Duniya Suri: ತರಕಾರಿ ಅಂಗಡಿ ಹಾಕಬೇಕು ಅಂತಿದ್ದ ದುನಿಯಾ ಸೂರಿ ತಂದೆಯ ಮರ್ಡರ್ ಆಗಿದ್ದೇಗೆ? ಏನದು ಘಟನೆ?

ದುನಿಯಾ ಸೂರಿ ಸಿನಿಮಾಗಳೇ ಡಿಫ್ರೆಂಟ್. ರಗಡ್ ಕಥೆಗಳನ್ನೇ ಹೊತ್ತು ತೆರೆಮೇಲೆ ಬರೋ ದುನಿಯಾ ಸೂರಿ ಬಗ್ಗೆ ಅದೆಷ್ಟೋ ಮಂದಿಯಲ್ಲಿ ಕುತೂಹಲವಿದೆ. ದುನಿಯಾ ಸೂರಿ ಯಾಕೆ 'ರಾ' ಸ್ಟೋರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ? ಇವರು ಹೇಳೋ ಸ್ಟೋರಿಯಲ್ಲಿ ಯಾಕೆ ಮಾಫಿಯಾ, ಅಂಡರ್‌ವರ್ಲ್ಡ್, ಕೆಳ ಮಧ್ಯಮ ವರ್ಗದ ಕಷ್ಟಗಳನ್ನೇ ಹೇಳಲಾಗುತ್ತೆ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ.

ಇದೊಂದು ಕಡೆಯಾದೆ, ದುನಿಯಾ ಸೂರಿ ಹಿನ್ನೆಲೆ ಏನು? ಅವರ ಊರು ಯಾವುದು? ಅವರ ಅಪ್ಪ ಅಮ್ಮ ಯಾರು? ಅವರು ಏನು ಮಾಡುತ್ತಿದ್ದರು? ಅನ್ನೋದನ್ನು ತಿಳಿದುಕೊಳ್ಳಬೇಕು ಅನ್ನೋ ಆಸೆ ಫ್ಯಾನ್ಸ್‌ಗೆ ಇದ್ದೇ ಇರುತ್ತೆ. ಆದರೆ, ಇದೂವರೆಗೂ ದುನಿಯಾ ಸೂರಿ ತಮ್ಮ ಹಿನ್ನೆಲೆ ಬಗ್ಗೆ ಇಷ್ಟೊಂದು ಓಪನ್ ಆಗಿ ಮಾತಾಡಿರಲಿಲ್ಲ. ಅದರಲ್ಲೂ ತಂದೆ ಬಗ್ಗೆ ಹೆಚ್ಚಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ.

Duniya Suri revealed in an interview about his father struggle and death

'ಬ್ಯಾಡ್ ಮ್ಯಾನರ್ಸ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರೋ ದುನಿಯಾ ಸೂರಿ, 'ಗಲಾಟಾ ಪ್ಲಸ್‌'ಗೆ ಸಂದರ್ಶನವನ್ನು ನೀಡಿದ್ದಾರೆ. ಇದರಲ್ಲಿ ಅವರ ತಂದೆ ಮರ್ಡರ್ ಆಗಿರೋ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. 8ನೇ ವಯಸ್ಸಿನಲ್ಲಿರುವಾಗಲೇ ತಂದೆಯನ್ನು ಹತ್ಯೆ ಮಾಡಿದ್ದನ್ನು ರಿವೀಲ್ ಮಾಡಿದ್ದಾರೆ. ಆ ಘಟನೆ ಏನು? ಅವರ ತಂದೆ ಏನು ಕೆಲಸ ಮಾಡುತ್ತಿದ್ದರು? ಎಲ್ಲವನ್ನೂ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ದುನಿಯಾ ಸೂರಿ ತಂದೆಯ ಹಿನ್ನೆಲೆಯೇನು?

ನಿರ್ದೇಶಕ ದುನಿಯಾ ಸೂರಿಯವರದ್ದು ಬನ್ನೇರುಘಟ್ಟದ ಗೊಟ್ಟಿಗೆರೆ ಅನ್ನೋ ಊರು. ಇವರ ತಂದೆಯ ಹೆಸರು ರಾಮಸ್ವಾಮಿ ಮತ್ತು ತಾಯಿ ಪ್ರಮೀಳಮ್ಮ. ತಂದೆ ಮದುವೆಗೂ ಮುನ್ನ ಮುಂಬೈನಲ್ಲಿ ಕೆಲಸಕ್ಕೆ ಹೋಗಿದ್ದರು. ಅಲ್ಲಿಂದ ಅಡುಗೆ ಕೆಲಸ ಕಲಿತು ಬೆಂಗಳೂರಿಗೆ ಬಂದು ಹೊಟೇಲ್ ಇಟ್ಟಿದ್ದರು. ಮದುವೆ ಆಗುವ ಸಲುವಾಗಿ ತಂದೆ ರಾಮಸ್ವಾಮಿ ಬೆಂಗಳೂರಿಗೆ ಹಿಂತಿರುಗಿದ್ದರು. ಮಾಗಡಿ ಮೂಲದ ತಾಯಿ ಪ್ರಮೀಳಮ್ಮ ಎಂಬುವವರು ಮದುವೆ ಆದರು. ಇವರಿಗೆ ಜನಿಸಿದ ಎರಡನೇ ಮಗುವೇ ಸುರೇಶ. ಇನ್ನೊಂದು ಹೆಸರೇ ದುನಿಯಾ ಸೂರಿ.

