ದುನಿಯಾ ವಿಜಯ್ ಜೊತೆ ಪುತ್ರಿಯ ಥಿಯೇಟರ್ ರೌಂಡಪ್; ಬೆಳ್ಳಂಬೆಳಗ್ಗೆ ಅಪ್ಪನಿಗೆ ಸಾಥ್ ಕೊಟ್ಟ ಮಗಳು
ಥಿಯೇಟರ್‌ಗೆ ಜನರೇ ಬರುತ್ತಿಲ್ಲ. ಕನ್ನಡ ಸಿನಿಮಾವನ್ನು ಜನರು ನೋಡುವುದಕ್ಕೆ ಇಷ್ಟ ಪಡುತ್ತಿಲ್ಲ ಅನ್ನೋ ಆರೋಪ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ' ಸಿನಿಮಾ ಸದ್ದು ಮಾಡಿದ್ದೇ ಕೊನೆ. ಅದೇ ರಾಜ್ಯದಲ್ಲಿ ದರ್ಶನ್ ನಟಿಸಿದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತಷ್ಟೇ. ಅಲ್ಲಿಂದ ಮತ್ತೆ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಮನಸ್ಸು ಮಾಡಲಿಲ್ಲ.
ಈಗ ದುನಿಯಾ ವಿಜಯ್ 'ಭೀಮ' ಮತ್ತೆ ಜನರು ಥಿಯೇಟರ್‌ಗೆ ಜನರನ್ನು ಕರೆದುಕೊಂಡು ಬರುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಸ್ಟಾರ್ ಸಿನಿಮಾ ಅಂದ್ಮೇಲೆ ಮೊದಲ ಮೂರು ದಿನ ಚಿತ್ರಮಂದಿರಗಳು ತುಂಬಿರುತ್ತೆ. ಆ ಮೇಲೂ ಹೀಗೆ ಥಿಯೇಟರ್‌ಗಳಿಗೆ ಜನರು ಬರುವುದಕ್ಕೆ ಶುರು ಮಾಡಿದರೆ, ಆ ಸಿನಿಮಾ ಗೆದ್ದಂತೆ. ಹೀಗಾಗಿ 'ಭೀಮ' ಥಿಯೇಟರ್‌ಗೆ ಜನರನ್ನು ಸೆಳೆದರೆ, ಬಾಕ್ಸಾಫೀಸ್ ಲೆಕ್ಕಚಾರದಲ್ಲೂ ಗೆದ್ದಂತೆಯೇ.

ಮೊದಲ ದಿನ 'ಭೀಮ' ಇಂತಹದ್ದೊಂದು ಭರವಸೆಯನ್ನಂತೂ ಮೂಡಿಸಿದೆ. ದುನಿಯಾ ವಿಜಯ್ ಸ್ವತ: ಥಿಯೇಟರ್‌ಗೆ ವಿಸಿಟ್ ಕೊಟ್ಟಿದ್ದರು. ವಿಶೇಷ ಅಂದರೆ, ಅವರ ಪುತ್ರಿ ಮೋನಿಕಾ ಕೂಡ ಅಪ್ಪನಿಗೆ ಸಾಥ್ ಕೊಟ್ಟಿದ್ದರು. ಈಗತಾನೇ ಚಿತ್ರರಂಗಕ್ಕೆ ಕಾಲಿಡುತ್ತಿರುವ ವಿಜಯ್ ಪುತ್ರಿ ಮೋನಿಕಾ ಉರ್ಫ್ ರಿತಾನ್ಯಾ ಕೂಡ ವಿಸಿಟ್ ಹಾಕಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ತಂದೆಯೇ ನಿರ್ದೇಶಿಸಿ, ನಟಿಸಿರುವ 'ಭೀಮ' ಸಿನಿಮಾದ ಓಪನಿಂಗ್ ಹೇಗಿರುತ್ತೆ ಅನ್ನೋದನ್ನು ಕಣ್ತುಂಬಿ ಕೊಂಡಿದ್ದಾರೆ. ಮಗಳಿಗೂ ದುನಿಯಾ ವಿಜಯ್ ಗೈಡ್ ಆಗಿ ಬಂದಿದ್ದರು. ಮಗಳ ಜೊತೆ ಜೊತೆಗೆ ನಡೆದಾಡಿ ಇಡೀ ಥಿಯೇಟರ್ ಸುತ್ತಾಡಿದ್ದಾರೆ. ಅಪ್ಪ ಮತ್ತು ಮಗಳು ಇಬ್ಬರೂ ಒಟ್ಟೊಟ್ಟಿಗೆ ಥಿಯೇಟರ್ ಒಳಗೆ ಅಡ್ಡಾಡಿದ್ದಾರೆ. ಪ್ರೊಜಕ್ಷನ್ ರೂಮ್ ಒಳಗೆಲ್ಲಾ ಹೋಗಿ ಸಿನಿಮಾ ನೋಡಿ ದುನಿಯಾ ವಿಜಯ್ ಪುತ್ರಿ ಮೊನಿಶಾ ಎಂಜಾಯ್ ಮಾಡಿದ್ದಾರೆ.

