ದುನಿಯಾ ವಿಜಯ್ 'ಸಿಟಿ ಲೈಟ್ಸ್'ನಲ್ಲಿ ಬದುಕೋಕೆ ಬಿಡ್ರೋ.. ಏನಂತಾರೆ ವಿನಯ್, ಮೋನಿಷಾ

'ಸಲಗ', 'ಭೀಮ' ಸಿನಿಮಾದ ಬಳಿಕ ಮತ್ತೊಂದು ಸಿನಿಮಾಗೆ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಅದುವೇ 'ಸಿಟಿ ಲೈಟ್ಸ್'. ದುನಿಯಾ ವಿಜಯ್ ಪುತ್ರಿ ಮೋನಿಷಾ ಚೊಚ್ಚಲ ಬಾರಿಗೆ ಬಣ್ಣ ಹಚ್ಚಿದ್ದು, ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ.

ಸಿನಿಮಾ ಶುರುವಾದಾಗ 'ಸಿಟಿ ಲೈಟ್ಸ್' ಸದ್ದು ಮಾಡಿತ್ತಷ್ಟೇ. ಅಲ್ಲಿಂದ ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಈ ಸಿನಿಮಾದ ಮೊದಲ ಹಾಡನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದು, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹೌದು, ದುನಿಯಾ ವಿಜಯ್‌ ನಿರ್ದೇಶನದ 'ಸಿಟಿ ಲೈಟ್ಸ್‌' ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. "ಬಾವ ಬಾವ.." ಅನ್ನೋ ಸಾಂಗ್ ಮೂಲಕ ದುನಿಯಾ ವಿಜಯ್‌ ಮತ್ತೆ ಹೊಸ ಟ್ರೆಂಡ್ ಹುಟ್ಟಾಕಿದ್ದಾರೆ. ಈ ಮೂಲಕ ಟ್ರೆಂಡಿ ಸಾಂಗ್‌ ಅನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರೆ.

Duniya Vijay directed Vinay Rajkumar Monisha starrer City Lights movie Bava Bava song is trending

'ಸಿಟಿ ಲೈಟ್ಸ್‌'ನ "ಬಾವ ಬಾವ.." ಅನ್ನೋ ಈ ಹಾಡನ್ನು ಅಂಕಿತ್‌ ಕುಮಾರ್‌ ಹಾಡಿದ್ದಾರೆ. ಅಂದ್ಹಾಗೆ ಸಾಹಿತ್ಯ ಕೂಡ ಇವರದ್ದೇ. ಸ್ಯಾಂಡಲ್‌ವುಡ್‌ ಟ್ರೆಂಡಿಂಗ್ ಮ್ಯೂಸಿಕ್ ಡೈರೆಕ್ಟರ್ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ. ಸಂಗೀತ ನಿರ್ದೇಶಕ ಚರಣ್‌ ರಾಜ್‌ ಈ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ದುನಿಯಾ ವಿಜಯ್‌ ಅವರು ಪ್ರತಿ ಬಾರಿ ಹಾಡು ಇದೇ ರೀತಿ ಬೇಕು ಅನ್ನೋ ಒಂದಷ್ಟು ವಿಷಯಗಳನ್ನ ಇಟ್ಟುಕೊಂಡೆ ಬಂದಿರುತ್ತಾರೆ. ಅದು ನನಗೆ ಸಹಾಯವಾಗುತ್ತೆ" ಎಂದು ದುನಿಯಾ ವಿಜಯ್ ಬಗ್ಗೆ ಹೇಳಿದ್ದಾರೆ.

ಇನ್ನು "ಬಾವ ಬಾವ.." ಹಾಡನ್ನ ಬರೆದು ಹಾಡಿರೋ ಅಂಕಿತ್‌ ಕುಮಾರ್‌ "ನನ್ನ ಹಳೆ ಹಾಡುಗಳನ್ನ ನೋಡಿ ನಮ್ಮ ತಂಡವನ್ನ ಕರೆಸಿ ಅವಕಾಶ ಕೊಟ್ರು. ವಿಜಿ ಸರ್‌ ಅವಕಾಶ ಕೊಡ್ತಾರೆ ಅಂತ ಯಾವತ್ತು ಅನ್ಕೊಂಡಿರಲಿಲ್ಲ" ಎಂದು ಅಂಕಿತ್ ದುನಿಯಾ ವಿಜಯ್‌ಗೆ ಧನ್ಯವಾದಗಳನ್ನು ಹೇಳಿದರು.