Duniya Suri revealed in an interview about his father struggle and death

ಬಡತನಕ್ಕೆ ತಳ್ಳಿದ ಹೊಟೇಲ್ ಕಳ್ಳತನ

ದುನಿಯಾ ಸೂರಿ ತಂದೆ ಜೊತೆ ಊರಲ್ಲಿ ಏನೋ ಗಲಾಟೆ ನಡೆದು ಹೋಯ್ತು. ಆಗ ಆ ಊರಿನಲ್ಲಿ ಹೊಟೇಲ್ ಕಳ್ಳತನ ಆಗುತ್ತೆ. ಅದಾದ ಬಳಿಕ ತಂದೆ ಕುಟುಂಬದೊಂದಿಗೆ ಬನಶಂಕರಿಗೆ ಬಂದು ನೆಲೆಸುತ್ತಾರೆ. ಅಲ್ಲಿನ ಗುಡಿಸಲು ಹಾಕೊಂಡು ವಡೆ ಬೋಂಡಾ ವ್ಯಾಪಾರ ಮಾಡಿಕೊಂಡು, ಅದರ ಸಂಪಾದನೆಯಿಂದ ತರಕಾರಿ ಗಾಡಿ ತಗೊಂಡು, ಅದರಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ. ಗಾಡಿಯಲ್ಲಿ ತರಕಾರಿ ಮಾರಿ ದಿನಕ್ಕೆ 150 ರೂಪಾಯಿ ದುಡಿಯಲು ಕಷ್ಟ ಪಡುತ್ತಿದ್ದರೆಂದು ದುನಿಯಾ ಸೂರಿ ನೆನಪಿಸಿಕೊಂಡಿದ್ದಾರೆ.

ದುನಿಯಾ ಸೂರಿ ತಂದೆ ಮರ್ಡರ್ ಆಯ್ತು

"ಮಾರ್ಕೇಟ್‌ನಲ್ಲಿ ದೊಡ್ಡ ಮಟ್ಟದ ಅಂಗಡಿಗಳು ಓಪನ್ ಆಗುತ್ತೆ. ಅಲ್ಲಿ 10 ಸಾವಿರ ಕೊಟ್ಟರೆ ಚಿಕ್ಕದೊಂದು ಅಂಗಡಿ ಸಿಗುತ್ತೆ ಅಂತ ಯಾರೋ ಹೇಳಿದ್ದಾರೆ. ಇವರು 10 ಸಾವಿರ ರೂಪಾಯಿ ಸಾಲ ಮಾಡುವುದಕ್ಕೆ ಹೋಗುತ್ತಾರೆ. ನನಗೆ ಆಗ ಎಂಟು ವರ್ಷ. ಒಬ್ಬ ಯೆಜಿಡಿಯಲ್ಲಿ ಬರುತ್ತಿದ್ದ. ನಮ್ಮ ತಂದೆ ಅವರ ಜೊತೆ ಹೋಗುತ್ತಿದ್ದರು. ಅದನ್ನೆಲ್ಲ ನೋಡುತ್ತಿದ್ದೆ. ಒಂದು ವಾರದಲ್ಲಿ ಅವನು 10 ಸಾವಿರ ಕೊಡಬೇಕು ಅನ್ನುವ ದಿನಗಳಲ್ಲಿ ಆ ವ್ಯಕ್ತಿಯನ್ನು ಮರ್ಡರ್ ಮಾಡ್ತಾರೆ. ಅವನ ಜೊತೆ ನಮ್ಮ ತಂದೆಯನ್ನೂ ಮರ್ಡರ್ ಮಾಡುತ್ತಾರೆ." ಎಂದು ದುನಿಯಾ ಸೂರಿ ಗಲಾಟಾ ಪ್ಲಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಮೈಂಡ್‌ನಲ್ಲಿ ಅಪ್ಪ ಟ್ರಾವೆಲ್ ಆಗಲ್ಲ"

ಅಪ್ಪ ಅಗಲಿದ ಬಳಿಕ ದುನಿಯಾ ವಿಜಯ್ ಚಿತ್ರಕಲೆಯತ್ತ ವಾಲಿದ್ರು. 10-12ನೇ ವಯಸ್ಸಿನಲ್ಲೇ ದುಡಿಯುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ಅವರ ಪಾಲಿಗೆ ಅಮ್ಮನೇ ಎಲ್ಲ. ಅವರು ಹೇಳಿಕೊಟ್ಟಿದ್ದನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಅದಕ್ಕೆ ಅಮ್ಮನೇ ಅವರ ಮೊದಲ ಗುರು. "ನನ್ನ ಸಿನಿಮಾ ಅದಕ್ಕೆ ಅಪ್ಪ ಡಿಟೈಲ್ಸ್ ಬರೋದಿಲ್ಲ. ನನಗೆ ಅಪ್ಪನ ಪ್ರೀತಿನೇ ಗೊತ್ತಿಲ್ವಲ್ಲ. ನನ್ನ ಮೈಂಡ್‌ನಲ್ಲಿ ಆ ಟ್ರಾವೆಲ್ ಇಲ್ಲ. ನನ್ನ ತಾಯಿ ಜೊತೆನೇ ಬರುತ್ತೆ." ಎಂದು ದುನಿಯಾ ಸೂರು ಹೇಳಿಕೊಂಡಿದ್ದಾರೆ.

More from Filmibeat

English summary
Duniya Suri revealed for the first time about his father murder.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X