗಿದ್ದ ಸಿನಿಮಾ 'ಕದನ ವಿರಾಮ'. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿಗೆ ಮಾಡ್ಬೇಕಿತ್ತು. ಅದ್ಯಾಕೆ ಆಗಿಲ್ಲ ಅನ್ನೋದನ್ನು ದುನಿಯಾ ಸೂರಿ ರಿವೀಲ್ ಮಾಡಿದ್ದಾರೆ.

'ಕದನ ವಿರಾಮ' ರಕ್ಷಿತ್‌ಗಾ? ದರ್ಶನ್‌ಗಾ?

ದುನಿಯಾ ಸೂರಿ ಸಿನಿಮಾದ ಟೈಟಲ್‌ನಿಂದಲೇ ಕಿಕ್ ಕೊಡುತ್ತವೆ. ಇಂತಹದ್ದೊಂದು ಟೈಟಲ್ 'ಕದನ ವಿರಾಮ'. ಈ ಟೈಟಲ್ ಇಟ್ಟು ರಕ್ಷಿತ್ ಶೆಟ್ಟಿಗೆ ಈ ಸಿನಿಮಾ ಮಾಡುತ್ತಾರೆ ಅಂತ ಜೋರಾಗಿಯೇ ಸುದ್ದಿಯಾಗಿತ್ತು. ಆ ಬಗ್ಗೆ ಸುದ್ದಿನೇ ಇಲ್ಲ. ಈಗ ಅದೇ ಸಿನಿಮಾದ ಹೆಸರು ದರ್ಶನ್ ಜೊತೆ ತಳುಕು ಹಾಕೊಂಡಿದೆ. 'ಕದನ ವಿರಾಮ' ಯಾಕೆ ರಕ್ಷಿತ್ ಶೆಟ್ಟಿಗೆ ಮಾಡಿಲ್ಲ? ಹಾಗಿದ್ದರೆ ದರ್ಶನ್‌ಗೆ ಆ ಸಿನಿಮಾ ಮಾಡುತ್ತಾರಾ? ಈ ಬಗ್ಗೆ ದುನಿಯಾ ಸೂರಿ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ರಕ್ಷಿತ್‌ಗೆ 'ಕದನ ವಿರಾಮ' ಯಾಕೆ ಮಾಡ್ಲಿಲ್ಲ?

ದುನಿಯಾ ಸೂರಿ 'ಕದನ ವಿರಾಮ' ಸಿನಿಮಾ ಮಾಡ್ಬೇಕು ಅಂತ ಹೊರಟಿದ್ದೇನೋ ಸರಿ. ಆದರೆ, ರಕ್ಷಿತ್ ಶೆಟ್ಟಿಯಿಂದಲೇ ಈ ಸಿನಿಮಾ ಆರಂಭ ಆಗಿತ್ತು. ಇದೊಂದು ಮಲ್ಟಿಸ್ಟಾರರ್ ಸಿನಿಮಾ ಆಗಿದ್ದರಿಂದ ದುನಿಯಾ ಸೂರಿ ಹಲವು ನಟರನ್ನು ಅಪ್ರೋಚ್ ಮಾಡಿದ್ದರು. ಅದು ಸರಿ ಹೋಗಲಿಲ್ಲ. ಹೀಗಾಗಿ ಆ ಸಿನಿಮಾಗೆ 'ಕದನ ವಿರಾಮ' ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.

darshan-duniya-suri-rakshit-shetty

ದರ್ಶನ್‌ಗೆ 'ಕದನ ವಿರಾಮ' ಮಾಡ್ತಾರಾ?

ಕೆಲವು ತಿಂಗಳ ಹಿಂದೆ ಇಂತಹದ್ದೊಂದು ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ದರ್ಶನ್ ಸಿನಿಮಾಗೆ ದುನಿಯಾ ಸೂರಿ 'ಕದನ ವಿರಾಮ' ಟೈಟಲ್ ಇಟ್ಟು ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ದುನಿಯಾ ಸೂರಿ ಈಗ ಆ ಸುದ್ದಿಗೂ ಕ್ಲಾರಿಟಿ ಕೊಟ್ಟಿದ್ದಾರೆ. 'ಕದನ ವಿರಾಮ'ವನ್ನು ದರ್ಶನ್‌ಗೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಬೇರೆಯದ್ದೇ ಕಥೆಯನ್ನು ಹೆಣೆದಿರೋ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ದರ್ಶನ್‌ಗೆ ಸಿನಿಮಾ ಮಾಡೋದು ಪಕ್ಕಾ?

ದುನಿಯಾ ಸೂರಿ ಇನ್ಮುಂದೆ ಸ್ಟಾರ್ ನಟರಿಗೆ ಸಿನಿಮಾ ಮಾಡೋದಿಲ್ಲ ಅನ್ನೋ ಸುದ್ದಿ ಓಡಾಡಿತ್ತು. ಆದರೆ, 'ಬ್ಯಾಡ್ ಮ್ಯಾನರ್ಸ್' ರಿಲೀಸ್‌ಗೂ ಮುನ್ನವೇ ದರ್ಶನ್ ಜೊತೆ ಸಿನಿಮಾ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ದರ್ಶನ್ ನಟಿಸಿದ 'ಕಾಟೇರ' ಹಾಗೂ ಮಿಲನ ಪ್ರಕಾಶ್ ಸಿನಿಮಾ ಮುಗಿದ ಬಳಿಕ ಸೂರಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

More from Filmibeat

English summary
Kannada director Duniya Suri about Kadana Virama movie with Darshan:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X