Bheema Box Office Day 7: 7ನೇ ದಿನ ಭರ್ಜರಿ ಕಲೆಕ್ಷನ್; ಗಣೇಶ್ ಸಿನಿಮಾವನ್ನೂ ಹಿಂದಿಕ್ಕಿತೇ 'ಭೀಮ'?

2024ರಲ್ಲಿ ಸ್ಯಾಂಡಲ್‌ವುಡ್‌ಗೆ ಬಾಕ್ಸಾಫೀಸ್‌ನಲ್ಲಿ ಮೊದಲ ಗೆಲುವು ಸಿಕ್ಕಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಭೀಮ' ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಅಂತ ಪ್ರೋವ್ ಮಾಡಿದೆ. ಬಿಡುಗಡೆಯಾದ ದಿನದಿಂದಲೂ 'ಭೀಮ' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಲೇ ಇದೆ. ವಾರದ ಆರಂಭದಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದ್ದ ಸಿನಿಮಾ ನಿರೀಕ್ಷೆಯಂತೆ ಏರಿಕೆ ಕಂಡಿದೆ.

ಆಗಸ್ಟ್ 15ರಿಂದ ಬ್ಯಾಕ್ ಟು ಬ್ಯಾಕ್ ರಜೆ ಇದ್ದಿದ್ದರಿಂದ 'ಭೀಮ' ಸಿನಿಮಾದ ಗಳಿಕೆಯಲ್ಲಿ ಏರಿಕೆಯನ್ನು ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ನಿನ್ನೆ (ಆಗಸ್ಟ್ 15) ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದೆ. ಕನ್ನಡದಲ್ಲಿಯೇ ಎರಡು ಹೊಸ ಸಿನಿಮಾಗಳು ರಿಲೀಸ್ ಆಗಿದ್ದರೂ, ಭೀಮನನ್ನು ಹಿಂದಕ್ಕೆ ಹಾಕುವುದಕ್ಕೆ ಸಾಧ್ಯವಾಗಿಲ್ಲ.

Duniya Vijay Bheema movie Box office collction Day 7 report more the Krishnam Pranaya Sakhi

ದುನಿಯಾ ವಿಜಯ್ ಈ ಸಿನಿಮಾದಲ್ಲಿ ಬಹುತೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಿತ್ತು. ಲೋಕಲ್ ಮಾಸ್ ಸಬ್ಜೆಕ್ಟ್ ಅನ್ನು ತೆರೆಮೇಲೆ ತಂದಿತ್ತು. ಇದರ ಹೊರತಾಗಿಯೂ ಚಿತ್ರಮಂದಿರಗಳು ತುಂಬುತ್ತಿವೆ. ಬಿ ಹಾಗೂ ಸಿ ಸೆಂಟರ್‌ಗಳಲ್ಲಿ 'ಭೀಮ' ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹಾಗಿದ್ದರೆ, 7ನೇ ದಿನದ ಕಲೆಕ್ಷನ್ ಹೇಗಿದೆ ನೋಡೋಣ ಬನ್ನಿ.

'ಭೀಮ' 7ನೇ ದಿನ ಗಳಿಸಿದ್ದೆಷ್ಟು?

'ಭೀಮ' ರಿಲೀಸ್ ಮುನ್ನ ಅಷ್ಟೊಂದು ಹೈಪ್ ಇರಲಿಲ್ಲ. ದುನಿಯಾ ವಿಜಯ್ ಬಿಟ್ಟರೆ, ಜನಪ್ರಿಯ ಫೇಸ್ ಸಿನಿಮಾದಲ್ಲಿ ಇರಲಿಲ್ಲ. ಚರಣ್ ರಾಜ್ ಮ್ಯೂಸಿಕ್ ಹಿಟ್ ಆಗಿತ್ತಷ್ಟೇ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ ಹೊರತಾಗಿಯೂ 'ಭೀಮ' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಬಾಕ್ಸಾಫೀಸ್‌ ಅನ್ನು ಟ್ರ್ಯಾಕ್ ಮಾಡುವ sacnilk ಪ್ರಕಾರ, ನಿನ್ನೆ (ಆಗಸ್ಟ್ 15) 1.38 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಆರಂಭದ ಲೆಕ್ಕಾಚಾರ ಆಗಿದ್ದರಿಂದ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಇಲ್ಲಿವರೆಗೆ ಗಳಿಸಿದ್ದೆಷ್ಟು?

'ಭೀಮ' ಈ ವಾರಾಂತ್ಯದ ಒಳಗೆ 20 ರಿಂದ 25 ಕೋಟಿ ರೂಪಾಯಿ ಒಳಗೆ ಕಲೆಕ್ಷನ್ ಮಾಡಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಭೀಮ ಮೊದಲ ವೀಕೆಂಡ್‌ನಲ್ಲಿ ಅಂದರೆ, ಮೊದಲ ಮೂರು ದಿನದಲ್ಲಿ 12.3 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಆನಂತರ 3.8 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈಗ 7ನೇ ದಿನದ ಕಲೆಕ್ಷನ್ ಸೇರಿ 17.38 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ.

Duniya Vijay Bheema movie Box office collction Day 7 report more the Krishnam Pranaya Sakhi

ಇನ್ನೂ ಮೂರು ದಿನ ಬಾಕಿಯಿದೆ

ಇನ್ನೂ ಮೂರು ದಿನ ರಜೆ ಇರುವುದರಿಂದ 'ಭೀಮ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆ ಆಗಬಹುದು. ವೀಕೆಂಡ್‌ ಬೇರೆ ಬಂದಿರುವುದರಿಂದ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಬಹುದು ಅನ್ನೋ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿರುವ ಲೆಕ್ಕಾಚಾರ. ಇನ್ನು ಮೂರು ದಿನಗಳಲ್ಲಿ ಕಮ್ಮಿ ಅಂದರೂ ಮೂರು ಕೋಟಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಭೀಮ ಕಲೆಕ್ಷನ್ 20 ಕೋಟಿ ರೂಪಾಯಿ ದಾಟಲಿದೆ.

ಗಣೇಶ್ ಸಿನಿಮಾ ಹಿಂದಿಕ್ಕಿದ ಭೀಮ

ನಿನ್ನೆ (ಆಗಸ್ಟ್ 15) ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಹಾಗೂ 'ಗೌರಿ' ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅನ್ನೂ ಮೀರಿ 'ಭೀಮ' ಗಳಿಕೆ ಕಂಡಿದೆ ಎನ್ನಲಾಗಿದೆ. ಎರಡೂ ಚಿತ್ರತಂಡಗಳು ಅಧಿಕೃತವಾಗಿ ಬಾಕ್ಸಾಫೀಸ್ ಗಳಿಕೆಯ ಬಗ್ಗೆ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಅಧಿಕೃತ ಕಲೆಕ್ಷನ್ ರಿಪೋರ್ಟ್ ಹೊರ ಬಂದ್ಮೇಲೆ ಅಸಲಿ ಕಲೆಕ್ಷನ್ ಗೊತ್ತಾಗಲಿದೆ.

More from Filmibeat

English summary
Duniya Vijay Bheema movie shows spike in Box office Day 7 collction:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X