'ಮಾರುತ'ಗೆ ನಾನು ಹೀರೋ ಅಲ್ಲ..ಸುಮ್ಮನೆ ನಾಯಕ ಅನ್ನಬೇಡಿ"; ದುನಿಯಾ ವಿಜಯ್
ಎಸ್.ನಾರಾಯಣ್ ನಿರ್ದೇಶಿಸಿ, ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಿಸಿರುವ 'ಮಾರುತ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ನಿರ್ಮಾಪಕ ಗಂಡುಗಲಿ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಕೂಡ ನಟಿಸಿದ್ದಾರೆ. ಕೆಲವು ದಿನಗಳಿಂದ 'ಮಾರುತ' ಸಿನಿಮಾದ ಪೋಸ್ಟ್‌ಗಳಲ್ಲಿ ದುನಿಯಾ ವಿಜಯ್ ಅವರೇ ಹೈಲೈಟ್ ಆಗಿದ್ದರು.
ಪೋಸ್ಟ್‌ಗಳನ್ನು ನೋಡಿವರಿಗೆ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆಂದು ಭಾವಿಸಲಾಗಿತ್ತು. ಆದ್ರೀಗ ದುನಿಯಾ ವಿಜಯ್ 'ಮಾರುತ' ಸಿನಿಮಾಗೆ ನಾನು ಹೀರೋ ಅಲ್ಲ ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಎಸ್.ನಾರಾಯಣ್ ನಿರ್ದೇಶಿಸಿರುವ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿತ್ತು. ಇದೇ ಅಕ್ಟೋಬರ್ 31ರಂದು ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.

ಸದ್ಯ ದುನಿಯಾ ವಿಜಯ್ ತಮಿಳು ಸಿನಿಮಾ 'ಮುಕುತಿ ಅಮ್ಮನ್ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ 'ಮಾರುತ' ಸಿನಿಮಾ ರಿಲೀಸ್ ಅನೌನ್ಸ್ ಆಗುತ್ತಿದ್ದಂತೆ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆಂದು ಭಾವಿಸಲಾಗಿತ್ತು. ಈಗ ಈ ಗೊಂದಲಗಳಿಗೆ ವಿಜಯ್ ತೆರೆ ಎಳೆದಿದ್ದಾರೆ. ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ನಾಯಕ ನಾನಲ್ಲ.. ನಾನಲ್ಲ
ದುನಿಯಾ ವಿಜಯ್ ಎರಡು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. 'ಸಲಗ' ಹಾಗೂ 'ಭೀಮ' ಎರಡೂ ಸಿನಿಮಾಗಳು ವಿಜಯ್‌ಗೆ ಚಿತ್ರರಂಗದಲ್ಲಿ ಮರುಜೀವ ಕೊಟ್ಟಿವೆ. ಹೀಗಾಗಿ ಚಿತ್ರರಂಗದಲ್ಲಿ ಸೂಪರ್ ಆಕ್ಟಿವ್ ಆಗಿದ್ದರೂ, ಲೆಕ್ಕ ಹಾಕಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಮಗಳಿಗಾಗಿ ಅವರೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮತ್ತೊಬ್ಬ ಮಗಳೊಂದಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಗ್ಯಾಪ್‌ನಲ್ಲಿಯೇ ತಮಿಳು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇಷ್ಟು ಬೆಳೆವಣಿಗಳ ಮಧ್ಯೆ 'ಮಾರುತ' ಕೂಡ ರಿಲೀಸ್‌ಗೆ ರೆಡಿಯಾಗಿದೆ. ಆದರೆ, ಈ ಸಿನಿಮಾಗೆ ನಾನು ಹೀರೋ ಅಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಎಸ್.ನಾರಾಯಣ್-ಕೆ.ಮಂಜುಗಾಗಿ ಸಿನಿಮಾ
'ಮಾರುತ' ಸಿನಿಮಾದಲ್ಲಿ ನಾನು ನಾಯಕ ಅಲ್ಲ ಅಂತ ದುನಿಯಾ ವಿಜಯ್ ಸ್ಪಷ್ಟನೆ ಕೊಟ್ಟಿದ್ದಾರೆ. "ನಿರ್ಮಾಪಕ ಕೆ.ಮಂಜು ಹಾಗೂ ನಿರ್ದೇಶಕ ಎಸ್. ನಾರಾಯಣ್ ಅವರ ಮೇಲೆ ಅಪಾರ ಅಭಿಮಾನ ಮತ್ತು ಗೌರವವಿದೆ. ಈ ಕಾರಣಕ್ಕೆ 'ಮಾರುತ' ಸಿನಿಮಾದಲ್ಲಿ ವಿಶೇಷ ಪಾತ್ರದ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ. ಆದರೆ, ನಾನು ಈ ಸಿನಿಮಾಗೆ ನಾಯಕ ಅಲ್ಲ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ಅವರನ್ನು ಚಿಕ್ಕ ವಯಸ್ಸಿನಿಂದ ಬಲ್ಲೆ. ಅವರಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ" ಎಂದು ದುನಿಯಾ ವಿಜಯ್ ಹೇಳಿದ್ದಾರೆ
'ಲ್ಯಾಂಡ್ ಲಾರ್ಡ್'ನಲ್ಲಿ ಬ್ಯುಸಿ
ದುನಿಯಾ ವಿಜಯ್ ಕನ್ನಡದಲ್ಲಿ 'ಲ್ಯಾಂಡ್ ಲಾರ್ಡ್' ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಪುತ್ರಿ ರಿತಾನ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆಗೆ ಬರುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 'ಕಾಟೇರ' ಸಿನಿಮಾದ ಕಥೆಗಾರ ಜಡೇಶ್ ಕುಮಾರ್ ಹಂಪಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು 'ಸಾರಥಿ' ನಿರ್ಮಾಪಕ ಕೆವಿ ಸತ್ಯ ಪ್ರಕಾಶ್ ಹಾಗೂ ಕೆ.ಎಸ್ ಸೂರಜ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಇದು 1990ರಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ತಂದೆ-ಮಗಳ ಭಾವನಾತ್ಮಕ ಕಥೆ ಆಗಿದೆ.
'ಮೂಕುತಿ ಅಮ್ಮನ್-2' ಶೂಟಿಂಗ್‌ನಲ್ಲಿ ಭಾಗಿ
ದುನಿಯಾ ವಿಜಯ್ ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸಿಸುತ್ತಿದ್ದಾರೆ. ಸದ್ಯ ಚೆನ್ನೈನಲ್ಲಿ 'ಮುಕುತಿ ಅಮ್ಮನ್ 2' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಜನಪ್ರಿಯ ನಿರ್ದೇಶಕ ಸುಂದರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೇ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಿನಿಮಾದಲ್ಲೂ ವಿಜಯ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿಸುತ್ತಿದ್ದಾರೆ.


Click it and Unblock the Notifications