'ಸಿಟಿ ಲೈಟ್ಸ್‌' ಹೀರೋ ನಟ ವಿನಯ್‌ ರಾಜ್‌ ಕುಮಾರ್‌ ಕೂಡ ಹಾಡಿನ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. "ಚರಣ್‌ ಸರ್‌ಗೆ ಒಂದು ಒಳ್ಳೆಯ ಸಾಂಗ್‌ ಕೊಡಿ ಅಂತ ಕೇಳಿದ್ದೆ. ಆದರೆ, ಅವರು ಐದು ಹಾಡುಗಳನ್ನು ಕೊಟ್ಟಿದ್ದಾರೆ. ಖುಷಿ ಆಗ್ತಿದೆ" ಎಂದು ವಿನಯ್ ರಾಜ್‌ಕುಮಾರ್ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ ಸಿನಿಮಾದ ನಾಯಕಿ, ದುನಿಯಾ ವಿಜಯ್ ಪುತ್ರಿ ನಟಿ ಮೋನಿಷಾ ಚೊಚ್ಚಲ ಸಿನಿಮಾ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ವಿನಯ್‌ ರಾಜ್‌ ಕುಮಾರ್‌ ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ತುಂಬಾ ವಿಚಾರಗಳನ್ನ ಕಲಿತಿದ್ದೇನೆ" ಎಂದು ಖುಷಿ ಪಟ್ಟಿದ್ದಾರೆ.

Duniya Vijay directed Vinay Rajkumar Monisha starrer City Lights movie Bava Bava song is trending

ನಟ-ನಿರ್ದೇಶಕ ದುನಿಯಾ ವಿಜಯ್‌ "ರ್ಯಾಪ್‌ ಹಾಡು ಯಾವಾಗಲು ಕಷ್ಟಗಳನ್ನು ಹೇಳಿಕೊಳ್ಳಲು ಬಳಸುವ ಹಾಡಾಗಿದೆ. ಸಿಟಿಲೈಟ್ಸ್‌ನಲ್ಲಿ ನೋವು ಎನ್ನಿಸೋ ವಿಚಾರವನ್ನ ಹೇಳಲು ಹೊರಟಿದ್ದೇನೆ. ಈ ಕಥೆಗೆ ವಿನಯ್‌ ಅವ್ರೇ ಬೇಕಿತ್ತು. ಪರ್ಸನಲಿ ನನಗೆ ವಿನಯ್‌ ಇಷ್ಟ" ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಸದ್ಯ "ಬಾವ ಬಾವ.." ರ್ಯಾಪ್‌ ಸ್ಟೈಲ್‌ ಹಾಡು ಬಿಡುಗಡೆ ಆಗಿದ್ದು, ಇದರ ಮೂಲಕವೇ 'ಸಿಟಿ ಲೈಟ್ಸ್‌' ಸಿನಿಮಾದ ಪ್ರಮೋಷನ್‌ ಶುರುವಾಗಿದೆ.

'ಸಿಟಿ ಲೈಟ್ಸ್'ನಲ್ಲಿ ಸಿನಿಮಾಗೆ "ಜವಾಬ್ ದಾರಿ...ದೀಪಗಳು ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಶಿವಸೇನಾ ಕ್ಯಾಮರಾ ವರ್ಕ್ ಮಾಡಿದ್ದಾರೆ. ದೀಪು ಎಸ್.ಕುಮಾರ್ ಎಡಿಟಿಂಗ್, ಮಾಸ್ತಿ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್‌ ಹಾಗೂ ಯಂತ್ರೋದ್ದಾರಕ ಬ್ಯಾನರ್‌ನಲ್ಲಿ ವಿಜಯ್‌ ಕುಮಾರ್‌ ಹಾಗೂ ವಿಕ್ರಂ ಆರ್ಯಾ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

English summary
Duniya Vijay directed Vinay Rajkumar, Monisha starrer City Lights movie Bava Bava song is trending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X