ದುನಿಯಾ ವಿಜಯ್ ಮೊದಲ ಪುತ್ರಿ ಮೊನಿಶಾ ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಮೊದಲ ಸಿನಿಮಾದಲ್ಲಿಯೇ ತಂದೆ ದುನಿಯಾ ವಿಜಯ್ ಜೊತೆನೇ ಮೊನಿಶಾ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. 'ಕಾಟೇರ'ದಂತಹ ಯಶಸ್ವಿ ಸಿನಿಮಾಗೆ ಕಥೆಯನ್ನು ಹೆಣೆದಿರುವ ಜಡೇಶ್ ಹಂಪಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಮೊನಿಕಾಗೆ ಬಂಪರ್ ಆಫರ್ ಸಿಕ್ಕಿದೆ.
ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಬೆನ್ನಲ್ಲೇ ದುನಿಯಾ ವಿಜಯ್ ತಮ್ಮ ಪುತ್ರಿಯ ಹೆಸರನ್ನು ಬದಲಾಯಿಸಿದ್ದರು. ಮೊನಿಕಾ ಬದಲು ರಿತಾನ್ಯಾ ಎಂದು ಬದಲಾಯಿಸಿದ್ದರು. ಅಲ್ಲಿಂದ ಮೊನಿಯಾ ರಿತಾನ್ಯಾ ವಿಜಯ್ ಆಗಿ ಬದಲಾಗಿದ್ದಾರೆ. ಇವರ ತಂಗಿಯ ಹೆಸರು ಮೊನಿಶಾ. ಅವರು ಕೂಡ ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಹೆಸರಿನಲ್ಲಿ ಗೊಂದಲ ಆಗಿದೆ ಇರಲಿ ಅಂತ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಪುತ್ರಿ ಮೋನಿಕಾ ನಟನೆ ವಿಚಾರವಾಗಿ ದುನಿಯಾ ವಿಜಯ್ ಕಾನ್ಫಿಡೆಂಟ್ ಆಗಿದ್ದಾರೆ. ಮೋನಿಕಾ ಮೊದಲ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ತರಬೇತಿಯನ್ನು ಪಡೆದು ಬಂದಿದ್ದಾರೆ. ದುನಿಯಾ ವಿಜಯ್ ತಮ್ಮ ಪುತ್ರಿಗೆ ನಟನೆಯಲ್ಲಿರುವ ಆಸಕ್ತಿ, ಶಿಸ್ತು, ವೃತ್ತಿಪರತೆ ಬಗ್ಗೆ ಖುಷಿಯಾಗಿದ್ದಾರೆ. ಈಗ ತಂದೆಯ ಜೊತೆಗೆ ಚಿತ್ರರಂಗದ ಪ್ರತಿಯೊಂದು ಕೆಲಸವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.


Click it and Unblock the Notifications











