Bheema Day 4 Box Office;ಮೊದಲ 3 ದಿನ ಭರ್ಜರಿ ಕಲೆಕ್ಷನ್; 4ನೇ ದಿನದ ಗತಿಯೇನು?
ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ರಿಲೀಸ್ ಆಗದೇ ಒಂದೊಂದು ಒಂದೊಂದು ಥಿಯೇಟರ್‌ಗಳು ಮುಚ್ಚುತ್ತಿವೆ. ಸಿಂಗಲ್ ಸ್ಕ್ರೀನ್‌ಗಳಿಗೆ ಪ್ರೇಕ್ಷಕರು ಹೋಗುತ್ತಲೇ ಇಲ್ಲ. ಕಳೆದ ಒಂದೂವರೆ ಎರಡು ವರ್ಷಗಳಿಂದ ಸ್ಟಾರ್ ಸಿನಿಮಾಗಳು ಇಲ್ಲದೆ ಕೆಲವು ಚಿತ್ರಮಂದಿರಗಳು ಮುಚ್ಚಿವೆ. ಹೀಗೆ ಆದರೆ, ಕನ್ನಡ ಚಿತ್ರರಂಗದ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗುತ್ತೆ ಅನ್ನುವ ಆತಂಕವಿತ್ತು. ಅದೇ ಸಮಯದಲ್ಲಿ ದುನಿಯಾ ವಿಜಯ್ ನಿರ್ದೇಶಿಸಿದ 'ಭೀಮ' ರಿಲೀಸ್ ಆಗಿದೆ.
ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ 'ಭೀಮ' ಪಕ್ಕಾ ಲೋಕಲ್ ಮಾಸ್ ಸಿನಿಮಾ. ಲೋಕಲ್ ಡ್ರಗ್ ಮಾಫಿಯಾದ ವಿರುದ್ಧ ಹೋರಾಡುವ ಕಥೆ. ಹೀಗಾಗಿ ಸಿನಿಮಾ ಬಿಡುಗಡೆಯಾದಲ್ಲಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

'ಭೀಮ' ಬಾಕ್ಸಾಫೀಸ್ ರಿಪೋರ್ಟ್‌ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳೇ ಶಾಕ್ ಆಗಿದ್ದಾರೆ. ಬಿಡುಗಡೆಗೂ ಮುನ್ನವಿದ್ದ ಕ್ರೇಜ್ ನೋಡಿದ್ರೆ, ಈ ಮಟ್ಟಕ್ಕೆ ಸದ್ದು ಮಾಡಬಹುದು ಅನ್ನೋ ನಿರೀಕ್ಷೆ ಇರಲಿಲ್ಲ. ಮೊದಲ ಮೂರು ದಿನ ಬಾಕ್ಸಾಫೀಸ್ ಕಲೆಕ್ಷನ್ ಅದ್ಭುತವಾಗಿದೆ. ಹಾಗೇ ನಾಲ್ಕನೇ ದಿನ ಸ್ವಲ್ಪ ಡ್ರಾಪ್ ಆಗಿದ್ದರೂ, ಡಿಸೆಂಟ್ ಕಲೆಕ್ಷನ್ ಅಂತಲೇ ಹೇಳಲಾಗುತ್ತಿದೆ. ಹಾಗಿದ್ದರೆ, ನಾಲ್ಕನೇ ದಿನದ ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಭೀಮ' ಮೊದಲ ದಿನದ ಕಲೆಕ್ಷನ್ ಮಾಸ್ ಆಗಿತ್ತು. ಮಾಸ್ ಆಡಿಯನ್ಸ್ ಥಿಯೇಟರ್‌ಗೆ ನುಗ್ಗಿದ್ದರು. ಮೊದಲ ದಿನ ಅಂದರೆ ಶುಕ್ರವಾರ ಸಿನಿಮಾದ ಕಲೆಕ್ಷನ್ 4.1 ಕೋಟಿ ರೂಪಾಯಿ (Gross) ಎಂದು ವರದಿಯಾಗಿತ್ತು. ಕೇವಲ ಕನ್ನಡದ ಸಿನಿಮಾವೊಂದು ಮೊದಲ ದಿನ ಈ ಕಲೆಕ್ಷನ್ ಮಾಡಿದ್ದು ಚಿತ್ರತಂಡಕ್ಕೆ ಪಾಸಿಟಿವ್ ಆಗಿತ್ತು. ಹೀಗಾಗಿ ಬಹಳ ದಿನಗಳ ಬಳಿಕ ಸ್ಯಾಂಡಲ್‌ವುಡ್ ಸಿನಿಮಾವೊಂದು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಇನ್ನು ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ ಭಾನುವಾರ 4.3 ಕೋಟಿ ರೂಪಾಯಿ (Gross)ಕಲೆಕ್ಷನ್ ಆಗಿದೆ. ಹಾಗೇ ನಾಲ್ಕನೇ ದಿನ ಅಂದರೆ, ನಿನ್ನೆ (ಆಗಸ್ಟ್ 12) ಸಿನಿಮಾ ಕಲೆಕ್ಷನ್ 1.50 ಕೋಟಿ ರೂಪಾಯಿ (Gross)ಆಗಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಒಟ್ಟು ನಾಲ್ಕು ದಿನಗಳಲ್ಲಿ 13.50 ಕೋಟಿ ರೂಪಾಯಿಂದ 15ರ ಒಳಗೆ ಕಲೆಕ್ಷನ್ ಆಗಿರಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಹಾಕುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಆಗಬಹುದು. ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ ಈ ವಾರ 'ಭೀಮ' ಮತ್ತಷ್ಟು ಪ್ಲಸ್ ಆಗುವ ಸಾಧ್ಯತೆಯಿದೆ. ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ, 'ಭೀಮ' ಸಿನಿಮಾ 20 ರಿಂದ 25 ಕೋಟಿ ರೂಪಾಯಿ ಲೈಫ್ ಟೈಮ್ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಆದರೆ, ಇದೇ ವಾರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡುಗಳಿಂದಲೇ ಪ್ರೇಕ್ಷಕರ ಗಮನ ಸೆಳೆದಿರೋ ತಂಡ ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿದೆ. ಟ್ರೈಲರ್ ಬಿಡದೆ ಕುತೂಹಲ ಮೂಡಿಸಿರುವ ಟೀಮ್ ಗೆಲ್ಲುವ ವಿಶ್ವಾಸವಿದೆ. ಒಂದ್ಮೇಲೆ 'ಕೃಷ್ಣಂ ಪ್ರಯಣ ಸಖಿ'ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೆ 'ಭೀಮ' ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ.


Click it and Unblock the Notifications










